2027ರ ವಿಶ್ವಕಪ್​ ಬೇಟೆಗೆ ರಣವ್ಯೂಹ – 20 ಆಟಗಾರರ ಲಿಸ್ಟ್.. IPL ಟೆಸ್ಟ್!
RO-KOಗಿಲ್ವಾ ಚಾನ್ಸ್.. ಹೇಗಿದೆ ಟೀಂ?

2027ರ ವಿಶ್ವಕಪ್​ ಬೇಟೆಗೆ ರಣವ್ಯೂಹ – 20 ಆಟಗಾರರ ಲಿಸ್ಟ್.. IPL ಟೆಸ್ಟ್!RO-KOಗಿಲ್ವಾ ಚಾನ್ಸ್.. ಹೇಗಿದೆ ಟೀಂ?

ಭಾರತ ಈಗ ವಿಶ್ವಕ್ರಿಕೆಟ್​ನೇ ರೂಲ್ ಮಾಡ್ತಿದೆ.  ಮೆನ್ಸ್ ಟೀಂ, ವುಮೆನ್ಸ್ ಟೀಂ ಅಷ್ಟೇ ಯಾಕೆ ಅಂಡರ್ 19ನಲ್ಲೂ ನಾವೇ ಚಾಂಪಿಯನ್ಸ್.. ಕಳೆದ ಮೂರು ವರ್ಷಗಳಲ್ಲೇ ಐದು ಐಸಿಸಿ ಟ್ರೋಫಿಗಳನ್ನ ಗೆದ್ದಿದ್ದಾರೆ. ಌಂಡ್ ಇತ್ತೀಚೆಗೆ ಒಂದು ಕೊರತೆ ಅನ್ನಿಸ್ತಿರೋದು ಏಕದಿನ ವಿಶ್ವಕಪ್. 2023ರಲ್ಲಿ ಜಸ್ಟ್ ಮಿಸ್ ಆಗಿರೋ ಪ್ರತಿಷ್ಠಿತ ಟ್ರೋಫಿಯನ್ನ 2027ಕ್ಕೆ ಗೆಲ್ಲಲೇಬೇಕು ಅಂತಾ ಬಿಸಿಸಿಐ ಪಣ ತೊಟ್ಟಿದೆ. ಅದಕ್ಕಾಗಿ ರಣತಂತ್ರಗಳನ್ನೂ ಸ್ಟಾರ್ಟ್ ಮಾಡಿದೆ. ವಿಶ್ವಕಪ್ ಯುದ್ಧಕ್ಕಾಗಿ 20 ರಣಬೇಟೆಗಾರರ ಹೆಸರೂ ಫೈನಲ್ ಆಗಿದೆ.

ಇದನ್ನೂ ಓದಿ : RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್!‌ – ಟಿಕೆಟ್‌ ಮಾರಾಟಕ್ಕೆ ಡೇಟ್‌ ಅನೌನ್ಸ್!‌

2024ರ ಟಿ-20 ವಿಶ್ವಕಪ್, 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಹಾಗೇ 2026ರಲ್ಲಿ ಟಿ-20 ವಿಶ್ವಕಪ್ ಗೆದ್ದಿರೋ ಭಾರತ ಈಗ 2027ರ ವಿಶ್ವಕಪ್ ಮೇಲೂ ಕಣ್ಣಿಟ್ಟಿದೆ. ಹೀಗಾಗೇ ಇನ್ನೂ ಒಂದೂವರೆ ವರ್ಷ ಇರುವಾಗ್ಲೇ ಸಿದ್ಧತೆ ಶುರು ಮಾಡಿದೆ. ಬಿಸಿಸಿಐ ಈಗಾಗಲೇ 20 ಆಟಗಾರರ ಫೈನಲ್ ಲಿಸ್ಟ್ ರೆಡಿ ಮಾಡಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೇ ನಮೀಬಿಯಾದಲ್ಲಿ ನಡೆಯಲಿರುವ ಈ ಟೂರ್ನಿಗೆ, ಆಯ್ಕೆ ಮಂಡಳಿ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದಲ್ಲಿ, ಐಪಿಎಲ್ ಸೇರಿದಂತೆ ವಿವಿಧ ಪಂದ್ಯಗಳಲ್ಲಿ ಈ 20 ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಡಲಿದೆ. ಇದಕ್ಕೆ ಪೂರಕವಾಗಿ ಏಕದಿನ ಸರಣಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಪ್ಲಾನ್ ರೂಪಿಸಿದೆ.

20 ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಡಲು ಟೀಂ ರೆಡಿ!

2027ರ ವಿಶ್ವಕಪ್​ನ ಪ್ರತಿಷ್ಠೆಯಾಗಿ ತಗೊಂಡಿರೋ ಬಿಸಿಸಿಐ ಪವರ್​ಫುಲ್ ಆಗೇ ಪ್ಲ್ಯಾನ್ ಗಳನ್ನ ಮಾಡಿದೆ. ಐಪಿಎಲ್ ವೇಳೆ ಅಜಿತ್ ಅಗರ್ಕರ್ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಮಂಡಳಿಯ ಸದಸ್ಯರಾದ ಎಸ್ಎಸ್ ದಾಸ್, ಆರ್ ಪಿ ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ 20 ಆಟಗಾರರನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಲಿಸ್ಟ್​ನಲ್ಲಿರೋ 20 ಆಟಗಾರರ ಪಂದ್ಯಗಳ ವೇಳೆ ಆಯ್ಕೆದಾರರು ಸ್ಟೇಡಿಯಮ್​ಗೇ ಹೋಗಿ ವೀಕ್ಲಿ ಒನ್ಸ್ ಆದ್ರೂ ಮ್ಯಾಚ್​ ನೋಡ್ಬೇಕು. ಹಾಗೇ ಟಿವಿಗಳಲ್ಲಿ ವಾರಕ್ಕೆ 5 ಮ್ಯಾಚ್ ಆದ್ರೂ ನೋಡ್ಬೇಕು. ಹೀಗೆ ಟೋಟಲ್ಲಾಗಿ ವಾರದಲ್ಲಿ 6 ಪಂದ್ಯಗಳನ್ನ ಮಾನಿಟರಿಂಗ್ ಟೀಂನವ್ರು ನೋಡಲೇಬೇಕು. ಸದ್ಯಕ್ಕಿರೋ ರಿಪೋರ್ಟ್​ಗಳ ಪ್ರಕಾರ ಟೀಂ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮುಂಬೈನಲ್ಲಿ ನಡೆಯುವ ಪಂದ್ಯಗಳ ಮೇಲೆ ಕಣ್ಣಿಟ್ಟರೆ, ಶಿವಸುಂದರ್ ದಾಸ್ ಕೋಲ್ಕತ್ತಾ, ಆರ್.ಪಿ. ಸಿಂಗ್ ಮತ್ತು ಅಜಯ್ ರಾತ್ರ ದೆಹಲಿಯಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಉಳಿದಂತೆ ಪ್ರಗ್ಯಾನ್ ಓಜಾ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯುವ ಕೆಲವು ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ. ಪ್ರಸ್ತುತ ಪೇಸ್ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅರ್ಷದೀಪ್ ಸಿಂಗ್ ಹೆಸರು ಲಿಸ್ಟ್​ನಲ್ಲಿದೆ. ಹಾಗೇ ಈ ಸಲ ಏಕದಿನಕ್ಕೆ ಹಾರ್ದಿಕ್ ಪಾಂಡ್ಯ ಹೆಸರೂ ಜಾಯ್ನ್ ಆಗ್ತಿದೆ. ಇನ್ನು ಬ್ಯಾಟಿಂಗ್ ಅಂತಾ ಬಂದಾಗ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಕೂಡ ಪಟ್ಟಿಯಲ್ಲಿದ್ದಾರೆ. ಌಂಡ್ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಕೂಡ ಬ್ಯಾಕಪ್ ಆಗಿ ಇದ್ದಾರೆ. ಈ 20 ಆಟಗಾರರಿಗೆ ಈಗ ಐಪಿಎಲ್​ ಎಂಟ್ರೆನ್ಸ್ ಟೆಸ್ಟ್ ಆಗಲಿದೆ. ಇಲ್ಲಿ ಧೂಳೆಬ್ಬಿಸಿದ್ರೆ ಬಿಸಿಸಿಐ ಆಯ್ಕೆ ಸಮಿತಿ ಇವ್ರ ಮೇಲೆ ಕಣ್ಣಿಡಲಿದೆ.

ಟೀಂ ಇಂಡಿಯಾ ಐಸಿಸಿ ಟೂರ್ನಮೆಂಟ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡ್ತಿದೆ. ಟಿ20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಟ್ರೋಫಿ, ಚಾಂಪಿಯನ್ಸ್ ಟ್ರೋಫಿ, ವುಮೆನ್ಸ್ ವಿಶ್ವಕಪ್, ಅಂಡರ್ 19 ವಿಶ್ವಕಪ್ ಹೀಗೆ ಎಲ್ಲದ್ರಲ್ಲೂ ಭಾರತವೇ ಬಾಸ್ ಆಗಿ ಮೆರೀತಿದೆ. ಈಗ 2027ಕ್ಕೂ ಏಕದಿನ ವಿಶ್ವಕಪ್ ಗೆದ್ದುಬಿಟ್ರೆ ಚಾಂಪಿಯನ್​ಗಳ ಚಾಂಪಿಯನ್ ಆದಂತೆಯೇ ಲೆಕ್ಕ.

Shantha Kumari