ಪೋಲಿ ಪೋಲಿ ಮೆಸೆಜ್‌ಗಳನ್ನೇ ಕಳುಹಿಸುತ್ತಿದ್ದ ನರ್ಸಿಂಗ್ ಆಫೀಸರ್! – ಸಿನಿಮಾ ಶೈಲಿಯಲ್ಲಿ ಆಸ್ಪತ್ರೆಗೆ ನುಗ್ಗಿದ ಪೊಲೀಸ್
ಉತ್ತರಾಖಂಡದ ಏಮ್ಸ್ ಆಸ್ಪತ್ರೆಯಲ್ಲಿ ಕಾಮುಕ ಆಫೀಸರ್ ಒಬ್ಬ ಸಿಕ್ಕಿಬಿದ್ದಿದ್ದಾನೆ. ನರ್ಸಿಂಗ್ ಆಫೀಸರ್ ಒಬ್ಬ ಆಸ್ಪತ್ರೆಯಲ್ಲಿರುವ ಸರ್ಸ್‌ಗಳಿಗೆ, ಮಹಿಳಾ ವೈದ್ಯರಿಗೆ ಅಶ್ಲೀಲವಾಗಿ ಮೆಸೆಜ್ ಹಾಕುತ್ತಿದ್ದಾತನನ್ನು ಬಾಲಿವುಡ್ ದಬಾಂಗ್ ಸಿನಿಮಾ ಶೈಲಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: CSK ವಿರುದ್ಧ ಹೀರೋ! – RR ಎದುರು ಝೀರೋ! -RCB ಮಾಡಿದ ತಪ್ಪೇನು?
ರಿಷಿಕೇಶ ಏಮ್ಸ್ ಆಸ್ಪತ್ರೆಯಲ್ಲಿರುವ ನರ್ಸಿಂಗ್ ಆಫೀಸರ್ ಸತೀಶ್ ಕುಮಾರ್ ಎಂಬಾತ ಜ್ಯೂನಿಯರ್ ಮಹಿಳಾ ಡಾಕ್ಟರ್ಸ್‌ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರು ದಾಖಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಡೆಹ್ರಾಡೂನ್ ಪೊಲೀಸರು ಬಾಲಿವುಡ್ ದಬಾಂಗ್ ಸಿನಿಮಾ ಶೈಲಿಯಲ್ಲಿ ಏಮ್ಸ್ ಆಸ್ಪತ್ರೆಯೊಳಗೆ ಜೀಪ್ ನುಗ್ಗಿಸಿದ್ದಾರೆ. ಆಸ್ಪತ್ರೆಯೊಳಗೆ ಪೊಲೀಸ್ ಜೀಪ್ ತಂದು ಮಹಿಳಾ ಡಾಕ್ಟರ್‌ಗೆ ಲೈಂಗಿಕ ಕಿರುಕುಳ ನೀಡಿದ್ದ ನರ್ಸಿಂಗ್ ಆಫೀಸರ್ ಸತೀಶ್ ಕುಮಾರ್ ಅನ್ನು ಬಂಧಿಸಿದ್ದಾರೆ.
ಅಶ್ಲೀಲ ಮೆಸೇಜ್‌ಗಳನ್ನು ಮಾಡುತ್ತಿದ್ದ ನರ್ಸಿಂಗ್ ಸ್ಟಾಫ್ ಬಂಧಿಸಲು ವೈದ್ಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಿಷಿಕೇಶ ಏಮ್ಸ್ ಆಸ್ಪತ್ರೆಯ 4ನೇ ಮಹಡಿಯ ಎಮೆರ್ಜೆನ್ಸಿ ವಾರ್ಡ್‌ನೊಳಗೆ ಪೊಲೀಸ್ ಜೀಪು ತರಲಾಗಿದೆ. ವಾರ್ಡ್‌ನೊಳಗೆ ವಾಹನದಲ್ಲಿ ನರ್ಸಿಂಗ್ ಆಫೀಸರ್ ಅನ್ನು ಬಂಧನ ಮಾಡಲಾಗಿದೆ. ಆಸ್ಪತ್ರೆ ವಾರ್ಡ್‌ನಲ್ಲಿದ್ದ ರೋಗಿಗಳ ಬೆಡ್‌ಗಳನ್ನು ಪಕ್ಕಕ್ಕೆ ಸರಿಸಿ ಆಸ್ಪತ್ರೆ ಸೆಕ್ಯುರಿಟಿ ಸಿಬ್ಬಂದಿ ಪೊಲೀಸ್ ವಾಹನಕ್ಕೆ ಜಾಗ ಮಾಡಿಕೊಟ್ಟಿದ್ದಾರೆ.
ನರ್ಸಿಂಗ್ ಆಫೀಸರ್ ಆಗಿದ್ದ ಸತೀಶ್ ಕುಮಾರ್ ಅವರು ಮಹಿಳಾ ಡಾಕ್ಟರ್‌ಗಳಿಗೆ ಅಶ್ಲೀಲ MMSಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಇವನ ಕಾಟಕ್ಕೆ ರೋಸಿ ಹೋದ ಮಹಿಳಾ ಸಹೋದ್ಯೋಗಿಗಳು ಸತೀಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿ ಇವನ ಪೋಲಿ ಕಾಟಕ್ಕೆ ಬ್ರೇಕ್ ಹಾಕಿದ್ದಾರೆ. ರಿಷಿಕೇಶ ಏಮ್ಸ್ ಆಸ್ಪತ್ರೆಯ ಒಳಗೆ ಪೊಲೀಸ್ ಜೀಪ್ ಬಂದು ಅರೆಸ್ಟ್ ಮಾಡಲಾಗಿದೆ.