ಹಿಮಸೀಳಿ ಸಾಗುವ ಯೋಧ – ಯೋಧನ ನಗುಮುಖಕ್ಕೆ ಸೆಲ್ಯೂಟ್ ಎಂದ ನೆಟ್ಟಿಗರು

ಹಿಮಸೀಳಿ ಸಾಗುವ ಯೋಧ – ಯೋಧನ ನಗುಮುಖಕ್ಕೆ ಸೆಲ್ಯೂಟ್ ಎಂದ ನೆಟ್ಟಿಗರು

ಭಾರತೀಯ ಯೋಧರ ಜೀವನ ಶೈಲಿ ಮತ್ತು ಕಾರ್ಯವಿಧಾನ ಅತ್ಯಂತ ಕಠಿಣವಾಗಿರುತ್ತದೆ. ಬಿಸಿಲು, ಮಳೆ, ಗಾಳಿ, ಚಳಿ ಎನ್ನದೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಾರೆ. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.

ಮೇಜರ್ ಜನರಲ್​ ರಾಜು ಚೌಹಾಣ ಅವರು, ಹಿಮ ಆವರಿಸಿರುವ ಪ್ರದೇಶದಲ್ಲಿ ಯೋಧರೊಬ್ಬರು ರಸ್ತೆ ಮಾಡಿಕೊಂಡು ಹೋಗುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ: Watch: ಸೇತುವೆ ಮೇಲೆ ದಟ್ಟ ಮಂಜು – ಚೀನಾದಲ್ಲಿ 200ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ

ವೈರಲ್ ಆದ ವಿಡಿಯೋದಲ್ಲಿ, ಮೊಣಕಾಲಿನತನಕವೂ ದಟ್ಟವಾದ ಹಿಮ ಆವರಿಸಿದೆ. ಯೋಧರೊಬ್ಬರು ರೈಫಲ್​ ಮೂಲಕ ದಾರಿ ಮಾಡಿಕೊಂಡು ನಡೆಯುತ್ತಿದ್ದಾರೆ. ಹೀಗೆ ದಾರಿ ಕ್ರಮಿಸುತ್ತಿರುವ ವೇಳೆ ಅವರ ಮುಖದ ಮೇಲೆ ನಗೆ ಅರಳುತ್ತದೆ. ಈ ವಿಡಿಯೋ ಡಿಸೆಂಬರ್ 25ರಂದು ಪೋಸ್ಟ್ ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 8,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನ ರೀಟ್ವೀಟ್ ಮಾಡಿದ್ದಾರೆ.

ಈ ವಿಡಿಯೋಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದು, ನಿಮ್ಮ ತಾಯಿಗೆ ನೀವು ಸೇವೆ ಸಲ್ಲಿಸುತ್ತಿರುವಾಗ ನಿಮ್ಮ ಮುಖದಲ್ಲಿ ನಗು ಪ್ರಜ್ವಲಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು ಪ್ರತಿಕಿಯಿಸಿ, ಯೋಧರ ಜೀವನಶೈಲಿ ಎಷ್ಟೊಂದು ಕಠಿಣ ಮತ್ತು ಸವಾಲಿನಿಂದ ಕೂಡಿದೆ, ಅವರಿಗೆ ಸೆಲ್ಯೂಟ್​. ಮಿಲಿಯನ್​ ಸೆಲ್ಯೂಟ್​, ನಿಮಗೆ ನಾವು ಶಾಶ್ವತವಾಗಿ ಋಣಿ ಎಂದಿದ್ದಾರೆ. ಇಂಥ ಕಠಿಣ ಸಂದರ್ಭದಲ್ಲಿಯೂ ನಗು ಬೇರೆ! ಅಬ್ಬಾ ಎಂಥ ಧೈರ್ಯಶಾಲಿ. ನಿಮ್ಮ ಈ ಧೈರ್ಯ, ಸಾಹಸದ ಮನೋಭಾವದ ಫಲವಾಗಿಯೇ ನಾವು ದೇಶದಲ್ಲಿ ನೆಮ್ಮದಿಯಿಂದ ನಿದ್ರಿಸುತ್ತಿದ್ದೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

suddiyaana