ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡಿದ ಜಯಪ್ರಕಾಶ್ ಹೆಗ್ಡೆ – ವರದಿಯಲ್ಲಿ ಏನಿದೆ?

ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡಿದ ಜಯಪ್ರಕಾಶ್ ಹೆಗ್ಡೆ – ವರದಿಯಲ್ಲಿ ಏನಿದೆ?

ರಾಜ್ಯ ರಾಜಕೀಯದಲ್ಲಿ ಭಾರಿ ಕಿಚ್ಚು ಹಚ್ಚಿದ್ದ ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಶಾಶ್ವತ ಹಿಂದುಳಿದ ಆಯೋಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಜಾತಿ ಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹೆಚ್ಚು ಸುದ್ದು ಮಾಡಿದ ವಿಷಯಗಳಲ್ಲಿ ಈ ಜಾತಿ ಗಣತಿ ವರದಿ ಸಲ್ಲಿಕೆ ವಿಚಾರವೂ ಒಂದಾಗಿದೆ. ಇದೀಗ ತೀವ್ರ ವಿರೋಧದ ನಡುವೆಯೂ ಜಾತಿ ಗಣತಿ ವರದಿ ಸಲ್ಲಿಕೆಯಾಗಿದೆ. ಜಯಪ್ರಕಾಶ್ ಹೆಗಡೆಯವರು ಗುರುವಾರ ವಿಧಾನಸೌಧದಲ್ಲಿ ಒಟ್ಟು 13 ಪ್ರತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಟರ್ ಸ್ಟ್ರೈಕ್! – ನೀರು ನಿಲ್ಲಿಸಿದ್ಯಾಕೆ ಮೋದಿ?

ಜಾತಿ ಗಣತಿ ವರದಿ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಜಯಪ್ರಕಾಶ್ ಹೆಗ್ಡೆ ಅವರು 2014-15ರಲ್ಲಿ ದತ್ತಾಂಶ ಸಂಗ್ರಹ ಮಾಡಿದ್ದ ವರದಿಯನ್ನು ಸಿಎಂಗೆ ಸಲ್ಲಿಸಿದ್ದೇವೆ. ಸಿಎಂ ಮುಂದಿನ ಸಂಪುಟ ‌ಸಭೆಯಲ್ಲಿ ವರದಿಯನ್ನು ಇಡುವುದಾಗಿ ಹೇಳಿದ್ದಾರೆ. ನಾವು ವರದಿ ಸರ್ಕಾರಕ್ಕೆ ನೀಡಿದ್ದೇವೆ. ಮುಂದಿನ ಬೆಳವಣಿಗೆ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತೆ. ಸಂಪೂರ್ಣ ವರದಿ ಓದದೆ ಜಾತಿಗಣತಿ ವರದಿ ಅವೈಜ್ಞಾನಿಕ ಅನ್ನೋದು ಸರಿಯಲ್ಲ. ಈ ವರದಿಯಲ್ಲಿ ಎಲ್ಲಾ ಸದಸ್ಯರ ಸಹಿ ಇದೆ. ಇದು ಕಾಂತರಾಜ್ ವರದಿಗೆ ಉತ್ತರ ನೀಡುವ‌ ವರದಿಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಕಾಂತರಾಜ್ ವರದಿ ಸ್ವೀಕಾರ ಮಾಡಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಜಾತಿ ಗಣತಿ ವರದಿ ಸ್ವೀಕರಿಸಿದ್ದೇನೆ. ಜಾತಿ ಗಣತಿ ವರದಿಯಲ್ಲಿ ಏನಿದೆ ಎಂದು ನಾನು ನೋಡಿಲ್ಲ. ಕ್ಯಾಬಿನೆಟ್​​ನಲ್ಲಿ ಜಾತಿಗಣತಿ ವರದಿ ಚರ್ಚೆ ಮಾಡುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳತ್ತೇವೆ ಎಂದು ಹೇಳಿದರು.

ಸಚಿವ ಶಿವರಾಜ್ ತಂಗಡಗಿ ಅವರು ಇದು ಜಾತಿ ಗಣತಿ ವರದಿ ಅಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ವರದಿ. ಈ ವರದಿಗೆ ಯಾರದ್ದು ವಿರೋಧ ಇಲ್ಲ. ಈಗ ವರದಿ ಸ್ವೀಕಾರ ಮಾಡ್ತೀವಿ. ಅದ್ರಲ್ಲಿ ಏನ್ ಮಾಹಿತಿ ಇದೆ ಗೊತ್ತಿಲ್ಲ. ವರದಿಯನ್ನು ಯಾರು ನೋಡಿಲ್ಲ ಈಗ ಸಲ್ಲಿಕೆಯಾಗ್ತಿದೆ ಹೀಗಾಗಿ ಅಸಮಾಧಾನ ಪ್ರಶ್ನೆ ಇಲ್ಲ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ ಅವರು, ಈ ಹಿಂದೆ ಹೆಚ್‌.ಡಿ ಕುಮಾರಸ್ವಾಮಿಯವರು ಸ್ವೀಕರಿಸಿರಲಿಲ್ಲ. ಇದೀಗ ಸಿದ್ದರಾಮಯ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಈಗಲಾದ್ರೂ ಒಬಿಸಿ ಸಮುದಾಯಗಳಿಗೆ ನ್ಯಾಯ ಸಿಗಲಿ ಎಂದಿದ್ದಾರೆ.

Shwetha M