ಭಾರತದಲ್ಲೀಗ ಐಫೋನ್ 15 ಕ್ರೆಜ್! – ಫೋನ್‌ಗಾಗಿ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ಗ್ರಾಹಕರು!

ಆ್ಯಪಲ್ ಕಂಪನಿ ಇತ್ತೀಚೆಗಷ್ಟೆ ತನ್ನ ವಂಡರ್‌ಲಸ್ಟ್ ಈವೆಂಟ್ನಲ್ಲಿ ಐಫೋನ್ 15 ಸರಣಿಯನ್ನು ಅನಾವರಣ ಮಾಡಿತ್ತು. ಅಂದಿನಿಂದ ಕುತೂಹಲ, ನಿರೀಕ್ಷೆ ಮೂಡಿಸಿದ್ದ ಈ ಬಹುನಿರೀಕ್ಷಿತ ಐಫೋನ್ 15 ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮೊಬೈಲ್ ಖರೀದಿಗೆ ಜನರು ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ಇದೀಗ ಐಫೋನ್ ಗಾಗಿ ಖರೀದಿಗಾಗಿ ಕಾಯುತ್ತಿದ್ದ ಗ್ರಾಹಕರು ಮೊಬೈಲ್ ಅಂಗಡಿಯ ಉದ್ಯೋಗಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿರುವ ಘಟನೆ ದೆಹಲಿಯ ಕಮಲಾ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಮಗುವಿನ ಫೋಟೋ ರಿವೀಲ್ ಮಾಡಿದ ಮ್ಯಾಕ್ಸ್ವೆಲ್ ದಂಪತಿ – ಈ ಬಾರಿಯೂ ಅಭಿಮಾನಿಗಳಿಗೆ ನಿರಾಸೆಯಾಗಿದ್ದೇಕೆ?
ಭಾರತದಲ್ಲಿ ಐಫೋನ್ 15 ಬಿಡುಗಡೆಯಾಗಿದೆ. ಶುಕ್ರವಾರದಿಂದ (ಸೆ.22 ರಿಂದ) ಮಾರುಕಟ್ಟೆಯಲ್ಲಿ ಐಫೋನ್ 15ಸರಣಿಯ ಫೋನ್ ಗಳು ಬಂದಿವೆ. ಮುಂಬೈ, ದಿಲ್ಲಿ ಆ್ಯಪಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಐಫೋನ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಳ್ಳಬೆಳಗ್ಗೆ ಮೊಬೈಲ್ ಖರೀದಿಸಲು ಜನರು ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದೀಗ ಐಫೋನ್ ಖರೀದಿಗೆ ಬಂದಿದ್ದ ಗ್ರಾಹಕರು ಮೊಬೈಲ್ ಸಿಬ್ಬಂದಿಗಳನ್ನೇ ಥಳಿಸಿರುವ ಘಟನೆಯೊಂದು ದೆಹಲಿಯ ಕಮಲಾ ನಗರದ ಕ್ರೋಮಾ ಸ್ಟೋರ್ ನಲ್ಲಿ ನಡೆದಿದೆ.
ಏನಿದು ಘಟನೆ?
ಕ್ರೋಮಾ ಸ್ಟೋರ್ ನಲ್ಲಿ ಗ್ರಾಹಕರು ಐಫೋನ್ ಖರೀದಿಗಾಗಿ ನಿಂತಿದ್ದ ವೇಳೆ ಅಲ್ಲಿನ ಸಿಬ್ಬಂದಿಯ ಜೊತೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸಿಬ್ಬಂದಿ ಐಫೋನ್ 15 ಪ್ರೊ ಮಾರಾಟ ಮಾಡಲು ನಿರಾಕರಿಸಿದ್ದಾರೆ. ಇದಕ್ಕೆ ಸಿಟ್ಟಾದ ಗ್ರಾಹಕರು ಸಿಬ್ಬಂದಿಯತ್ತ ಧಾವಿಸಿ ಆತನ ಮೇಲೆ ಹಲ್ಲೆಗೈದಿದ್ದಾರೆ. ಇದನ್ನು ನೋಡಿದ ಇತರರ ಸಿಬ್ಬಂದಿಗಳು ತಪ್ಪಿಸಲು ಯತ್ನಿಸಿದ್ದರೂ, ಸಿಬ್ಬಂದಿಯ ಮೇಲೆ ಇಬ್ಬರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇದುವರೆಗೆ ಯಾವ ಪೊಲೀಸ್ ಪ್ರಕರಣ ಈ ಕುರಿತು ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.