KING is always KING – ODIನ ಅನಭಿಶಕ್ತ ದೊರೆ ವಿರಾಟ್
ಕೊಹ್ಲಿ ನಿವೃತ್ತಿ ಕೇಳಿದವ್ರ ಗರ್ವಭಂಗ

King is always king ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಬ್ಯಾಟ್ ಹಿಡಿದು ನಿಂತ್ರೆ ಈಗಲೂ ನಾನು ಹಸಿದ ಹೆಬ್ಬುಲಿಯೇ ಅನ್ನೋದನ್ನ ಕಿಂಗ್ ವಿರಾಟ್ ಕೊಹ್ಲಿ ಸಾಧಿಸಿ ತೋರಿಸಿದ್ದಾರೆ. ರಾಂಚಿಯ ಮೈದಾನದಲ್ಲಿ ವಿಶ್ವದಾಖಲೆಯ ಶತಕ ಬಾರಿಸಿ ಹೀಯಾಳಿಸಿದವರ ಸೊಕ್ಕಿಳಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದಿರೋ ಭಾರತ ಸರಣಿಯಲ್ಲಿ ಲೀಡ್ ಸಾಧಿಸಿದೆ. ಈ ಪಂದ್ಯದಲ್ಲಿ ಒನ್ ಮನ್ ಶೋ ತರ ಪರ್ಫಾರ್ಮೆನ್ಸ್ ನೀಡಿದ್ದು ಕಿಂಗ್ ವಿರಾಟ್ ಕೊಹ್ಲಿ. ಮಹೇಂದ್ರ ಸಿಂಗ್ ಧೋನಿಯ ಹೋಂ ಟೌನ್ ರಾಂಚಿಯಲ್ಲಿ ವಿರಾಟ ರೂಪ ತೋರಿಸಿದ್ದಾರೆ. ವಿರಾಟ್ ಕೊಹ್ಲಿಗೆ ನಾವು ಬೇಕಿಲ್ಲ ಆದ್ರೆ ನಮಗೆ ಅವ್ರ ಅವಶ್ಯಕತೆ ಇದೇ ಅಂತ ಅವತ್ತು ಜಸ್ಪ್ರೀತ್ ಬುಮ್ರಾ ಹೇಳಿದ್ದ ಮಾತು ಅಕ್ಷರಶ: ಸತ್ಯವಾಗಿದೆ. ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿಯೇ ಅನಭಿಶಕ್ತ ದೊರೆ ಅನ್ನೋದನ್ನ ಜಗತ್ತು ಮತ್ತೊಮ್ಮೆ ಒಪ್ಪಿಕೊಂಡಿದೆ.
ಇದನ್ನೂ ಓದಿ : 334ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ದಿತ್ವಾ ಚಂಡಮಾರುತ! – 370 ಕ್ಕೂ ಹೆಚ್ಚು ನಾಪತ್ತೆ
ಸೌತ್ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ವಿಶ್ವದಾಖಲೆ!
ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಆರ್ಭಟಿಸಿದ್ದಾರೆ. 102 ಎಸೆತಗಳಲ್ಲಿ 103 ರನ್ ಬಾರಿಸೋ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 52ನೇ ಶತಕ ಸಿಡಿಸಿದ್ರು. ರಾಂಚಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 120 ಎಸೆತಗಳಲ್ಲಿ 11 ಫೋರ್ ಹಾಗೂ 7 ಸಿಕ್ಸರ್ನೊಂದಿಗೆ ಬರೋಬ್ಬರಿ 135 ರನ್ ಚಚ್ಚಿದ್ದರು. ಈ ಭರ್ಜರಿ ಶತಕದೊಂದಿಗೆ ಒಂದೇ ಸ್ವರೂಪದಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯ ತಮ್ಮದಾಗಿಸಿಕೊಂಡರು. ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿಯವ್ರ 52ನೇ ಏಕದಿನ ಶತಕ ಇದು. ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರಾಗಿದ್ದಾರೆ.
ಒಂದು ಸೆಂಚುರಿ ಮೂಲಕ ಹಲವು ದಾಖಲೆ ಬರೆದ ವಿರಾಟ್!
ವೃತ್ತಿಜೀವನದಲ್ಲಿ ಟೆಸ್ಟ್ ಸ್ವರೂಪದಲ್ಲಿ 51 ಶತಕಗಳನ್ನು ಗಳಿಸಿದ ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ರು. 2023ರಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಕ್ರಿಕೆಟಿಗರಾಗಿದ್ರು. ಸಚಿನ್ ಏಕದಿನ ಪಂದ್ಯಗಳಲ್ಲಿ 49 ಶತಕಗಳನ್ನು ಗಳಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆಟಗಾರರಾಗಿದ್ದಾರೆ. ಇಲ್ಲಿಯವರೆಗೆ 32 ಪಂದ್ಯಗಳಲ್ಲಿ ಆರು ಶತಕಗಳನ್ನು ಗಳಿಸಿದ್ದಾರೆ. ಈ ಶತಕದ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಈ ಶತಕವು ಅಂತಾರಾಷ್ಟ್ರೀಯ ಕ್ರಿಕೆಟ್ನ 7,000ನೇ ಸೆಂಚುರಿ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟು 7 ಸಾವಿರ ಶತಕಗಳು ಮೂಡಿಬಂದಿವೆ. ಇದರಲ್ಲಿ 7000ನೇ ಶತಕ ಬಾರಿಸಿದ್ದು ವಿರಾಟ್ ಕೊಹ್ಲಿ. ಹೀಗಾಗಿಯೇ ರಾಂಚಿಯಲ್ಲಿ ಕಿಂಗ್ ಕೊಹ್ಲಿ ಬಾರಿಸಿದ ಶತಕ ವಿಶೇಷ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ.
ವಿರಾಟ್ ವಿರಾಟ ರೂಪಕ್ಕೆ ಕ್ರಿಕೆಟ್ ಜಗತ್ತೇ ಕ್ಲೀನ್ ಬೌಲ್ಡ್!
ರಾಂಚಿಯಲ್ಲಿ ಶತಕ ಸಿಡಿಸಿರೋ ವಿರಾಟ್ ಆರ್ಭಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಲೆಜೆಂಡರಿ ಕ್ರಿಕೆಟರ್ಸ್ ಎಲ್ರೂ ಕಿಂಗ್ ಅಬ್ಬರಕ್ಕೆ ಶಹಬ್ಬಾಸ್ ಹೇಳಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ವಿರಾಟ್ ರ ಗುಣಗಾನ ಮಾಡಿದ್ದಾರೆ. ಇನ್ನು ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಉತ್ತಮ ಲಯದಲ್ಲಿ ಇದ್ದೇನೆ ಅನ್ನೋ ಮೂಲಕ ಬಿಸಿಸಿಐಗೆ ಖಡಕ್ ಸಂದೇಶ ರವಾನಿಸಿದ್ರು. ಹಾಗೇ ಟೆಸ್ಟ್ ಕ್ರಿಕೆಟ್ ಕಮ್ ಬ್ಯಾಕ್ ಬಗ್ಗೆಯೂ ಸ್ಪಷ್ಟನೆ ನೀಡಿದ್ರು. ನಾನು ಇನ್ನು ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಕ್ರಿಕೆಟ್ ಮಾತ್ರ ಆಡುತ್ತೇನೆ ಎಂದು ಹೇಳುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಹಿಂತಿರುಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಯಾಕೆ ಇಂಪಾರ್ಟೆಂಟ್ ಅನ್ನೋದು ಈಗ ಜಗಜ್ಜಾಹೀರಾಗಿದೆ. ವಿರಾಟ್ ಮೈದಾನದಲ್ಲಿ ಇದ್ದೊಷ್ಟು ಹೊತ್ತು 140 ಕೋಟಿ ಭಾರತೀಯರು ಕಂಫರ್ಟ್ ಝೋನ್ನಲ್ಲಿ ಇರ್ತಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ನಿವೃತ್ತಿಗೆ ಒತ್ತಡ ಹೆಚ್ಚಾಗ್ತಿದೆ ಅನ್ನೋ ಆರೋಪದ ನಡುವೆ ಭಾನುವಾರದ ಪಂದ್ಯದಲ್ಲಿ ವಿರಾಟ್ ತುಂಬಾನೇ ಕಾನ್ಫಿಡೆನ್ಸ್ನಿಂದ ಬ್ಯಾಟ್ ಬೀಸಿದ್ರು. ಏಜ್ ಈಸ್ ಜಸ್ಟ್ ನಂಬರ್ ಅಷ್ಟೇ ಅಂತಾ ಯಂಗ್ಸ್ಟರ್ಸ್ ಕೂಡ ನಾಚುವಂತೆ ಅಬ್ಬರಿಸಿದ್ರು. ಅಂತೂ ಹಾಲಿಡೇ ಮೂಡ್ನಲ್ಲಿದ್ದ ಭಾರತೀಯರಿಗೆ ಸಂಡೇ ಸೂಪರ್ ಸಂಡೇ ಆಗಿದ್ದಂತೂ ಸುಳ್ಳಲ್ಲ.

ನೋಡಿರಿ

