ಮಂಗಳನ ಅಂಗಳ ಮುಟ್ಟಲು 7 ತಿಂಗಳಲ್ಲ 45 ದಿನ ಸಾಕು – ಇತಿಹಾಸ ಬರೆಯುತ್ತಾ ಹೊಸ ಯೋಜನೆ..!?

ಮಂಗಳನ ಅಂಗಳ ಮುಟ್ಟಲು 7 ತಿಂಗಳಲ್ಲ 45 ದಿನ ಸಾಕು – ಇತಿಹಾಸ ಬರೆಯುತ್ತಾ ಹೊಸ ಯೋಜನೆ..!?

ಮಂಗಳ ಗ್ರಹ ವಾಸಕ್ಕೆ ಯೋಗ್ಯವಾಗಿದೆ ಅನ್ನೋ ಅನ್ವೇಷಣೆ ಖುಷಿಯ ಸಂಗತಿಯಾದ್ರೂ ಮಂಗಳಗ್ರಹಕ್ಕೆ ಹೋಗಲು ತೆಗೆದುಕೊಳ್ಳುವ ಸಮಯವೇ ತಲೆನೋವಾಗಿ ಪರಿಣಮಿಸಿತ್ತು. ಯಾಕಂದ್ರೆ ಭೂಮಿಯಿಂದ ಮಂಗಳನ ಅಂಗಳಕ್ಕೆ ಕಾಲಿಡಲು ಬರೋಬ್ಬರಿ 7 ತಿಂಗಳ ಸಮಯ ಬೇಕಾಗಿತ್ತು. ಆದ್ರೆ ಅಂದುಕೊಂಡಂತೆ ಈ ಯೋಜನೆ ಏನಾದ್ರೂ ಸಕ್ಸಸ್ ಆದ್ರೆ ಜಸ್ಟ್ 45 ದಿನಗಳಲ್ಲೇ ಮಂಗಳ ಗ್ರಹಕ್ಕೆ ಕಾಲಿಡಬಹುದು.

ಹೌದು. ಸದ್ಯ ನಾಸಾ ಇನೋವೇವೆಟಿವ್ ಅಡ್ವಾನ್ಸಡ್ ಕಾನ್ಸೆಪ್ಟ್ ಅಡಿಯಲ್ಲಿ ನಾಸಾ ಬಾಹ್ಯಾಕಾಶ ಸಂಸ್ಥೆಯು ಇಂತಹದೊಂದು ಯೋಜನೆಯನ್ನ ಕೈಗೆತ್ತಿಕೊಂಡಿದೆ. ಅತೀ ವೇಗವಾಗಿ ಕೆಂಪುಗ್ರಹದ ಬಳಿ ತಲುಪಲು ನ್ಯೂಕ್ಲಿಯರ್ ಥರ್ಮಲ್ ಅಂಡ್ ನ್ಯೂಕ್ಲಿಯರ್ ಎಲೆಕ್ಟ್ರಿಕ್ ಪ್ರೊಪ್ಯುಲಷನ್ (NTNEP) ಯೋಜನೆಯನ್ನ ಸಿದ್ಧಪಡಿಸಿಕೊಂಡಿದೆ.

ಇದನ್ನೂ ಓದಿ : ತಾಯಿ ಸಾವಿಗೆ ರಜೆ ಹಾಕಿದ್ದಕ್ಕೆ ಕೆಲಸದಿಂದ ವಜಾ – ಗೂಗಲ್ ವಿರುದ್ಧ ನೋವು ತೋಡಿಕೊಂಡ ಟೆಕ್ಕಿ

ಮನುಷ್ಯನಿಗೆ ಭೂಮಿಯ ಹೊರತಾಗಿ ಅನ್ಯಗ್ರಹದಲ್ಲಿ ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿದಾಗ ಕುತೂಹಲವಾಗಿ ಕಂಡು ಬಂದಿದ್ದು ಮಂಗಳ ಗ್ರಹ. ಭೂಮಿಗೆ ಹೋಲುವಂತಹ ಕೆಲವೊಂದು ಕುರುಹುಗಳು ಅಲ್ಲಿ ಕಂಡು ಬಂದಿರುವುದರಿಂದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮಂಗಳ ಗ್ರಹವು ಅಧ್ಯಯನದ ಕೇಂದ್ರವಾಗಿತ್ತು. ಇನ್ನು ಇದಕ್ಕೆ ಸಾಥ್ ಕೊಟ್ಟಿದ್ದು ಸ್ಪೇಸ್ ಎಕ್ಸ್ ಕಂಪನಿಯ ಎಲಾನ್ ಮಸ್ಕ್. ಭವಿಷ್ಯದಲ್ಲಿ ಒಂದು ದಿನ ಮಂಗಳ ಗ್ರಹದಲ್ಲಿ ಸುಸ್ಥಿರ ಬದುಕನ್ನ ಕಟ್ಟುತ್ತೇವೆ ಎಂಬ ವಿಶ್ವಾಸದಲ್ಲಿ ಎಲಾನ್ ಮಸ್ಕ್ ಇದ್ದಾರೆ. ಆದರೆ ಈ ಕುರಿತಾಗಿ ಮಂಗಳ ಗ್ರಹದಲ್ಲಿ ನಡೆಯಬೇಕಾದ ನಿರಂತರ ಅಧ್ಯಯನಕ್ಕೆ ಸವಾಲಾಗಿ ಕಂಡು ಬಂದಿದ್ದು ಭೂಮಿ ಮತ್ತು ಮಂಗಳ ಗ್ರಹದ ನಡುವೆ ಇರುವ ಅಂತರವಾಗಿತ್ತು. ಸದ್ಯ ಬಾಹ್ಯಾಕಾಶ ನೌಕೆಯು ಗಂಟೆಗೆ 39,600 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುತ್ತದೆ. ಈ ವೇಗವು ಮಂಗಳನ ಬಳಿ ತಲುಪಲು ಸುಮಾರು ಏಳು ತಿಂಗಳ ಸಮಯವನ್ನ ತೆಗೆದುಕೊಳ್ಳುelon muskತ್ತದೆ.

ಆದರೆ ಪ್ರಸ್ತಾವಿತ ನ್ಯೂಕ್ಲಿಯರ್ ಥರ್ಮಲ್ ಅಂಡ್ ನ್ಯೂಕ್ಲಿಯರ್ ಎಲೆಕ್ಟ್ರಿಕ್ ಪ್ರೊಪ್ಯುಲಷನ್ ಯೋಜನೆಯಲ್ಲಿ ಕೇವಲ 45 ದಿನಗಳಲ್ಲಿ ಮಂಗಳನ ಬಳಿ ತಲುಪಬಹುದು. ಈ ಯೋಜನೆಯು ಪರಿಮಾಣು ಪರಿಕಲ್ಪನೆಯನ್ನ ಒಳಗೊಂಡಿದ್ದು ಇದು ಬಾಹ್ಯಾಕಾಶ ನೌಕೆಯ ವೇಗವನ್ನ ವರ್ಧಿಸುತ್ತದೆ. ನಾಸಾ ಪ್ರಕಾರ ನ್ಯೂಕ್ಲಿಯರ್ ಥರ್ಮಲ್ ಪ್ರೊಪ್ಯುಲಷನ್ ತಂತ್ರಜ್ಞಾನ ಬಾಹ್ಯಾಕಾಶ ನೌಕೆಯ ಕಾರ್ಯ ಕ್ಷಮತೆಯನ್ನ ದ್ವಿಗುಣಗೊಳಿಸುತ್ತದೆ. ಈ ತಂತ್ರಜ್ಞಾನದಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲಿ ಲಿಕ್ವಿಡ್ ಹೈಡ್ರೋಜನ್ ಪ್ರೊಪೆಲ್ಲಂಟ್ (Liquid Hydrogen Propellant ) ನ ಉರಿಸುತ್ತದೆ ಮತ್ತು ಅದನ್ನ ಆಯಾನೀಕೃತ ಹೈಡ್ರೋಜನ್ ಅನಿಲವಾಗಿ ಪರಿವರ್ತಿಸುತ್ತದೆ. ನ್ಯೂಕ್ಲಿಯರ್ ಎಲೆಕ್ಟ್ರಿಕ್ ಪ್ರೊಪ್ಯುಲಷನ್ ರಿಯಾಕ್ಟರ್ ನಲ್ಲಿ ವಿದ್ಯುತ್ ಶಕ್ತಿಯನ್ನ ಉತ್ಪಾದಿಸಿ ಕ್ಸೆನಾನ್(Xenon), ಕ್ರಿಪ್ಟಾನ್ (krypton) ನಂತಹ ಗ್ಯಾಸ್ ಗಳನ್ನ ಅಯಾನ್ ಗಳಾಗಿ ಪರಿವರ್ತಿಸಿ ಬಾಹ್ಯಾಕಾಶ ನೌಕೆಯ ವೇಗವನ್ನ ವರ್ಧಿಸುತ್ತದೆ.

ಪ್ರಸ್ತುತ ಮಂಗಳ ಗ್ರಹಕ್ಕೆ ಉಡಾವಣೆಗೊಳ್ಳುವ ರಾಕೆಟ್ ಬಾಹ್ಯಾಕಾಶದಲ್ಲಿ ಸುಮಾರು ಏಳು ತಿಂಗಳ ಕಾಲ ಉಳಿಯುತ್ತದೆ. ಆದರೆ ಉಡಾವಣೆಯು ಭೂಮಿ ಮತ್ತು ಮಂಗಳ ಗ್ರಹವು ಪರಸ್ಪರ ಹತ್ತಿರ ಇರುವ ಸಂದರ್ಭದಲ್ಲಿ ಮಾತ್ರ ನಡೆಯುತ್ತದೆ. ಆದರೆ ಮಂಗಳ ಗ್ರಹವು ಭೂಮಿಯ ಸಮೀಪ ಬರಲು ಸುಮಾರು 26 ತಿಂಗಳ ಸಮಯವನ್ನ ತೆಗೆದುಕೊಳ್ಳುತ್ತದೆ. ಹಾಗಾಗಿ ಒಂದು ವೇಳೆ 45 ದಿನಗಳ ಮಂಗಳ ಗ್ರಹದ ಕಡೆಗಿನ ಪ್ರಯಾಣದ ಯೋಜನೆ  ಕಾರ್ಯಗತವಾದರೆ ಇದು ಕೇವಲ ಮಿಷನ್ ವೆಚ್ಚವನ್ನ ಕಡಿಮೆ ಮಾಡುವುದು ಮಾತ್ರವಲ್ಲದೆ  ಮಂಗಳ ಗ್ರಹದ ಮೇಲಿನ ನಿರಂತರ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ.

 

 

suddiyaana