ಕೊಹ್ಲಿ Vs ಸಂದೀಪ್ IPL ಜಿದ್ದಾಜಿದ್ದಿ – KING ಆಟಕ್ಕೆ ಮತ್ತೆ ವಿಲನ್ ಆಗ್ತಾರಾ?
ರಾಯಲ್ ಬ್ಯಾಟಲ್ ಮೇಲುಗೈ ಯಾರಿಗೆ?

ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿಯಾಗಿ ಗೆದ್ದಿರೋ ಆರ್ಸಿಬಿ ಈಗ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ರೆಡಿಯಾಗ್ತಿದ್ದಾರೆ. ಆರ್ಸಿಬಿ ಮ್ಯಾಚಸ್ ಅಂದ್ರೆ ಕೇಳ್ಬೇಕಾ ಅಲ್ಲಿ ಕಿಂಗ್ ವಿರಾಟ್ ಕೊಹ್ಲಿಯೇ ಹೈಲೆಟ್. ಆರ್ಸಿಬಿ ಪ್ಲೇಯರ್ಸ್ ಗುವಾಹಟಿ ರೀಚ್ ಆಗ್ತಿದ್ದಂತೆಯೇ ಅಲ್ಲಿ ಕೊಹ್ಲಿ ಫೀವರ್ ಸ್ಟಾರ್ಟ್ ಆಗಿದೆ. ಆದ್ರೆ ಈ ರಾಯಲ್ಸ್ ಬ್ಯಾಟಲ್ನ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನ ಹೇಳಲೇಬೇಕು. ಐಪಿಎಲ್ ಇತಿಹಾಸದಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಆಗಿರೋ ಕೊಹ್ಲಿಯನ್ನ ಅತೀ ಹೆಚ್ಚು ಸಲ ಔಟ್ ಮಾಡಿರೋ ಬೌಲರ್ ಇದೇ ರಾಜಸ್ಥಾನ ತಂಡದ ಪರ ಆಡ್ತಾ ಇರುವಂಥ ಸಂದೀಪ್ ಶರ್ಮಾ.
ಇದನ್ನೂ ಓದಿ : ಮೊದಲ ಗೆಲುವಿನ ಹುಡುಕಾಟದಲ್ಲಿ KKR – ಕೋಲ್ಕತ್ತಾ ತಂಡಕ್ಕೆ LSG ಸವಾಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾಚಸ್ ಅಂದ್ರೆ ಎದುರಾಳಿ ತಂಡಗಳಿಗೆ ಕಿಂಗ್ ಕೊಹ್ಲಿಯೇ ಮೇನ್ ಟಾರ್ಗೆಟ್ ಆಗಿರ್ತಾರೆ. ಯಾಕಂದ್ರೆ ಒನ್ಸ್ ಅವ್ರು ಸೆಟಲ್ ಆದ್ರೂ ಅಂದ್ರೆ ತಡೆಯೋಕಾಗಲ್ಲ. ಸದ್ಯ ರಾಜಸ್ಥಾನ ಕೂಡ ಈ ಬಗ್ಗೆ ಗ್ರೌಂಡ್ ವರ್ಕ್ ಮಾಡೇ ಇರುತ್ತೆ. ಌಂಡ್ ಕಿಂಗ್ ವಿರಾಟ್ ಕೊಹ್ಲಿಗೆ ಬ್ರೇಕ್ ಹಾಕೋಕೆ ರಾಜಸ್ಥಾನ ತಂಡದಲ್ಲಿರೋ ಅತಿದೊಡ್ಡ ವೆಪನ್ ಅಂದ್ರೆ ಸಂದೀಪ್ ಶರ್ಮಾ.. ಐಪಿಎಲ್ನಲ್ಲಿ ಕಿಂಗ್ ಕೊಹ್ಲಿಯನ್ನ ಅತೀ ಹೆಚ್ಚು ಬಾರಿ ಔಟ್ ಮಾಡಿರೋ ಬೌಲರ್.
ಶುಕ್ರವಾರದ ಮ್ಯಾಚಲ್ಲಿ ಕೊಹ್ಲಿ Vs ಸಂದೀಪ್ ಸಮರ!
ಇಂಡಿಯಲ್ ಪ್ರೀಮಿಯರ್ ಲೀಗ್ನಲ್ಲಿ ಎರಡು ರೀತಿಯ ಸೂಪರ್ ಸ್ಟಾರ್ಸ್ ಇದ್ದಾರೆ. ಒಬ್ರು ಯಾವಾಗ್ಲೂ ಹೆಡ್ಲೈನ್ಸ್ನಲ್ಲೇ ಇದ್ದು ಸುದ್ದಿಯಲ್ಲಿರ್ತಾರೆ. ಸಾಕಷ್ಟು ಹೈಪ್ ಸಿಕ್ತಾ ಇರುತ್ತೆ. ಬಟ್ ಇನ್ನೊಂದು ಕೆಟಗರಿ ಪ್ಲೇಯರ್ಸ್ ಸೈಲೆಂಟ್ ಕಿಲ್ಲರ್ಸ್ ಥರ. ಸದ್ದೇ ಇಲ್ಲದೇ ಸಾಧನೆ ಮಾಡ್ತಾ ಇರ್ತಾರೆ. ಸೋ ಎರಡನೇ ಲಿಸ್ಟ್ಗೆ ಸೇರೋ ಆಟಗಾರನೇ ಸಂದೀಪ್ ಶರ್ಮಾ. ಈತನ ಪರ್ಫಾಮೆನ್ಸ್ ಬಗ್ಗೆ ಜಾಸ್ತಿ ಹೈಪ್ ಸಿಗದೇ ಇದ್ರೂ ರೆಕಾರ್ಡ್ಸ್ ಮಾತ್ರ ಸಾಲಿಡ್ ಆಗಿದೆ. ಅದ್ರಲ್ಲೂ 32 ವರ್ಷದ ಸಂದೀಪ್ ಐಪಿಎಲ್ನಲ್ಲಿ ಸೆಲೆಬ್ರೇಟ್ ಮಾಡೋ ಐಕಾನಿಕ್ ಪ್ಲೇಯರ್ಗಳ ಎದುರಲ್ಲೇ ಸಾಲಿಡ್ ರೆಕಾರ್ಡ್ಸ್ ಹೊಂದಿದ್ದಾರೆ.
ಐಪಿಎಲ್ ನಲ್ಲಿ 7 ಸಲ ಕೊಹ್ಲಿಯನ್ನ ಔಟ್ ಮಾಡಿದ ಏಕೈಕ ಬೌಲರ್!
ಸಂದೀಪ್ ಶರ್ಮಾ ಎಂಥಾ ಕ್ವಾಲಿಟಿ ಬೌಲರ್ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿಯನ್ನ ಅತೀ ಹೆಚ್ಚು ಬಾರಿ ಔಟ್ ಮಾಡಿರೋ ಬೌಲರ್ ಅಂದ್ರೆ ಅದು ಸಂದೀಪ್ ಶರ್ಮಾ. ಒಟ್ಟು 7 ಸಲ ಕೊಹ್ಲಿ ವಿಕೆಟ್ ತೆಗೆದಿದ್ದಾರೆ. ಈವನ್ ಜಸ್ಪ್ರೀತ್ ಬುಮ್ರಾ ಕೈಯಲ್ಲೂ ಇದು ಸಾಧ್ಯವಾಗಿಲ್ಲ. ಬುಮ್ರಾ ಕೊಹ್ಲಿಯನ್ನ 5 ಸಲ ಔಟ್ ಮಾಡಿದ್ರೆ ಆಶಿಶ್ ನೆಹ್ರಾ 6 ಸಲ ಔಟ್ ಮಾಡಿದ್ದಾರೆ. ಕೊಹ್ಲಿ ಅಷ್ಟೇ ಅಲ್ಲದೆ ರೋಹಿತ್ ಶರ್ಮಾ ಪಾಲಿಗೂ ಸಂದೀಪ್ ದುಸ್ವಪ್ನವಾಗಿದ್ದಾರೆ. ಐಪಿಎಲ್ನಲ್ಲೇ ಬರೋಬ್ಬರಿ 6 ಸಲ ಔಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ವಿರುದ್ಧ ನಡೆದ 11 ಓವರ್ಗಳ ಪಂದ್ಯದಲ್ಲೂ ರೋಹಿತ್ ಶರ್ಮಾ ಒನ್ಸ್ ಅಗೇನ್ ಸಂದೀಪ್ ಶರ್ಮಾ ಅವ್ರ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ರು. ಈ ಮೂಲಕ ರೋಕೋ ಜೋಡಿಯಲ್ಲಿ ಒಟ್ಟಾರೆಯಾಗಿ 13 ಸಲ ಔಟ್ ಮಾಡಿದ್ದಾರೆ. ಐಪಿಎಲ್ನಲ್ಲಿ ಬೇರೆ ಯಾವುದೇ ಬೌಲರ್ ಈ ಸಾಧನೆ ಮಾಡಿಲ್ಲ. ಈ ಜೋಡಿ ವಿರುದ್ಧ ಯಾವುದೇ ಬೌಲರ್ 10ಕ್ಕಿಂಗ ಜಾಸ್ತಿ ನಂಬರ್ ದಾಟಿಲ್ಲ. ಬಟ್ ಸಂದೀಪ್ 13 ಸಲ ಔಟ್ ಮಾಡಿ ನಂಬರ್ 1 ಪ್ಲೇಸ್ನಲ್ಲಿದ್ದಾರೆ.
ಇವ್ರಿಬ್ರೇ ಅಲ್ಲದೇ ಕ್ರಿಸ್ಗೇಲ್ 4 ಸಲ, ಸೂರ್ಯಕುಮಾರ್ ಯಾದವ್ ನಾಲ್ಕು ಸಲ, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ತಲಾ ಮೂರ್ಮೂರು ಸಲ ಸಂದೀಪ್ಗೆ ವಿಕೆಟ್ ಒಪ್ಪಿಸಿದ್ದಾರೆ. ಒಟ್ಟಾರೆಯಾಗಿ, ಸಂದೀಪ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 140 ಪಂದ್ಯಗಳನ್ನು ಆಡುವ ಮೂಲಕ 149 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ವೇಗಿಯೊಬ್ಬರು ಗಳಿಸಿದ ಆರನೇ ಅತಿ ಹೆಚ್ಚು ವಿಕೆಟ್ ಆಗಿದೆ. ಹೀಗಾಗಿ ಈ ಸಲ ಕೊಹ್ಲಿ ಮತ್ತು ಸಂದೀಪ್ ಮುಖಾಮುಖಿ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ. 8ನೇ ಸಲ ಔಟ್ ಮಾಡೋಕೆ ಸಂದೀಪ್ ಎದುರು ನೋಡ್ತಿದ್ರೆ ಕೊಹ್ಲಿ ಈ ಸಲ ಚೋಕ್ ಕೊಡೋಕೆ ಕಾಯ್ತಾ ಇರ್ತಾರೆ.

ನೋಡಿರಿ

