ಕಿವಿ ಹಿಂಡಿದ ಬೌಲರ್ಸ್ – 134 ರನ್ ಗಳಿಗೇ ಸುಸ್ತಾದ NZ
ಬ್ರಾರ್, ನಬಿ, ಅನ್ಶುಲ್ MAGIC

ಕಿವಿ ಹಿಂಡಿದ ಬೌಲರ್ಸ್ – 134 ರನ್ ಗಳಿಗೇ ಸುಸ್ತಾದ NZಬ್ರಾರ್, ನಬಿ, ಅನ್ಶುಲ್ MAGIC

ಟಿ20ಐ ಸಿರೀಸ್​​ಗೂ ಓಡಿಐ ಸಿರೀಸ್​ಗೂ ಟೀಂ ಇಂಡಿಯಾ ಬೌಲಿಂಗ್​ನಲ್ಲಿ ಎಷ್ಟು ಡಿಫ್ರೆನ್ಸಸ್ ನೋಡಿ. ಅಲ್ಲಿ ಪ್ರತೀ ಬೌಲರ್ ಕೂಡ ಎಕ್ಸ್​ಪೆನ್ಸಿವ್ ಆಗ್ತಿದ್ರು. ಬಟ್ ಇಲ್ಲಿ ಎವೆರಿ ಬೌಲರ್ ಕೂಡ ಜಾದೂ ಮಾಡ್ತಿದ್ದಾರೆ. ಟೀಂ ಇಂಡಿಯಾ ಬೌಲರ್​ಗಳ ಅಟ್ಯಾಕ್​ಗೆ ಕಿವೀಸ್ ಪಡೆ ಅಕ್ಷರಶಃ ಥಂಡಾ ಹೊಡೆದಿದೆ.

ಇದನ್ನೂ ಓದಿ : ಕ್ಯಾಪ್ಟನ್ ಆಗಿ ಸೂರ್ಯ ಕಂಬ್ಯಾಕ್ – ಟೆಸ್ಟ್‌ ಅಖಾಡಕ್ಕೆ ಬುಮ್ರಾ ಎಂಟ್ರಿ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗೆ ಮಳೆ ಕಾಟ ಮಾತ್ರ ತಪ್ಪುತ್ತಾ ಇಲ್ಲ. ಫಸ್ಟ್ ಮ್ಯಾಚಲ್ಲೂ ಮಳೆ ಕಣ್ಣಾಮುಚ್ಚಾಲೆ ನಡುವೆ ಭಾರತ ಗೆದ್ದಿತ್ತು. ಈಗ ಎರಡನೇ ಪಂದ್ಯದಲ್ಲೂ ಮಳೆಯಿಂದಾಗಿ ಪಂದ್ಯ 1 ಗಂಟೆ ಲೇಟಾಗಿ ಸ್ಟಾರ್ಟ್ ಆಯ್ತು. ಹೀಗಾಗಿ ಪಂದ್ಯವನ್ನ 50 ಓವರ್​ಗಳ ಬದಲು 47 ಓವರ್​ಗಳಿಗೆ ಸೀಮಿತ ಮಾಡಲಾಗಿತ್ತು. ಹೀಗಿದ್ರೂ ಎರಡನೇ  ಪಂದ್ಯದಲ್ಲೂ ಟೀಂ ಇಂಡಿಯಾ ಬೌಲರ್​ಗಳದ್ದೇ ದರ್ಬಾರ್. ಫಸ್ಟ್ ಮ್ಯಾಚಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಕಿವೀಸ್ 40.2ಓವರ್​ಗಳಲ್ಲೇ 185ಕ್ಕೆ   ಆಲೌಟ್ ಆಗಿದ್ರು. ಈಗ ವೆಲ್ಲಿಂಗ್ಟನ್​ನಲ್ಲಿ ನಡೆಯುತ್ತಿರೋ ಎರಡನೇ ಮ್ಯಾಚಲ್ಲೂ ಟಾಸ್ ಸೋತ ಕಿವೀಸ್ ಬ್ಯಾಟಿಂಗ್​ನಲ್ಲಿ ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಭಾರತದ ಬೌಲಿಂಗ್ ದಾಳಿಗೆ ಧೂಳೀಪಟವಾಗಿದ್ದಾರೆ.

ಕಿವೀಸ್ ಬ್ಯಾಟರ್ ಗಳಿಗೆ ನೀರಿಳಿಸಿದ ಗುರ್ನೂರ್ ಬ್ರಾರ್!

ಮೊದಲ ಮ್ಯಾಚಲ್ಲಿ ಒನ್ ಸೈಡೆಡ್ ಆಗಿ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲೂ ಟಾಸ್ ಗೆದ್ದು ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಭಾರತದ ಪರ ಈ ಪಂದ್ಯಕ್ಕೆ ಪ್ಳೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸೇಮ್ ಕಾಂಬಿನೇಷನ್​ನೇ ಕಂಟಿನ್ಯೂ ಮಾಡಿದ್ರು. ಌಂಡ್ ಇದು ವರ್ಕೌಟ್ ಕೂಡ ಆಯ್ತು.

ಕಿವೀಸ್ ಪೆವಿಲಿಯನ್ ಪರೇಡ್!

ಟಾಸ್ ಸೋತು ವಿಲ್ ಯಂಗ್ & ಟಿಮ್ ಸೈಫರ್ಟ್ ಇನ್ನಿಂಗ್ಸ್ ಆರಂಭ

2ನೇ ಓವರ್ ನಲ್ಲೇ ಸೈಫರ್ಟ್ ವಿಕೆಟ್ ತೆಗೆದ ನಬಿ.. ಪವರ್ ಪ್ಲೇನಲ್ಲಿ 23/3 ವಿಕೆಟ್

ಯಂಗ್ 6, ಸೈಫರ್ಟ್ 0, ಹೆನ್ರಿ ನಿಕೋಲ್ಸ್ 11, ಡೇರಿಲ್ ಮಿಚೆಲ್ 55 ರನ್ಸ್

ಟಾಮ್ ಲಾಥಮ್ 7, ಫಿಲಿಪ್ಸ್ 0, ಸ್ಯಾಂಟ್ನರ್ 31, ಸ್ಮಿತ್ 3, ಜೇಮಿಸನ್ 7

41 ಓವರ್ ಗಳಲ್ಲಿ 134 ರನ್ಸ್ ಕಲೆ ಹಾಕಿ ಆಲೌಟ್ ಆದ ಕಿವೀಸ್ ಬ್ಯಾಟರ್ಸ್

ಭಾರತದ ಪರ ಬ್ರಾರ್ 10 ಓವರ್ ಗಳಲ್ಲಿ 30/4 ವಿಕೆಟ್.. ಕಾಂಬೋಜ್ 25/2

ಅಕ್ಷರ್ ಪಟೇಲ್ 9 ಓವರ್ಸ್, 28/2, ಔಕಿಬ್ ನಬಿ 7 ಓವರ್ಸ್.. 31/2 ವಿಕೆಟ್

ಹೀಗೆ ಭಾರತದ ಪರ ಎಲ್ಲಾ ಬೌಲರ್ ಗಳ ಕಡೆಯಿಂದಲೂ ಕೂಡ ಬೆಸ್ಟ್ ಪರ್ಫಾಮೆನ್ಸ್ ಬಂತು. ಫಸ್ಟ್ ಮ್ಯಾಚಲ್ಲಿ 4 ವಿಕೆಟ್ಸ್ ಬೇಟೆಯಾಡಿದ್ದ ಅರ್ಷದೀಪ್ ಸಿಂಗ್ ಎರಡನೇ ಪಂದ್ಯದಲ್ಲಿ ಯಾವುದೇ ವಿಕೆಟ್ಸ್ ತೆಗೆಯೋಕೆ ಸಾದ್ಯ ಆಗಿಲ್ಲ. ಆದ್ರೆ 7 ಓವರ್ ಗಳಲ್ಲಿ ಕೇವಲ 13 ರನ್ಸ್ ನೀಡಿದ್ದು ಎಫೆಕ್ಟಿವ್ ಆಗಿತ್ತು. ಇನ್ನು ಕೇವಲ 134 ರನ್​ಗಳಿಗೆ ಆಟ ಮುಗಿಸಿದ ಕಿವೀಸ್ ಪಡೆ ತವರಿನಲ್ಲಿ ಭಾರತದ ವಿರುದ್ಧ ಲೋಯೆಸ್ಟ್ ಓಡಿಐ ಟಾರ್ಗೆಟ್ ಸೆಟ್ ಮಾಡಿದ ಕಳಪೆ ದಾಖಲೆಗೂ ಕಾರಣವಾಯ್ತು. ಹೀಗೆ ಭಾರತ ಬೌಲಿಂಗ್​ನಲ್ಲಿ ಅಕ್ಷರಶಃ ಕಿವೀಸ್ ಆಟಗಾರರ ಬೆವರಿಳಿಸಿದ್ರು.

Shantha Kumari

Leave a Reply

Your email address will not be published. Required fields are marked *