ಪುಷ್ಪಾ- 2 ಪೋಸ್ಟರ್‌ಗೆ ‘ನಂಬರ್ 1’ ಸ್ಥಾನ – ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಲ್ಲು ಅರ್ಜುನ್

ಪುಷ್ಪಾ- 2 ಪೋಸ್ಟರ್‌ಗೆ ‘ನಂಬರ್ 1’ ಸ್ಥಾನ – ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಲ್ಲು ಅರ್ಜುನ್

ಅಲ್ಲು ಅರ್ಜುನ್. ತೆಲುಗು ಸೂಪರ್ ಸ್ಟಾರ್​ ಈಗ ಮತ್ತೆ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪಾ-2 ಚಿತ್ರದ ಟೀಸರ್​ ಮತ್ತು ಪೋಸ್ಟರ್ ರಿಲೀಸ್ ಆಗಿದ್ದು, ಭಾರತದ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ, ಅಲ್ಲು ಅರ್ಜುನ್ ಬಹುನಿರೀಕ್ಷಿತ ಚಿತ್ರ ಪುಷ್ಪಾ ಮತ್ತೊಮ್ಮೆ ಬಾಕ್ಸಾಫೀಸ್​​ನಲ್ಲಿ ಧೂಳೆಬ್ಬಿಸೋದು ಬಹುತೇಕ ಖಚಿತವಾಗಿದೆ. ಈ ಸಿನಿಮಾದ ಕಥೆಗಿಂತಲೂ ಅಲ್ಲು ಅರ್ಜುನ್​ ಅವರ ರಗಡ್ ಅವತಾರ ಮತ್ತು ಡೈಲಾಗ್​ ಡೆಲಿವರಿ ನೋಡಲು ಜನರು ಥಿಯೇಟರ್​​ಗೆ ಮುಗಿಬೀಳುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇದನ್ನೂ ಓದಿ:  ಪಠಾಣ್ ಹೀರೋ ‘ನಂಬರ್ 1’ – 100 ಪ್ರಭಾವಿ ವ್ಯಕ್ತಿಗಳಲ್ಲಿ ‘ಶಾರುಖ್ ಖಾನ್’ ಬೆಸ್ಟ್..!

ಪುಷ್ಪಾ-2 ಪೋಸ್ಟರ್​​ನಲ್ಲಿ ಅಲ್ಲು ಅರ್ಜುನ್​ರ ಹೊಸ ಲುಕ್ ಈಗ ಸೆಂಟರ್​ ಆಫ್ ಅಟ್ರಾಕ್ಷನ್ ಆಗಿದೆ. ಈ ಒಂದು ಪೋಸ್ಟರ್​​ನಿಂದಲೇ ಪುಷ್ಪಾ-2 ಸಿನಿಮಾಗೆ ಮೈಲೇಜ್ ಸಿಗ್ತಿದೆ. ಸೋಷಿಯಲ್​ ಮೀಡಿಯಾದಲ್ಲಂತೂ ಈ ಪೋಸ್ಟರ್​​​ ಹೊಸ ಕ್ರಾಂತಿಯನ್ನೇ ಎಬ್ಬಿಸಿದೆ. ಎಲ್ಲಿ ನೋಡಿದ್ರೂ ಪುಷ್ಪಾ ಪೋಸ್ಟರ್​ಗಳು ಹರಿದಾಡ್ತಿದೆ. ಟ್ವಿಟ್ಟರ್​ ಟ್ರೆಂಡಿಂಗ್​ನಲ್ಲೂ ಪುಷ್ಪಾ ಪೋಸ್ಟರ್​ ನಂಬರ್ -1 ಸ್ಥಾನದಲ್ಲಿದೆ. ಲೇಡಿ ರಗಡ್ ಲುಕ್​​ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್​, ಸ್ಯಾರಿ ಧರಿಸಿ, ಚಿನ್ನಾಭರಣ, ಹಾರ ಹಾಕ್ಕೊಂಡು, ಕಿವಿಗೆ ಜುಮ್ಕಿ, ಮೂಗುತ್ತಿ ಧರಿಸಿ ಅಷ್ಟೇ ಅಲ್ಲ, ಬಲಗೈನಲ್ಲಿ ಪಿಸ್ತೂಲ್​ ಹಿಡ್ಕೊಂಡ ಈ ಪುಷ್ಪಾ ಪೋಸ್ಟರೇ ಈಗ ಭಾರತೀಯ ಚಿತ್ರರಂಗದಲ್ಲಿ ಹವಾ ಎಬ್ಬಿಸಿದೆ. ಈ ಒಂದು ಪೋಸ್ಟರ್​​ನಿಂದಲೇ ಅಭಿಮಾನಿಗಳಿ ಎಕ್ಸೈಟ್ ಆಗಿದ್ದಾರೆ. ಒಂದು ಪೋಸ್ಟರ್​​ನಿಂದಲೇ ಸಿನಿಮಾಗೆ ಯಾವ ಮಟ್ಟಿಗೆ ಬೂಸ್ಟ್ ಸಿಗಬಹುದು ಅನ್ನೋದಕ್ಕೆ ಇದೇ ಸಾಕ್ಷಿ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ, ಸಿನಿ ಪಂಡಿತರೆಲ್ಲಾ ಪುಷ್ಪಾ-2 ಪೋಸ್ಟರ್​​ನ್ನೇ ರಿವ್ಯೂ ಮಾಡೋಕೆ ಶುರು ಮಾಡಿದ್ದಾರೆ. ಅಲ್ಲು ಅರ್ಜುನ್ ಬಹುನಿರೀಕ್ಷಿತ ಸಿನಿಮಾದ ಭವಿಷ್ಯ ನುಡಿಯುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ, ಪುಷ್ಪಾ-2 ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾದಂತೆ ಬಾಕ್ಸಾಫೀಸ್​​ ಧೂಳಿಪಟ ಮಾಡುತ್ತೆ. ಕಾಂತಾರಾ ಮಾದರಿಯಲ್ಲೇ ಕ್ರೇಜ್​ ಹುಟ್ಟಿಸುತ್ತೆ ಅಂತಾ ವಿಶ್ಲೇಷಿಸ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಂಗಳಮುಖಿ ಪಾತ್ರಧಾರಿಯಾಗಿರಬಹುದು ಅಂತಾನೂ ಅಂದಾಜಿಸಲಾಗ್ತಿದೆ. ಇನ್ನೂ ಕೆಲವರು ಭಗವಂತನ ಅವತಾರದಲ್ಲಿ ಕಾಣಿಸಿಕೊಂಡಿರಬಹುದು ಅಂತಿದ್ದಾರೆ.

ಬಹುತೇಕ ಮಂದಿ ಅಲ್ಲು ಅರ್ಜುನ್ ಹೊಸ ಲುಕ್​​​ಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಅಲ್ಲು ಅತ್ಯಂತ ಚಾಲೆಂಜಿಂಗ್ ಪಾತ್ರಗಳನ್ನೇ ಮಾಡುತ್ತಿದ್ದು, ಒಬ್ಬ ನಟನಾಗಿ ಸಾಕಷ್ಟು ಬದಲಾಗಿದ್ದಾರೆ. ಇತರರಿಗೆ ಹೋಲಿಸಿದ್ರೆ ಅಲ್ಲು ಅರ್ಜುನ್​ ಕಂಪ್ಲೀಟ್ ಡಿಫರೆಂಟ್ ಕಲಾವಿದ ಅಂತಾ ಬಣ್ಣಿಸ್ತಿದ್ದಾರೆ. ಇನ್ನೂ ಕೆಲವರು ಈ ಪೋಸ್ಟರ್​​ನಲ್ಲಿ ಅಲ್ಲು ಕಾಳಿ ದೇವತೆಯಂತೆ ಕಾಣಿಸಿಸ್ತಿದ್ದಾರೆ. ಒಂದು ಕೈಯಲ್ಲಿ ಗನ್ ಕೂಡ ಇದೆ. ತಮಾಷೆ ಏನಂದ್ರೆ ಯಾರೂ ಈ ಪೋಸ್ಟರ್​ ವಿರುದ್ಧ ಚಕಾರ ಎತ್ತುತ್ತಿಲ್ಲ. ಯಾಕಂದ್ರೆ ಇದು ಬಾಲಿವುಡ್ ಸಿನಿಮಾ ಅಲ್ವಲ್ಲಾ ಅಂತಾ ಬಾಯ್ಕಾಟ್ ಕ್ಯಾಂಪೇನರ್​ಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನು ಕೇವಲ ಪೋಸ್ಟರ್​ ಅಷ್ಟೇ ಅಲ್ಲ, ಅಲ್ಲು ಅರ್ಜುನ್ ಪುಷ್ಪಾ ಸಿನಿಮಾದ ವಿಶೇಷ ವಿಡಿಯೋ ಒಂದನ್ನ ಕೂಡ ರಿಲೀಸ್ ಮಾಡಿದ್ದಾರೆ. ಈ ವಿಡಿಯೋವನ್ನ ಎಲ್ಲೂ ಟೀಸರ್​ ಅಥವಾ ಟ್ರೈಲರ್ ಅಂತಾ ಉಲ್ಲೇಖಿಸಿಲ್ಲ. ಎಲ್ಲಿದ್ದಾನೆ ಪುಷ್ಪಾ? ಹಂಟ್ ಫಾರ್ ಪುಷ್ಪಾ ಅಂತಾ ಈ ವಿಡಿಯೋಗೆ ಟೈಟಲ್​ ನೀಡಲಾಗಿದ್ದು, ನಾಪತ್ತೆಯಾಗಿರುವ ಪುಷ್ಪಾನಿಗಾಗಿ ಹುಡುಕಾಡುವ ಸೀನ್​ಗಳು ಈ ವಿಡಿಯೋದಲ್ಲಿದೆ.

ಜೈಲಿನಿಂದ ಎಸ್ಕೇಪ್ ಆಗುವ ವೇಳೆ ಪುಷ್ಪಾನ ದೇಹಕ್ಕೆ 8 ಗುಂಡುಗಳು ತಗುಲಿರುತ್ತೆ. ಆದ್ರೂ ಪುಷ್ಪಾ ಸೇಷಾಚಲಮ್ ಕಾಡಿನೊಳಗೆ ಎಸ್ಕೇಪ್​ ಆಗುವಲ್ಲಿ ಯಶಸ್ವಿಯಾಗ್ತಾನೆ. ಆದ್ರೆ, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸೋ ವೇಳೆ ರಕ್ತಸಿಕ್ತ ಅಂಗಿ ಕಾಡಿನ ಬಳಿ ಪತ್ತೆಯಾಗುತ್ತೆ. ಎನ್​​ಕೌಂಟರ್​ನಲ್ಲಿ ಪುಷ್ಪಾ ಸಾವನ್ನಪ್ಪಿದ್ದಾನೆ ಅನ್ನೋ ಸುದ್ದಿ ಹರಿದಾಡುತ್ತಲೇ ತಿರುಪತಿಯಲ್ಲಿ ಆತನ ಬೆಂಬಲಿಗರು ರೊಚ್ಚಿಗೇಳ್ತಾರೆ. ಭಾರಿ ಪ್ರತಿಭಟನೆ, ಹಿಂಸಾಚಾರವೇ ನಡೆಯುತ್ತೆ. ಅಕ್ರಮವಾಗಿ ಸಂಪಾದಿಸಿದ ಹಣದ ಮೂಲಕ ಪುಷ್ಪಾ ತಮಗೆ ಯಾವ ರೀತಿ ಸಹಾಯ ಮಾಡಿದ್ದಾನೆ ಅನ್ನೋ ಬಗ್ಗೆ ಜನರು ಮಾತನಾಡ್ತಾರೆ. ಈ ಮಧ್ಯೆ, ಪುಷ್ಪಾ ಸತ್ತಿಲ್ಲ ಇನ್ನೂ ಬದುಕಿದ್ದಾನೆ ಅನ್ನೋ ವಿಚಾರ ಕೂಡ ಸಂಚಲನ ಸೃಷ್ಟಿಸುತ್ತೆ. ಇತ್ತ ಪೊಲೀಸರು ಪುಷ್ಪಾನಿಗಾಗಿ ದಟ್ಟ ಕಾಡಿನಲ್ಲಿ ಹುಡುಕಾಟ ಮುಂದುವರಿಸ್ತಾರೆ. ಈ ನಡುವೆ ಹುಲಿ ಸೇರಿದಂತೆ ಕಾಡು ಪ್ರಾಣಿಗಳನ್ನ ಪತ್ತೆ ಹಚ್ಚುವ ಕ್ಯಾಮರಾ ಟ್ರ್ಯಾಪ್​​​ನಲ್ಲಿ ಒಂದು ವಿಚಿತ್ರ ದೃಶ್ಯ ಸೆರೆಯಾಗುತ್ತೆ. ಈ ದೃಶ್ಯ ಟಿವಿ ಚಾನೆಲ್​​ ಒಂದರಲ್ಲಿ ಪ್ರಸಾರವಾಗುತ್ತೆ. ಕ್ಯಾಮರಾ ಮುಂದೆ ನಡೆದುಕೊಂಡು ಬರುವ ಹುಲಿ ಇದ್ದಕ್ಕಿದ್ದಂತೆ ಎರಡು ಹೆಜ್ಜೆ ಹಿಂದೆ ಹೋಗಿ ಗರ್ಜಿಸುತ್ತೆ. ಮುಖಕ್ಕೆ ಬಟ್ಟೆ ಸುತ್ತಿದ ವ್ಯಕ್ತಿಯೊಬ್ಬ ಹುಲಿಯ ಬಳಿ ಹಾದು ಹೋಗ್ತಾನೆ. ಹುಲಿಯೇ ಎರಡು ಹೆಜ್ಜೆ ಹಿಂದಕ್ಕೆ ಕಾಲಿಟ್ಟಿದೆ ಅಂದ್ರೆ ಅದು ಮತ್ಯಾರೂ ಅಲ್ಲ, ಪುಷ್ಪಾನೆ ಆಗಿರ್ತಾನೆ ಅಂತಾ ಟಿವಿ ಮುಂದೆ ಕುಳಿತ ಆತನ ಬೆಂಬಲಿಗರು ಮಾತನಾಡಿಕೊಳ್ತಾರೆ. ಆಗ ಪುಷ್ಪಾ ಸ್ಕ್ರೀನ್ ಮುಂದೆ ಕಾಣ್ತಿಸಿಕೊಳ್ತಾನೆ. ಇತ್ತ ಬೆಂಬಲಿಗರು ಪುಷ್ಪಾ ಇನ್ನೂ ಜೀವಂತವಾಗಿಯೇ ಇದ್ದಾನೆ ಅಂತಾ ಸಂಭ್ರಮಿಸೋಕೆ ಶುರು ಮಾಡ್ತಾರೆ. ಹೀಗೆ ಪುಷ್ಪಾ-2 ಸಿನಿಮಾದ ಸ್ಟೋರಿ ಆರಂಭವಾಗುತ್ತದೆ.

suddiyaana