ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿ ನರ್ಸ್ಆ ತ್ಮಹತ್ಯೆ – ಕೆಲಸ ಮುಗಿಸಿ ಮನೆಗೆ ಹೋದವಳಿಗೆ ಆಗಿದ್ದೇನು?

ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿ ನರ್ಸ್ಆ ತ್ಮಹತ್ಯೆ – ಕೆಲಸ ಮುಗಿಸಿ ಮನೆಗೆ ಹೋದವಳಿಗೆ ಆಗಿದ್ದೇನು?

ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್ಆ ತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುಡುಬ ಸಮೀಪ ನಡೆದಿದೆ. ಮೃತರನ್ನು ಎನ್.ಆ‌ರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ನಿವಾಸಿ ರನ್ಯಾ ಬೇಸಿಲ್ (30) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: 12 ವರ್ಷಗಳ ಬಳಿಕ ಆಂಧ್ರ ಪ್ರದೇಶದ ರಾಜಧಾನಿ ಷೋಷಣೆೆ – ಇನ್ಮುಂದೆ ಯಾವುದು ಗೊತ್ತಾ ಆಂಧ್ರ ರಾಜಧಾನಿ

ರನ್ಯಾ  ಶಿವಮೊಗ್ಗದ ಪ್ರತಿಷ್ಠಿತ ‘ನಾರಾಯಣ ಹೃದಯಾಲಯ  ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರನ್ಯಾ ಅವರು ಸೋಮವಾರ ಸಂಜೆ ಶಿವಮೊಗ್ಗದಲ್ಲಿ ತಮ್ಮ ಕೆಲಸ ಮುಗಿಸಿ ಮುತ್ತಿನಕೊಪ್ಪದ ಮನೆಗೆ ಮರಳಿದ್ದರು. ಮನೆಗೆ ಬಂದ ಕೆಲವೇ ಹೊತ್ತಿನಲ್ಲಿ ಮತ್ತೆ ಹೊರಗೆ ಹೋದವರು, ಮುಡುಬ ಸಮೀಪದ ಸೇತುವೆಯ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರನ್ಯಾ ಅವರ ಆತ್ಮಹತ್ಯೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಕುಟುಂಬಸ್ಥರಲ್ಲಿ ಈ ಘಟನೆ ತೀವ್ರ ಆಘಾತ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ರಕ್ಷಣಾ ತಂಡದವರು ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kishor KV