ನ್ಯೂಕ್ಲಿಯರ್ ಬಾಂಬ್ ಪವರ್ ಫೈಟ್! – ಸರ್ವನಾಶ ಹತ್ತಿರವಾಯ್ತಾ?
ಸರ್ವನಾಶ ಹತ್ತಿರವಾಯ್ತಾ?

ವಿಶ್ವದ 195 ರಾಷ್ಟ್ರಗಳ ಪೈಕಿ ಕೇವಲ 9 ದೇಶಗಳು ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಹಾಗಾದರೆ ಅದು ಯಾವ ರಾಷ್ಟ್ರಗಳು ಎಂದು ನೋದುವುದಾರೆ, ಎಲ್ಲವು ಬಹುತೇಕ ಟಾಪ್ ಆರ್ಥಿಕತೆ ಹೊಂದಿರುವ ರಾಷ್ಟ್ರಗಳೇ..! ಈ ಪಟ್ಟಿಯಲ್ಲಿ ಮೊದಲ ಹೆಸರು ಕೇಳಿ ಬರುವುದು, ವಿಶ್ವದ ದೊಡ್ಡಣನಾಗಿರಯವ ಅಮೆರಿಕ, ನಂತರ ಅತಿ ದೊಡ್ಡ ರಾಷ್ಟ್ರವಾಗಿರುವ ರಷ್ಯಾ, ಇನ್ನು ನಂತರದಲ್ಲಿ ನೂರಾರು ವರ್ಷಗಳ ಕಾಲ ಅರ್ಧಕ್ಕೂ ಅಧಿಕ ಭೂಭಾಗವನ್ನು ಆಳಿದ ಇಂಗ್ಲೆಂಡ್ ಫ್ರಾನ್ಸ್ ಮತ್ತು ನಮ್ಮ ನೆರೆಯ ರಾಷ್ಟ್ರವಾದ ಚೀನಾ ಅಣ್ವಸ್ತ್ರ ಪಡೆದ ಮೊದಲ ಐದು ರಾಷ್ಟ್ರಗಳಾಗಿವೆ. ಇನ್ನುಳಿದಂತೆ ವಿಶ್ವಕ್ಕೆ ಶಾಂತಿ ಪಾಠಮಾಡುವ ನಮ್ಮ ಭಾರತ, ಇದರೊಂದಿಗೆ ನಮ್ಮ ಆತ್ಮೀಯ ಸ್ನೆಹಿತನಾಗಿರುವ ಇಸ್ರೇಲ್ ಹಾಗೂ ಭಯೋತ್ಪಾಧಕರ ಫ್ಯಾಕ್ಟರಿಯಾದ ಪಾಪಿ ಪಾಕಿಸ್ತಾನ.. ಯಾವಾಗಲೂ ಅಣ್ವಸ್ತ್ರ ಪ್ರಯೋಗಿಸುತ್ತೆನೆ ಎನ್ನುವ ಉತ್ತರ ಕೋರಿಯಾ. ಈ ರಾಷ್ಟ್ರಗಳೇ ಅಂದಾಜು 12,221 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ.
ರಷ್ಯಾ ಬಳಿಯೇ ಹೆಚ್ಚು ನ್ಯೂಕ್ಲಿಯರ್
ಇದನ್ನೂ ಓದಿ: ಜಗತ್ತನ್ನೇ ಗೆದ್ದ ಕುಳ್ಳ ಕ್ಯಾಪ್ಟನ್ – ಸೌತ್ ಆಫ್ರಿಕಾ ಹೀರೋ ಟೆಂಬಾ ಬವುಮಾ
ಈ 12,221 ಪರಮಾಣು ಶಸ್ತ್ರಾಸ್ತ್ರಗಳ ಪೈಕಿ ರಷ್ಯಾ ಮುಂದೆ ನಿಂತಿದೆ. ರಷ್ಯಾವೊಂದೇ ಬರೊಬ್ಬರಿ 5580 ಪರಮಾಣು ಸಿಡಿತಲೆಗಳ ಸಂಗ್ರಹ ಮಾಡಿಕೊಂಡಿದೆ. 2ನೇ ಸ್ಥಾನವನ್ನ ಅಮೆರಿಕ ಪಡೆದಿದೆ. ಈ ಅಮೆರಿಕಾವೊಂದೆ 5044 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಈ ಎರಡು ರಾಷ್ಟ್ರಗಳೇ ವಿಶ್ವದ 90% ಅನ್ನು ಪರಮಾಣು ಅಸ್ತ್ರಗಳನ್ನು ಹೊಂದಿವೆ.
ಈ 9 ರಾಷ್ಟ್ರಗಳೇ ಯಾಕೆ ಅಣ್ವಸ್ತ್ರವೊಂದಿದೆ ಎನ್ನುವ ಪ್ರಶ್ನೆ ಉದ್ಭವಿಸಿರುತ್ತದೆ. ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಾಗಿವೆ. ಹೀಗಿದ್ರೂ ಈ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ. ಇದರ ಹಿಂದೆ ಪರಮಾಣು ಪ್ರಸರಣ ತಡೆ ಒಪ್ಪಂದ ಅಂದ್ರೆ ಎನ್‌ಪಿಟಿ ಇದೆ. ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯಿಂದ ಜಗತ್ತನ್ನು ರಕ್ಷಿಸಲು 1968 ರಲ್ಲಿ ಈ ಒಪ್ಪಂದವನ್ನು ಅಂಗೀಕರಿಸಲಾಯಿತು ಮತ್ತು 1970 ರಲ್ಲಿ ಜಾರಿಗೆ ಬಂದಿತು. ಇಲ್ಲಿಯವರೆಗೆ 190 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಗಟ್ಟಲು ಮತ್ತು ಪರಮಾಣು ಪರೀಕ್ಷೆಗಳನ್ನು ತಡೆಯಲು ಈ ಒಪ್ಪಂದವನ್ನು ರಚಿಸಲಾಗಿದ್ದು, ಒಪ್ಪಂದದ ಅಡಿಯಲ್ಲಿ, ಯುಎಸ್, ರಷ್ಯಾ, ಬ್ರಿಟನ್, ಚೀನಾ ಮತ್ತು ಫ್ರಾನ್ಸ್ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕನ್ನು ಹೊಂದಿವೆ. ಏಕೆಂದರೆ ಅವುಗಳು ಒಪ್ಪಂದವು ಜಾರಿಗೆ ಬರುವ ಮೊದಲು ಪರಮಾಣು ಪರೀಕ್ಷೆಗಳನ್ನು ಡೆಸಿದ ದೇಶಗಳಾಗಿವೆ. ಹೀಗಿರುವಾಗ ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ ದೇಶಗಳು ಹೇಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸಿದವು ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾಸ್ತವವಾಗಿ, ಭಾರತ ಮತ್ತು ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಲಿಲ್ಲ. ಅಲ್ಲದೆ, ಉತ್ತರ ಕೊರಿಯಾ ಈ ಹಿಂದೆ ಒಪ್ಪಂದದ ಭಾಗವಾಗಿತ್ತು, ಆದರೆ ನಂತರ ಪರಮಾಣು ಪರೀಕ್ಷೆ ನಡೆಸಿದ ಕಾರಣದಿಂದ ಒಪ್ಪಂದದಿಂದ ಹಿಂದೆ ಸರಿಯಿತು. ಅದೇ ರೀತಿ ಇಸ್ರೇಲ್ ಕೂಡ ಈ ಪರಮಾಣು ಶಸ್ತ್ರಾಸ್ತ್ರಗಳನ್ನು ರಹಸ್ಯವಾಗಿ ಪರೀಕ್ಷಿಸಿತ್ತು..
ರಹಸ್ಯವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಭಾರತ
ಮೇ 18, 1974ರ ಬೆಳಗ್ಗೆ ಸುಮಾರು 08:05ರ ವೇಳೆಗೆ ಅಮೆರಿಕದ ಭೂ ಕಂಪನ ಮಾಪಕ ಭೂಮಿ ಕಂಪಿಸಿದ್ದನ್ನು ದಾಖಲಿಸಿತ್ತು. ಇದು ಭೂ ಕಂಪನ ಅಲ್ಲ ಎಂದು ಸಂಶೋಧಕರಿಗೂ ತಿಳಿದಿತ್ತು. ಈ ಕಂಪನದ ರಹಸ್ಯವನ್ನು ಭಾರತ ಬಹಿರಂಗ ಗೊಳಿಸಿದಾಗ ಜಗತ್ತು ಬೆರಗಾಗಿತ್ತು. ಈ ಪ್ರಯೋಗದ ವಿಚಾರವನ್ನು ನಮ್ಮದೇ ದೇಶದ ರಕ್ಷಣಾ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಮಾಹಿತಿ ನೀಡಿದ್ದು ಕೇವಲ ಎರಡು ದಿನಗಳ ಮೊದಲು. ಸುಮಾರು 75 ವಿಜ್ಞಾನಿಗಳನ್ನು ಹೊರತುಪಡಿಸಿದರೆ ಈ ಪ್ರಾಜೆಕ್ಟ್ ಮಾಹಿತಿ ಗೊತ್ತಿದ್ದಿದ್ದು ಪ್ರಧಾನಿ ಇಂದಿರಾಗಾಂಧಿ , ಅವರ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಹಸ್ಕರ್ ಮತ್ತು ಸೋವಿಯತ್ ಒಕ್ಕೂಟದಲ್ಲಿ ಭಾರತದ ರಾಯಭಾರಿಯಾಗಿದ್ದ ದುರ್ಗಾ ಪ್ರಸಾದ್ ಧರ್ ಅಧಿವರಿಗೆ ಮಾತ್ರ. ಅಷ್ಟು ಅಚ್ಚುಕಟ್ಟಾಗಿ ಈ ಪ್ರಜೆಕ್ಟ್‌ನ ಗೌಪ್ಯತೆ ಕಾಪಾಡಲಾಗಿತ್ತು. ಈ ಸಾಧನೆಯಿಂದ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೆನಿಸಿದ್ದ ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಶತ್ರು ರಾಷ್ಟ್ರ ಪಾಕ್‍ಗೆ ಶಾಕ್ ಆಗಿತ್ತು. ಅಣ್ವಸ್ತ್ರ ಪರೀಕ್ಷೆ 1974ರ ಅಣ್ವಸ್ತ್ರ ಪರೀಕ್ಷೆ ಬಳಿಕ ಅದೇ ಪೋಖ್ರಾನ್‌ಲ್ಲಿ ಭಾರತ 5 ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿದೆ. 1974ರ ಪರಮಾಣು ಪರೀಕ್ಷೆ ಶಾಂತಿಯುತವಾದ ಪರಮಾಣು ಪರೀಕ್ಷೆ ಎಂದೇ ಕರೆಸಿಕೊಂಡಿತ್ತು. ಶಾಂತಿಯುತವಾಗಿಯೇ ತನ್ನಲ್ಲಿನ ಪರಮಾಣು ತಂತ್ರಜ್ಞಾನದ ಸಹಾಯದಿಂದ ಅಣ್ವಸ್ತ್ರ ಅಭಿವೃದ್ಧಿ ಪಡಿಸುವ ಸಾಮಥ್ರ್ಯ ತನಗಿದೆ ಎನ್ನುವ ಶಕ್ತಿಯನ್ನು ಜಗತ್ತಿಗೆ ತೋರಿಸಿತು.
ಭಾರತಕ್ಕೆ ಅಣುಬಾಂಬ್ ಅಗತ್ಯವೇನಿತ್ತು?
1971ರ ಇಂಡೋ- ಪಾಕ್ ಯುದ್ಧದ ಬಳಿಕ ಪಾಕಿಸ್ತಾನ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದೇ ಬರುತ್ತದೆ ಎನ್ನುವ ವಿಚಾರ ಭಾರತಕ್ಕೆ ಕಾಡುತ್ತಿತ್ತು. ಇದರೊಂದಿಗೆ 2 ಬಾರಿ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ಸೋತಿತ್ತು. ಪಾಕಿಸ್ತಾನ, ಚೀನಾ ಸೇರಿ ಮಣಿಸುವ ಸಾಧ್ಯತೆ ಭಾರತದ ಆತಂಕಕ್ಕೆ ಕಾರಣವಾಗಿತ್ತು. ಮಿತ್ರ ರಾಷ್ಟ್ರ ರಷ್ಯಾ ಅಮೆರಿಕದೊಂದಿಗೆ ಶೀತಲ ಸಮರದಲ್ಲಿ ನಿರತವಾಗಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಯಾರನ್ನೂ ನಂಬುವ ಹಾಗಿರಲಿಲ್ಲ. ಇವೆಲ್ಲದರಿಂದಾಗಿ 70ರ ದಶಕದಲ್ಲಿ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆಗೆ ಭಾರತ ಮನಸ್ಸು ಮಾಡಿತು.
1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ, ಬಿಜೆಪಿ ಎನ್‍ಡಿಎ ಸರ್ಕಾರ ರಚಿಸಿತ್ತು. ಅಧಿಕಾರಕ್ಕೆ ಬರುವ ಮುನ್ನ, ಎನ್‍ಡಿಎ ಭಾರತದ ಮಿಲಿಟರಿ ಸಾಮಥ್ರ್ಯಕ್ಕೆ ಅಣ್ವಸ್ತ್ರ ಸಾಮಥ್ರ್ಯವನ್ನೂ ಸೇರಿಸುವುದನ್ನು ತನ್ನ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶವಾಗಿಸಿತ್ತು. 1998ರಲ್ಲಿ, ಚೀನಾದ ಬೆಂಬಲದೊಡನೆ ಅಭಿವೃದ್ಧಿ ಪಡಿಸಿದ್ದ ಘೋರಿ ಕ್ಷಿಪಣಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿತು. ಅದೇ ಪಾಕಿಸ್ತಾನದ ಸಾಮಥ್ರ್ಯಕ್ಕೆ ಭಾರತ ತನ್ನ ಆಪರೇಶನ್ ಶಕ್ತಿಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿತು. 1974ರಲ್ಲಿ, ಭಾರತ ತನ್ನ ಪರಮಾಣು ಪರೀಕ್ಷೆಯನ್ನು ಶಾಂತಿಯುತ ಉದ್ದೇಶಗಳಿಗಾಗಿ ಎಂದಿತ್ತಾದರೂ, 1998ರ ಪರಮಾಣು ಪರೀಕ್ಷೆಗಳು ಭಾರತವನ್ನು ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿ ರೂಪಿಸಿತ್ತು. ಪೋಖ್ರಾನ್ 2 ಎಂದು ಹೆಸರಾದ ಈ ಪರೀಕ್ಷೆಗಳ ಬಳಿಕ, ಭಾರತ ಸರ್ಕಾರ ತನ್ನ ಬಳಿ ಈಗ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿಗೆ ಘೋಷಿಸಿತು.