ಕೆಲಸಕ್ಕೆ ಹೋಗಲು ಬೇಜಾರಾಗ್ತಿದ್ಯಾ? – ಈ ಕಂಪನಿ ಉದ್ಯೋಗಿಗಳಿಗೆ ನೀಡುತ್ತೆ ಅನ್‌ಹ್ಯಾಪಿ ಲೀವ್‌!

ಕೆಲಸಕ್ಕೆ ಹೋಗಲು ಬೇಜಾರಾಗ್ತಿದ್ಯಾ? – ಈ ಕಂಪನಿ ಉದ್ಯೋಗಿಗಳಿಗೆ ನೀಡುತ್ತೆ ಅನ್‌ಹ್ಯಾಪಿ ಲೀವ್‌!

ಕೆಲಸಕ್ಕೆ ಸೇರಿದ್ಮೇಲೆ ಆಫೀಸ್‌ಗೆ ಹೋಗಲೇಬೇಕು. ಹುಷಾರಿಲ್ಲ.. ಬೇಜಾರಾಗಿದೆ ಅಂತಾ ಸಣ್ಣ ಪುಟ್ಟ ಕಾರಣ ಕೊಟ್ಟು ಕೂರೋದಿಕ್ಕೆ ಆಗಲ್ಲ..  ಬೇಜಾಯ್ತು, ಕೆಲಸ ಮಾಡಲು ಮನಸ್ಸಿಲ್ಲ ಅಂತಾ ಮನೆಯಲ್ಲೇ ಕೂತ್ರೆ ಕೆಲಸಕ್ಕೆ ಕುತ್ತು ಬರೋದು ಗ್ಯಾರಂಟಿ.. ಹೀಗಾಗಿ ಬೇಜಾರೋ.. ಖುಷಿಯೋ ಆಫೀಸ್‌ಗೆ ಹೋಗಲೇಬೇಕಾಗುತ್ತದೆ. ಆದ್ರೆ ಇಲ್ಲೊಂದು ಕಚೇರಿ ಬೇಜಾರು ಆದ್ರೆ ಅನ್‌ಹ್ಯಾಪಿ ರಜೆಯನ್ನು ನೀಡುತ್ತಿದೆ.

ಇದನ್ನೂ ಓದಿ: ಸಂಗಣ್ಣ ಕರಡಿಗೆ ಕಾಂಗ್ರೆಸ್‌ ಗಾಳ – ಸಂಸದರ ಮನೆಗೆ ದಿಢೀರ್‌ ಭೇಟಿ ನೀಡಿದ ಲಕ್ಷ್ಮಣ ಸವದಿ!

ಹೌದು, ಅಚ್ಚರಿಯಾದ್ರೂ ಸತ್ಯ. ಸಾಮಾನ್ಯವಾಗಿ ಜೀವನದಲ್ಲಿ ಏರಿಳಿತಗಳು ಕಾಮನ್.. ಕೆಲವೊಮ್ಮ ಖುಷಿಯಾಗಿದ್ರೆ, ಇನ್ನೂ ಕೆಲವೊಮ್ಮೆ ಮನಸ್ಸಿಗೆ ಸಿಕ್ಕಾಪಟ್ಟೆ ಬೇಜಾರಾಗುತ್ತದೆ. ಯಾರಿಗೂ ಹೇಳಿಕೊಳ್ಳೋಕೆ ಆಗಲ್ಲ.. ಉದ್ಯೋಗದಲ್ಲಿದ್ದರಂತೂ  ಈ ಖುಷಿ, ದುಖಃ, ಬೇಜಾರನ್ನು ಗಂಟು ಕಟ್ಟಿ ಪಕ್ಕಕ್ಕಿಟ್ಟು ಕೆಲಸ ಮಾಡಬೇಕಿರುತ್ತದೆ. ಆದರೆ,  ಚೀನಾದ ಕಂಪನಿಯೊಂದರ ಉದ್ಯೋಗಿಗಳಿಗೆ ಈ ತಲೆಬಿಸಿ ಇಲ್ಲ. ಯಾಕಂದ್ರೆ ಈ ಕಂಪನಿ ಅನ್‌ಹ್ಯಾಪಿ ಲೀವ್‌ ಅನ್ನು ಕೊಡುತ್ತೆ.

ಪ್ಯಾಂಗ್ ಡಾಂಗ್ ಲೈ ಎಂಬ ಸಂಸ್ಥೆಯ ಸ್ಥಾಪಕ  ಅಧ್ಯಕ್ಷ ಯು ಡಾಂಗ್ಲೈ ಅವರು ದೇಶದಲ್ಲಿ ಪ್ರಚಲಿತದಲ್ಲಿರುವ ಸುದೀರ್ಘ ಕೆಲಸದ ಸಮಯದ ವ್ಯಾಪಕ ಸಂಸ್ಕೃತಿಯನ್ನು ಎದುರಿಸಲು ಉದ್ಯೋಗಿಗಳಿಗೆ ಹತ್ತು ಹೆಚ್ಚುವರಿ ರಜೆಗಳನ್ನು ನೀಡುವ ಬಗ್ಗೆ ಘೋಷಣೆ ಮಾಡಿದರು.

ಪಾಂಗ್ ಡಾಂಗ್ ಲೈ ಕಂಪನಿಯ ಉದ್ಯೋಗಿಗಳು ಮಾನಸಿಕವಾಗಿ, ಭಾವನಾತ್ಮಕವಾಗಿ ಆರೋಗ್ಯವಾಗಿದ್ದಾಗಲಷ್ಟೇ ಕೆಲಸವೂ ಚೆನ್ನಾಗಿ ಆಗುತ್ತದೆ. ಅದೇ ಯಾವುದೇ ಚಿಂತೆ, ಬೇಜಾರಿನಲ್ಲಿ ಕೆಲಸ ಮಾಡಿದರೆ ಅದರ ಗುಣಮಟ್ಟ ಹಾಳಾಗುತ್ತದೆ ಎಂದು ಡೋಂಗ್ಲೈ ಈ ಅನ್‌ಹ್ಯಾಪಿ ಲೀವ್ಸ್ ಕೊಡುವುದರ ಹಿಂದಿನ ಉದ್ದೇಶ ತಿಳಿಸಿದ್ದಾರೆ. ಈ ಅನ್‌ಹ್ಯಾಪಿ ಲೀವ್ಸ್ ಕೊಡಲು ಮ್ಯಾನೇಜ್‌ಮೆಂಟ್ ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂದು ಡೋಂಗ್ಲೈ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *