ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಪಲ್ಟಿ – ಭಾರತದ ಕೈಯಲ್ಲಿ PAK ಭವಿಷ್ಯ

ದಶಕಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಆಯೋಜನೆ ಮಾಡಲು ಅವಕಾಶ ಸಿಕ್ಕಿತ್ತು. ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಪಟ್ಟ ಇತ್ತು. ತವರಲ್ಲೇ ಮ್ಯಾಚ್ ನಡೆಯೋ ಅಡ್ವಾಂಟೇಜ್ ತಗೊಳ್ಬೋದಿತ್ತು. ಹೀಗೆ ಸಾಲು ಸಾಲು ಪ್ಲಸ್ಗಳಿದ್ರೂ ಪಾಕಿಸ್ತಾನ ಮೊದಲ ಪಂದ್ಯದಲ್ಲೇ ಡುಮ್ಕಿ ಹೊಡೆದಿದೆ. ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯ ಕರಾಚಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಆತಿಥೇಯ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿದೆ. ಅಷ್ಟಕ್ಕೂ ಪಾಕ್ನ ಸೋಲಿಗೆ ಅವ್ರದ್ದೇ ಆಟಗಾರರೇ ಕಾರಣರಾಗಿದ್ದಾರೆ.
ಇದನ್ನೂ ಓದಿ : ತವರಲ್ಲೇ ಹೀನಾಯವಾಗಿ ಸೋತ ಪಾಕ್ – ನ್ಯೂಜಿಲೆಂಡ್ಗೆ ಭರ್ಜರಿ ಜಯ
ಉದ್ಘಾಟನಾ ಪಂದ್ಯದಲ್ಲೇ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಬ್ಯಾಟಿಂಗ್ ಪರ್ಫಾಮೆನ್ಸ್ ಚೆನ್ನಾಗಿತ್ತು. ಓಪನರ್ ಆಗಿ ಕಣಕ್ಕಿಳಿದ ವಿಲ್ ಯಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಆದ್ರೆ ಎರಡು, ಮೂರು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಪ್ಲೆಯರ್ಸ್ ಯಾರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲೇ ಇಲ್ಲ. ಡೆವೊನ್ ಕಾನ್ವೆ, ಡೇರಿ ಮಿಚೆಲ್ ತಲಾ 10 ರನ್‌ಗಳಿಗೆ ಔಟಾದ್ರು. ಕೇನ್ ವಿಲಿಯಮ್ಸನ್ ಡಕ್ಔಟ್ ಆದ್ರು. 73 ರನ್‌ಗಳಿಗೆ 3 ವಿಕೆಟ್ ಉರುಳಿಯಾಗಿತ್ತು. ಬಟ್ ಐದನೇ ಕ್ರಮಾಂಕದಲ್ಲಿ ಬಂದ ಟಾಮ್ ಲ್ಯಾಥಮ್ ಅದ್ಭುತ ಫಾರ್ಮ್ನಲ್ಲಿದ್ರು. ಒಂದ್ಕಡೆ ವಿಲ್ ಯಂಗ್ ಮತ್ತೊಂದ್ಕಡೆ ಟಾಮ್ ಇಬ್ಬರೂ ಸೇರಿ ರನ್ಗಳ ಮಳೆ ಸುರಿಸಿದ್ರು. ವಿಲ್ ಯಂಗ್ 113 ಎಸೆತಗಳಲ್ಲಿ 12 ಫೋರ್, 1 ಸಿಕ್ಸ್ನೊಂದಿಗೆ 107 ರನ್ ಕಲೆ ಹಾಕಿದ್ರೆ ಟಾಮ್ 104 ಎಸೆತಗಳಲ್ಲಿ 10 ಫೋರ್, 3 ಸಿಕ್ಸ್ನೊಂದಿಗೆ 118 ರನ್ ಬಾರಿಸಿದ್ರು. ಹಾಗೇ ಗ್ಲೆನ್ ಫಿಲಿಪ್ಸ್ ಕೂಡ 39 ಎಸೆತಗಳಲ್ಲೇ 61 ರನ್ ಬಾರಿಸಿದ್ರು. ಈ ಮೂಲಕ ನ್ಯೂಜಿಲೆಂಡ್ ತಂಡ 50 ಓವರ್ಗಳಲ್ಲೇ5 ವಿಕೆಟ್ ನಷ್ಟಕ್ಕೆ 320 ರನ್ ಗಳಿಸಿತು.
ಕಿವೀಸ್ ಪಡೆ ನೀಡಿದ್ದ 321 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ 50 ಓವರ್ಗಳನ್ನೂ ಕಂಪ್ಲೀಟ್ ಮಾಡ್ಲಿಲ್ಲ. ಹಾಲಿ ಚಾಂಪಿಯನ್ ತಂಡ 47.2 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ಪರ ಖುಸ್ದಿಲ್ ಶಾ ಮತ್ತು ಬಾಬರ್ ಆಝಂ ಅರ್ಧಶತಕ ಬಾರಿಸಿದ್ರೂ ಗೆಲುವು ಸಾಧ್ಯವಾಗ್ಲಿಲ್ಲ. ಆರಂಭದಲ್ಲೇ ಆಮೆಗತಿಯ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮೊದಲ 10 ಓವರ್‌ಗಳಲ್ಲಿ ಕೇವಲ 22 ರನ್‌ಗಳಿಸಿತು. ಈ ಮೂಲಕ ಆರಂಭದಲ್ಲೇ ಪಂದ್ಯವನ್ನ ಕೈಚೆಲ್ಲಿದ್ರು. ಅದ್ರಲ್ಲೂ ಪಾಕಿಸ್ತಾನಕ್ಕೆ ದೊಡ್ಡ ಸಮಸ್ಯೆಯಾಗಿದ್ದು ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ. ಬಾಬರ್ ಅಜಂ ಓಪನರ್ ಆಗಿ ಬಂದ್ರೂ ಆರಂಭದಿಂದ ಕೊನೆಯವರೆಗೂ ಬ್ಯಾಟ್ ಬೀಸೋಕೆ ತಿಣುಕಾಡಿದ್ರು. ಇಡೀ ಇನ್ನಿಂಗ್ಸ್ನಲ್ಲಿ ಆಮೆಗತಿಯ ಬ್ಯಾಟಿಂಗ್ ಮಾಡಿ 90 ಎಸೆತಗಳಲ್ಲಿ 64 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಖುಷ್ದಿಲ್ ಷಾ ಕೇವಲ 49 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಿದರೂ, ಸೋಲಿನಿಂದ ತಪ್ಪಿಸಿಕೊಳ್ಳೋಕೆ ಆಗ್ಲಿಲ್ಲ.
ಮೊದಲ ಪಂದ್ಯದಲ್ಲೇ ಗೆದ್ದು ಬೀಗಿರೋ ನ್ಯೂಜಿಲೆಂಡ್ ತಂಡ ಫೆಬ್ರವರಿ 24ರಂದು ಬಾಂಗ್ಲಾದೇಶದ ವಿರುದ್ಧ ತನ್ನ 2ನೇ ಪಂದ್ಯವನ್ನಾಡಲಿದೆ. ಇತ್ತ ಸೋತಿರುವ ಪಾಕಿಸ್ತಾನ ಫೆಬ್ರವರಿ 23ರಂದು ಭಾರತದ ವಿರುದ್ಧ ಮಾಡು ಇಲ್ಲವೆ ಮಡಿ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಪಾಕ್ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. ಯಾಕಂದ್ರೆ ಮೊದಲ ಪಂದ್ಯದಲ್ಲಿ ಗೆದ್ದಿರುವ ನ್ಯೂಝಿಲೆಂಡ್ ತಂಡವು ಮುಂದಿನ ಎರಡು ಮ್ಯಾಚ್ಗಳಲ್ಲಿ ಒಂದು ಜಯ ಸಾಧಿಸಿದರೆ ಸಾಕು. ಇಲ್ಲಿ ಕಿವೀಸ್ ಪಡೆಯ ಎದುರಾಳಿಗಳು ಬಾಂಗ್ಲಾದೇಶ್ ಮತ್ತು ಭಾರತ. ಅಂದರೆ ಭಾರತದ ವಿರುದ್ಧ ಸೋತರೂ, ನ್ಯೂಝಿಲೆಂಡ್ ಬಾಂಗ್ಲಾದೇಶದ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಅದರಂತೆ ನ್ಯೂಝಿಲೆಂಡ್ ತಂಡವನ್ನು ಸೆಮಿಫೈನಲ್ನಲ್ಲಿ ಎದುರು ನೋಡಬಹುದು. ಇತ್ತ ಬಲಿಷ್ಠ ಟೀಮ್ ಇಂಡಿಯಾ ಕೂಡ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳನ್ನು ಬಗ್ಗು ಬಡಿಯೋದಂತೂ ಗ್ಯಾರಂಟಿ. ಈ ಮೂಲಕ ಭಾರತ ತಂಡ ಕೂಡ ಸೆಮಿಫೈನಲ್ಗೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಫೆಬ್ರವರಿ 23 ರಂದು ನಡೆಯಲಿರುವ ಭಾರತದ ವಿರುದ್ಧದ ಹೈವೋಲ್ಟೇಜ್ ಪಂದ್ಯದ ಮೂಲಕ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧಾರವಾಗಲಿದೆ.