KING ಫೈರ್ ಗೆ ಬೆಂಡಾದ BCCI – ODIನಲ್ಲಿ ವಿರಾಟ್ ಕೊಹ್ಲಿಯೇ ಬಾಸ್!
2027ರ ವಿಶ್ವಕಪ್ ಗೆ ತಡೆಯೋರೇ ಇಲ್ಲ

ವಿರಾಟ್ ಕೊಹ್ಲಿ.. ಟೀಂ ಇಂಡಿಯಾ ಅಷ್ಟೇ ಅಲ್ಲ ಇಡೀ ಕ್ರಿಕೆಟ್ ಜಗತ್ತೇ ಮೆಚ್ಚಿನ ರನ್ ಮಷಿನ್. ಇನ್ನೇನು ಕ್ರಿಕೆಟ್ ಕರಿಯರ್ ಮುಗ್ದೇ ಹೋಯ್ತು.. ನಿವೃತ್ತಿ ತಗೊಂಡ್ ಬಿಡ್ಲಿ ಅಂತಾ ಬಿಸಿಸಿಐನ ಬಾಸ್ಗಳೇ ಹೇಳಿದ್ರು. ಆದ್ರೆ ಆಟ ಅಂತಾ ಬಂದಾಗ ವಿರಾಟ್ ಈಗ್ಲೂ ಉಗ್ರರೂಪಿಯಾಗ್ತಾರೆ. ಆಸೀಸ್ ಸಿರೀಸ್ನಲ್ಲಿ ಬ್ಯಾಕ್ ಟು ಬ್ಯಾಕ್ ಡಕ್ ಔಟ್ ಆಗಿದ್ದ ಕೊಹ್ಲಿ ಈಗ ಅಕ್ಷರಶಃ ವಿರಾಟ ರೂಪ ತಾಳಿದ್ದಾರೆ. ವಿಜಯ್ ಹಜಾರೆಯಲ್ಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. 2027ರ ವಿಶ್ವಕಪ್ನಲ್ಲಿ ನನಗೆ ಚಾನ್ಸ್ ಕೊಡ್ಲೇಬೇಕು ಎನ್ನುವಂತೆ ಮೆಸೇಜ್ ಪಾಸ್ ಮಾಡಿದ್ದಾರೆ.
ಇದನ್ನೂ ಓದಿ : RCBಗೆ ಬಿಸಿತುಪ್ಪವಾದ ಯಶ್ ದಯಾಳ್ – ಬೇಲ್ ಅರ್ಜಿ ವಜಾ.. ಅರೆಸ್ಟ್ ಆಗ್ತಾರಾ?
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಮೊದಲ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಡಕ್ಔಡ್ ಆಗಿದ್ರು. ಅದೂ ಕೂಡ ತಮ್ಮ ಕರಿಕರ್ನಲ್ಲೇ ಫಾರ್ ದಿ ಫಸ್ಟ್ ಟೈಂ ಸತತ 2 ಬಾರಿ ಸೊಹ್ನೆ ಸುತ್ತಿದ್ದು. ವಿರಾಟ್ ಔಟ್ ಆಗಿದ್ದಕ್ಕೆ ಸಾಕಷ್ಟು ಟ್ರೋಲ್ ಮಾಡಿದ್ರು.. ಟೀಕೆಗಳು ಕೇಳಿ ಬಂದಿದ್ವು. ಬಿಸಿಸಿಐನಲ್ಲೂ ಬಿಸಿಬಿಸಿ ಚರ್ಚೆಯಾಗ್ತಿತ್ತು. ಆದ್ರೆ ಇದೆಲ್ಲವನ್ನೂ ತಮ್ಮ ಬ್ಯಾಟ್ ಮೂಲಕವೇ ಕೊಹ್ಲಿ ಸೈಲೆಂಟ್ ಮಾಡಿದ್ದಾರೆ. ಅದೂ ಲಿಸ್ಟ್ ಎ ಕ್ರಿಕೆಟ್ನಲ್ಲಿ ಬೆಂಕಿ ಪರ್ಫಾಮೆನ್ಸ್ ನೀಡ್ತಿದ್ದಾರೆ.
ಸೌತ್ ಆಫ್ರಿಕಾ ಸರಣಿ ಬಳಿಕ ವಿಜಯ್ ಹಜಾರೆಯಲ್ಲೂ ಅಬ್ಬರ!
ಆಸ್ಟ್ರೇಲಿಯಾ ಸರಣಿಯ ಮೊದಲ 2 ಪಂದ್ಯಗಳಲ್ಲಿ ಖಾತೆ ತೆರೆಯದೇ ಔಟಾಗಿದ್ದ ಕೊಹ್ಲಿ ಮೂರನೇ ಮ್ಯಾಚಲ್ಲಿ ಅಜೇಯ ಅರ್ಧಶತಕ ಬಾರಿಸಿದ್ರು. ಆ ನಂತ್ರ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ್ರು. ಇದೇ ಅದ್ಭುತ ಫಾರ್ಮ್ನಲ್ಲೇ ಡೊಮೆಸ್ಟಿಕ್ ಕ್ರಿಕೆಟ್ನಲ್ಲೂ ಸದ್ದು ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಆಂಧ್ರ ವಿರುದ್ಧ ಭರ್ಜರಿ ಬ್ಯಾಟಿಂಗ್ ಶತಕ ಬಾರಿಸಿದ್ರು. ಈಗ ಗುಜರಾತ್ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
ಲಿಸ್ಟ್ ಎ ಕ್ರಿಕೆಟ್ ನಲ್ಲಿ ಸತತ 6 ಬಾರಿ 50+ ಸ್ಕೋರ್!
ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಈಗ ಲಿಸ್ಟ್-ಎ ಕ್ರಿಕೆಟ್ನಲ್ಲಿ ಸತತ ಆರು ಬಾರಿ ಐವತ್ತು ಪ್ಲಸ್ ಸ್ಕೋರ್ ಮಾಡಿದ್ದಾರೆ. ಸೋ ಈ ಫಾರ್ಮೆಟ್ನಲ್ಲಿ ತಾನು ಯಾವತ್ತಿದ್ರೂ ದಿ ಬೆಸ್ಟ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಸತತ 6 ಪಂದ್ಯಗಳಲ್ಲಿ 50+ ರನ್ಸ್!
ಎದುರಾಳಿ ಮಾದರಿ ರನ್ಸ್
ಆಸ್ಟ್ರೇಲಿಯಾ 3ನೇ ಏಕದಿನ 74*
ಸೌತ್ ಆಫ್ರಿಕಾ 1ನೇ ಏಕದಿನ 135
ಸೌತ್ ಆಫ್ರಿಕಾ 2ನೇ ಏಕದಿನ 102
ಸೌತ್ ಆಫ್ರಿಕಾ 3ನೇ ಏಕದಿನ 65*
ಆಂಧ್ರಪ್ರದೇಶ ವಿಜಯ್ ಹಜಾರೆ 131
ಗುಜರಾತ್ ವಿಜಯ್ ಹಜಾರೆ 77
ಸದ್ಯ ಲಿಸ್ಟ್ ಎ ಕ್ರಿಕೆಟ್ನಲ್ಲಿ 16 ಸಾವಿರ ರನ್ಸ್ ಕಂಪ್ಲೀಟ್ ಮಾಡಿದ್ದಾರೆ. ಸಚಿನ್ ಅವ್ರ ದಾಖಲೆಯನ್ನೂ ಬ್ರೇಕ್ ಮಾಡಿದ್ದಾರೆ. ಆದ್ರೆ ಈ ಹಿಂದೆ ಭಾರತದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ 2027 ರ ವಿಶ್ವಕಪ್ ಆಡುವುದು ಕಷ್ಟಸಾಧ್ಯ ಅಂದಿದ್ರು. ಬಟ್ ಇಬ್ಬರೂ ಕೂಡ ನಾವಿನ್ನೂ ಕ್ರಿಕೆಟ್ ಆಡಬಲ್ಲೆವು. ನಮ್ಮಲ್ಲಿನ್ನೂ ಆ ಶಕ್ತಿ ಇದೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಮುಂಬೈ ಪರ ವಿಜಯ್ ಹಜಾರೆಯ ಮೊದಲ ಪಂದ್ಯದಲ್ಲಿ ರೋಹಿತ್ ಕೂಡ ಶತಕ ಬಾರಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಪ್ರಸಕ್ತ ವರ್ಷ ಭಾರತದ ಪರ ಒಟ್ಟು 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 65ರ ಸರಾಸರಿಯಲ್ಲಿ 651 ರನ್ ಕಲೆ ಹಾಕಿದ್ದು, ಇದರಲ್ಲಿ 3 ಶತಕ ಹಾಗೂ 4 ಅರ್ಧಶತಕಗಳು ಸೇರಿವೆ. ಇವರ ಬ್ಯಾಟ್ನಿಂದ ಈ ವರ್ಷ ಒಟ್ಟ 54 ಬೌಂಡರಿ, 13 ಸಿಕ್ಸರ್ಗಳ ಹರಿದು ಬಂದಿವೆ. ಅಷ್ಟೇ ಅಲ್ಲದೆ ಫೀಲ್ಡಿಂಗ್ನಲ್ಲೂ ವಿರಾಟ್ ಟಾಪ್ನಲ್ಲೇ ಇದ್ದಾರೆ. ಈ ವರ್ಷ ಭಾರತದ ಪರ ಅತಿ ಹೆಚ್ಚು ಕ್ಯಾಚ್ಗಳನ್ನು ವಿರಾಟ್ ಕೊಹ್ಲಿ ಪಡೆದಿದ್ದಾರೆ. 16 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ 2027ರ ಏಕದಿನ ವಿಶ್ವಕಪ್ ಆಡೋಕೆ ನಾನು ರೆಡಿ ಅಂತಾ ಬಿಸಿಸಿಐಗೆ ಮೆಸೇಜ್ ಪಾಸ್ ಮಾಡಿದ್ದಾರೆ. ಸೋ ರೋಹಿತ್ ಮತ್ತು ಕೊಹ್ಲಿ ಇಬ್ರನ್ನೂ ವಿಶ್ವಕಪ್ನಿಂದ ಹೊರಗಿಡೋಕೆ ಬಿಸಿಸಿಐಗೆ ಈಗ ಯಾವ ನೆಪಗಳೂ ಉಳಿದಿಲ್ಲ.

ನೋಡಿರಿ

