ಏಕರೂಪ ನಾಗರಿಕ ಸಂಹಿತೆ: ಬ್ಯಾನ್ ಆಗುತ್ತಾ ಬಹುಪತ್ನಿತ್ವ? – ಕೇಂದ್ರ ಸಚಿವರು ಹೇಳಿದ್ದೇನು?

ಏಕರೂಪ ನಾಗರಿಕ ಸಂಹಿತೆ: ಬ್ಯಾನ್ ಆಗುತ್ತಾ ಬಹುಪತ್ನಿತ್ವ? – ಕೇಂದ್ರ ಸಚಿವರು ಹೇಳಿದ್ದೇನು?

ನವದೆಹಲಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿದ್ದು, ನಾಲ್ವರು ಹುಡುಗಿಯರನ್ನು ಮದುವೆ  ಆಗುವುದು ಅಸ್ವಾಭಾವಿಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಎರಡು ನಾಗರಿಕ ಸಂಹಿತೆ ಹೊಂದಿರುವ ಯಾವುದೇ ಮುಸ್ಲಿಂ ದೇಶ ನಿಮಗೆ ತಿಳಿದಿದೆಯೆ? ಒಬ್ಬ ಪುರುಷ ಒಂದು ಮಹಿಳೆಯನ್ನು ಮದುವೆಯಾಗುವುದು ಸಾಮಾನ್ಯ, ಆದರೆ ಅದೇ ಪುರುಷ ನಾಲ್ಕೈದು ಮಹಿಳೆಯರನ್ನು ಮದುವೆ ಆಗುವುದು ಅಸಹಜವಾಗಿದೆ. ಇನ್ನು ಪ್ರಗತಿಪರ ಹಾಗೂ ವಿದ್ಯಾವಂತ ಮುಸ್ಲಿಮರು 4 ಮದುವೆ ಆಗುವುದಿಲ್ಲ. ಏಕರೂಪ ನಾಗರಿಕ ಸಂಹಿತೆಯು ಯಾವುದೇ ಧರ್ಮದ ವಿರುದ್ಧವಲ್ಲ. ಅದು ದೇಶದ ಅಭಿವೃದ್ಧಿಗಾಗಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬ್ರೆಜಿಲ್‌ಗೆ ಪೆನಾಲ್ಟಿ ಶಾಕ್ – ಅರ್ಜೆಂಟೀನಾ ಎದುರು ನೆದರ್ಲೆಂಡ್ ಲಾಕ್

‘ಸಮಾಜದಲ್ಲಿ ಗುಣಾತ್ಮಕ ಬದಲಾವಣೆ’ ಆಗಬೇಕು. ಏಕರೂಪ ನಾಗರಿಕ ಸಂಹಿತೆ ಯಾವುದೇ ಧರ್ಮ ಅಥವಾ ಪಂಥಕ್ಕೆ ವಿರುದ್ಧವಾಗಿಲ್ಲ. “ಹಿಂದೂ, ಮುಸ್ಲಿಂ ಅಥವಾ ಸಿಖ್ ಧರ್ಮದ ಹೊರತಾಗಿ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕಲ್ಲವೇ..? ನಾವು ಒಟ್ಟಾಗಿ ನಮ್ಮ ದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಿತಿನ್‌ ಗಡ್ಕರಿ ಹೇಳಿದರು.

ರಾಜ್ಯಾದ್ಯಂತ ಎಲ್ಲಾ ಪಕ್ಷಗಳು ಏಕರೂಪ ನಾಗರಿಕ ಸಂಹಿತೆ ಕುರಿತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಅದು ಮಾನವೀಯತೆ ಹಾಗೂ ರಾಷ್ಟ್ರಕ್ಕೆ ಒಳ್ಳೆಯದು ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆಯನ್ನು ತರುವುದು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ. ಅಕ್ಟೋಬರ್ 29 ರಂದು ಗುಜರಾತ್ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಕ್ಕೆ ಸಮಿತಿಯನ್ನು ರಚಿಸುವುದಾಗಿ ಘೋಷಿಸಿತ್ತು. ಅಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಕರೂಪ ನಾಗರಿಕ ಸಂಹಿತೆಯನ್ನು ದೇಶಾದ್ಯಂತ ತರಲು ಬಿಜೆಪಿ ಬದ್ಧವಾಗಿದೆ.  “ಬಿಜೆಪಿ ಮಾತ್ರವಲ್ಲದೆ, ಸಂವಿಧಾನ ರಚನಾ ಸಭೆಯು ಸಂಸತ್ತಿಗೆ ಸಲಹೆ ನೀಡಿತ್ತು” ಎಂದು ಅವರು ಹೇಳಿದರು.

suddiyaana