ತಾಯಿ ತಿಂಡಿ ರೆಡಿ ಮಾಡಿಕೊಟ್ಟಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ!
ಮನೆಯಲ್ಲಿ ತಾಯಿಯೊಂದಿಗೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗುವುದು ಸಾಮಾನ್ಯ. ಸರಿಯಾಗಿ ಅಡುಗೆ ಮಾಡುತ್ತಿಲ್ಲ. ರುಚಿಕರವಾದ ಊಟ ನೀಡುವುದಿಲ್ಲ ಅನ್ನೋ ದೂರುಗಳು ಕಾಮನ್. ಆದ್ರೆ ಇಲ್ಲೊಬ್ಬ ತಾಯಿ ಬೆಳಗ್ಗೆ ತಿಂಡಿ ರೆಡಿ ಮಾಡಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಬಸ್ ಗೆ ಸಿಕ್ಕಿ ಸಾಯಿ.. 1.5 ಕೋಟಿ ರೂಪಾಯಿಯ ನನ್ನ ಕಾರೇ ಬೇಕಾಗಿತ್ತಾ – ಗಾಡಿನ ಸುಟ್ಟು ಹಾಕ್ರೋ ಎಂದು ಭವಾನಿ ರೇವಣ್ಣ ರಂಪಾಟ
ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಕನ್ಹನ್ ಪಿಂಪ್ರಿ ಪ್ರದೇಶದ ನಿವಾಸಿಯಾದ 17 ವರ್ಷದ ಬಾಲಕ ತಿಂಡಿ ರೆಡಿ ಮಾಡಿಲ್ಲ ಅಂತಾ ತಾಯಿಯೊಂದಿಗೆ ಜಗಳವಾಡಿದ್ದ. ಬಳಿಕ ಸಿಟ್ಟಿನಿಂದ ಮನೆಯಿಂದ ಹೊರ ಹೋಗಿದ್ದಾನೆ. ಇದೇ ಸಿಟ್ಟಿನಿಂದ ದುಡುಕಿನ ನಿರ್ಧಾರ ಮಾಡಿದ್ದಾನೆ. ಅಮ್ಮ ತಿಂಡಿ ರೆಡಿ ಮಾಡಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಬಾಲಕ ಕಾಣಿಸಿಕೊಳ್ಳದೇ ಇದ್ದಿದ್ದರಿಂದ ಆತನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅಪರಿಚಿತ ವ್ಯಕ್ತಿ ವಿರುದ್ಧ ಅಪಹರಣದ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಹುಡುಕಾಟದ ವೇಳೆ ರೈಲ್ವೇ ಹಳಿಯ ಬಳಿ ಬಾಲಕನ ಶವ ಪತ್ತೆಯಾಗಿತ್ತು. ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ನ್ಯೂಕ್ಯಾಂಪ್ಟಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಕೋಪದ ಭರದಲ್ಲಿ ಆ ವ್ಯಕ್ತಿ ತನ್ನ ತಾಯಿಯ ಕುತ್ತಿಗೆಯ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ, ನಂತರ ತಾಯಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.