RCBಯಲ್ಲಿಲ್ಲ 5 Category ಪ್ಲೇಯರ್ಸ್ – ಕ್ಯಾಪ್ಟನ್, ಓಪನರ್, ಫಿನಿಶರ್ ಯಾರಾಗ್ತಾರೆ?
ಫ್ರಾಂಚೈಸಿ ಕಣ್ಣಿಟ್ಟಿರೋ ಆಟಗಾರರು ಯಾರು?

2025ರ ಐಪಿಎಲ್ಗೆ ರೂಲ್ಸ್ & ರೆಗ್ಯುಲೇಷನ್ಸ್ ಏನೆಲ್ಲಾ ಇರುತ್ತೆ ಅನ್ನೋದು ಇನ್ನೇನು ಕೆಲವೇ ವಾರಗಳಲ್ಲಿ ಗೊತ್ತಾಗಲಿದೆ. ಸೋ ಹಿಂದಿನ ಎಲ್ಲಾ ಸೀಸನ್ಗಳಿಗಿಂತ 18ನೇ ಸೀಸನ್ನಲ್ಲಿ ಮಹತ್ವದ ಬದಲಾವಣೆಗಳಾಗೋದಂತೂ ಗ್ಯಾರಂಟಿ. ಅದ್ರಲ್ಲೂ ಯಶಸ್ವೀ ತಂಡಗಳಿಂದಲೇ ಸ್ಟಾರ್ ಪ್ಲೇಯರ್ಸ್ ಹೊರ ಬರ್ತಿರೋದು ಬಾರೀ ಕುತೂಹಲ ಮೂಡಿಸಿದೆ. ಮತ್ತೊಂದ್ಕಡೆ ಫ್ರಾಂಚೈಸಿಗಳಿಗೆ ಬಲಿಷ್ಠ ಟೀಂ ಕಟ್ಟೋ ಚಾಲೆಂಜಸ್ ಎದುರಾಗಿದೆ. ಮುಂದಿನ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಂತೂ ಸಾಲು ಸಾಲು ಸವಾಲುಗಳಿವೆ. ಓಪನರ್ ಸ್ಲಾಟ್ನಿಂದ ಹಿಡಿದು ಬೌಲರ್ವರೆಗೂ ಪ್ಲೇಯಿಂಗ್ 11 ರೆಡಿ ಮಾಡ್ಬೇಕಿದೆ. ಅಷ್ಟಕ್ಕೂ ಆರ್ಸಿಬಿ ತಂಡದಲ್ಲಿ ಏನೆಲ್ಲಾ ಬದಲಾವಣೆ ಬೇಕು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತ U-19 ತಂಡಕ್ಕೆ ಸಮಿತ್ ದ್ರಾವಿಡ್ – ಆಸಿಸ್ ಸರಣಿಗೆ ನಾಲ್ವರು ಕನ್ನಡಿಗರಿಗೆ ಚಾನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳಿಂದ ಚಾಂಪಿಯನ್ ಪಟ್ಟಕ್ಕೇರೋ ಟಾರ್ಗೆಟ್ ಇಟ್ಟುಕೊಂಡೇ ಐಪಿಎಲ್ ಅಖಾಡಕ್ಕೆ ಧುಮುಕುತ್ತಿದೆ. ಆದ್ರೆ ಟ್ರೋಫಿ ಕನಸು ಕನಸಾಗೇ ಉಳಿದಿದೆ. ಸೋ 18ನೇ ಆವೃತ್ತಿಯಲ್ಲಾದ್ರೂ ಕಪ್ ಗೆಲ್ಲಬೇಕು ಅನ್ನೋದು ಫ್ರಾಂಚೈಸಿ ಯೋಜನೆ. ಹೀಗಾಗಿ ಆಯ್ದ ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಮೆಗಾ ಹರಾಜಿಗೆ ಬಿಡುಗಡೆ ಮಾಡುವ ದೃಢ ನಿರ್ಧಾರಕ್ಕೆ ಬಂದಿದೆ. ಇತರೆ ತಂಡಗಳ ಸ್ಟಾರ್ ಪ್ಲೇಯರ್ಸ್ ಆಕ್ಷನ್ಗೆ ಬಂದ್ರೆ ಅವ್ರ ಮೇಲೆ ಬಿಡ್ ಮಾಡಿ ಖರೀದಿ ಮಾಡೋ ಪ್ಲ್ಯ್ನಾನ್ನಲ್ಲಿದೆ. ಬಟ್ ಬೆಂಗಳೂರು ಫ್ರಾಂಚೈಸಿ ಬರೀ ಆಟಗಾರರ ಮೇಲೆ ಕಣ್ಣಿಟ್ರೆ ಸಾಕಾಗೋದಿಲ್ಲ. ಸ್ಲಾಟ್ವೈಸ್ ಟಾರ್ಗೆಟ್ ಮಾಡಿ ಖರೀದಿ ಮಾಡ್ಬೇಕಿದೆ. ಯಾಕೆ ಅನ್ನೋದನ್ನೇ ಹೇಳ್ತೇನೆ ನೋಡಿ.
ಐದು ಸ್ಲಾಟ್ ಟಾರ್ಗೆಟ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಸ್ಟ್ & ಬೆಸ್ಟ್ ಚಾಯ್ಸ್ ಕ್ಯಾಪ್ಟನ್. ಈಗಾಗ್ಲೇ ಆರ್ಸಿಬಿ ಟೀಂ ನಾಯಕ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಫಾಫ್ಗೆ ಮುಂದಿನ ಐಪಿಎಲ್ ವೇಳೆಗೆ 40 ವರ್ಷ ವಯಸ್ಸಾಗಲಿದೆ. ಸೋ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಮೆಗಾ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ಒಬ್ಬ ಸಮರ್ಥ ನಾಯಕನನ್ನ ಆಯ್ಕೆ ಮಾಡಿಕೊಳ್ಳಬೇಕು. ಆತ ಇಡೀ ತಂಡವನ್ನ ಮುನ್ನಡೆಸೋ ಸಾಮರ್ಥ್ಯ ಹೊಂದಿರಬೇಕು. ಹಾಗೇ ಓಪನರ್ ಸ್ಲಾಟ್ಗೆ ಒಬ್ಬ ಪವರ್ ಹಿಟ್ಟರ್ ಮೇಲೆ ಕಣ್ಣಿಡಬೇಕಿದೆ. ಫಾಫ್ ಡುಪ್ಲೆಸಿಸ್ ಏನಾದ್ರೂ ನಿವೃತ್ತಿ ತಗೊಂಡ್ರೆ ಬೆಂಗಳೂರು ತಂಡದ ಸ್ಟಾರ್ ಓಪನರ್ ವಿರಾಟ್ ಕೊಹ್ಲಿ ಜೊತೆ ನಿಂತು ಉತ್ತಮ ಇನ್ನಿಂಗ್ಸ್ ಕಟ್ಟುವ ತಾಕತ್ತಿರೋ ರಣಬೇಟೆಗಾರರನ್ನ ಸೇರಿಸಿಕೊಳ್ಬೇಕು. ಕ್ಯಾಪ್ಟನ್ ಮತ್ತು ಓಪನರ್ ಸಿಕ್ಕಿದ ಮೇಲೆ ನೆಕ್ಟ್ಸ್ ಟಾಸ್ಟ್ ಇರೋದು ವಿಕೆಟ್ ಕೀಪರ್. ಯೆಸ್ ಈಗಾಗ್ಲೇ ಬೆಂಗಳೂರು ತಂಡದ ಬೆಸ್ಟ್ ವಿಕೆಟ್ ಕೀಪರ್ ಆಗಿ ಅದ್ಭುತ ಪ್ರದರ್ಶನ ನೀಡ್ತಿದ್ದ ಡಿಕೆ ಅಲಿಯಾಸ್ ದಿನೇಶ್ ಕಾರ್ತಿಕ್ ಐಪಿಎಲ್ನಿಂದಲೂ ನಿವೃತ್ತಿ ಘೋಷಿಸಿದ್ರು. ಸೋ ಮುಂದುರುವ ಟೂರ್ನಿ ವೇಳೆಗೆ ತುಂಬಾನೇ ಚಾಣಾಕ್ಷನಾಗಿರೋ ವಿಕೆಟ್ ಕೀಪರ್ನ ಸೆಲೆಕ್ಟ್ ಮಾಡ್ಬೇಕು. ಇನ್ನು ಮತ್ತೊಂದು ಟಾರ್ಗೆಟ್ ಫಿನಿಶರ್. ಸದ್ಯಕ್ಕೆ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಯನ್ನ ಹೊರತುಪಡಿಸಿದ್ರೆ ಇನ್ಯಾವ ಆಟಗಾರ ಕೂಡ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಒಂದು ಪಂದ್ಯದಲ್ಲಿ ಬ್ಯಾಟ್ ಬೀಸಿದ್ರೂ ಮತ್ತೊಂದು ಪಂದ್ಯಕ್ಕೆ ಡಲ್ ಆಗ್ತಾರೆ. ಸೋ ಒಂದು, ಎರಡು, ಮೂರು, ನಾಲ್ಕು ಅಂತಾ ವಿಕೆಟ್ ಬಿದ್ದ ಮೇಲೆ ತಂಡಕ್ಕೆ ಗಟ್ಟಿಯಾಗಿ ನಿಂತು ಇನ್ನಿಂಗ್ಸ್ ಕಟ್ಟಬೇಕು. ಕಳೆದ ಬಾರಿ ಈ ಕೆಲಸವನ್ನ ಡಿಕೆ ಬಾಸ್ ಮಾಡಿದ್ರು. ಬಟ್ ಈ ಸಲ ಡಿಕೆ ಇಲ್ಲದೇ ಇರೋದು ವಿಕೆಟ್ ಕೀಪರ್ ಮತ್ತು ಫಿನಿಶರ್ ಎರಡೂ ಸ್ಲಾಟ್ಗಳೂ ಡಲ್ ಆಗಿವೆ. ಇಷ್ಟೆಲ್ಲಾ ಆದ ಮೇಲೆ ಆಲ್ರೌಂಡರ್ ಚಾಯ್ಸ್. ತಂಡದಲ್ಲಿ ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡವರು ಗ್ಲೆನ್ ಮ್ಯಾಕ್ಸ್ವೆಲ್. ಬಟ್ 2024ರ ಸೀಸನ್ನಲ್ಲಿ ಮ್ಯಾಕ್ಸಿ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಬ್ಯಾಟಿಂಗ್ನಲ್ಲೂ ಸದ್ದು ಮಾಡ್ಲಿಲ್ಲ. ಬೌಲಿಂಗ್ನಲ್ಲೂ ವಿಕೆಟ್ ಕೀಳಲಿಲ್ಲ. ಸೋ ಮುಂದಿನ ಸೀಸನ್ಗಾದ್ರೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆಸರೆಯಾಗುವಂಥ ಆಟಗಾರ ಬೇಕು. ಇನ್ನು ಇಷ್ಟೆಲ್ಲಾ ಸಮಸ್ಯೆಗಳನ್ನ ಸರಿ ಮಾಡಿಕೊಂಡು ಬಂದು ಕೊನೆಗೆ ಬೌಲಿಂಗ್ ವೀಕ್ ಆದ್ರೆ ಏನೂ ಮಾಡೋಕೆ ಆಗಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾವ ಬೌಲರ್ ಕೂಡ ಸ್ಟ್ರಾಂಗ್ ಇಲ್ಲ. ಸೋ ಒಬ್ಬ ಬೆಸ್ಟ್ ಬೌಲರ್ನನ್ನೂ ಕೂಡ ತಂಡಕ್ಕೆ ಸೇರಿಸಿಕೊಳ್ಬೇಕಿದೆ. ಕ್ಯಾಪ್ಟನ್, ಓಪನರ್, ವಿಕೆಟ್ ಕೀಪರ್, ಬೆಸ್ಟ್ ಫಿನಿಶರ್ ಮತ್ತು ಒಳ್ಳೆ ಆಲ್ ರೌಂಡರ್ ಜೊತೆಗೆ ಒಳ್ಳೆ ಬೌಲರ್ ಸಿಕ್ರೆ 2025ಕ್ಕೆ ಕಪ್ ನಮ್ದೇ ಅಂತಾ ಹೇಳ್ಬೋದು.
ಸದ್ಯ ಐಪಿಎಲ್ 2025ರ ಹರಾಜಿಗೂ ಮುನ್ನ ಹಲವು ಹೆಸರುಗಳು ಬೆಂಗಳೂರು ತಂಡದ ಪರ ಕೇಳಿ ಬರ್ತಿವೆ. ಕನ್ನಡಿಗ ಕೆಎಲ್ ರಾಹುಲ್ ಆರ್ಸಿಬಿಗೆ ಸೇರ್ತಾರೆ ಅನ್ನೋ ಸುದ್ದಿ ಇದೆ. ಬಟ್ ಇನ್ನೂ ಯಾವುದೂ ಅಧಿಕೃತವಾಗಿಲ್ಲ. ಕಳೆದ ಬಾರಿ ಮಿರಾಕಲ್ ಎನ್ನುವಂತೆ ಪ್ಲೇಆಫ್ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಾಯ್ಸ್ 18ನೇ ಸೀಸನ್ಗೆ ಕಪ್ ಗೆಲ್ಲಲಿ ಅನ್ನೋದು ಕನ್ನಡಿಗರ ಆಶಯ.