ಯೋಗ.. ಧ್ಯಾನ.. ಹಾಲೆಂಡ್ ಕಾಪಿ – ಅಭಿಷೇಕ್ ಸೆಲೆಬ್ರೇಷನ್ ಸುನಾಮಿ
ಯಥಾ ಗುರು.. ತಥಾ ಶಿಷ್ಯ!

ಯೋಗ.. ಧ್ಯಾನ.. ಹಾಲೆಂಡ್ ಕಾಪಿ – ಅಭಿಷೇಕ್ ಸೆಲೆಬ್ರೇಷನ್ ಸುನಾಮಿಯಥಾ ಗುರು.. ತಥಾ ಶಿಷ್ಯ!

ದಂಡಂ ದಶಗುಣಂ. ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವ್ರ ಮಂತ್ರವೇ ದಂಡಂ ದಶಗುಣಂ. 3ನೇ ಮ್ಯಾಚಲ್ಲಂತೂ ಅಕ್ಷರಶಃ ಸುನಾಮಿಯನ್ನೇ ಎಬ್ಬಿಸಿದ್ರು. ಮೊದಲ ಓವರ್​​ನಿಂದಲೇ ಆಫ್ಘನ್ ಬೌಲರ್​ಗಳನ್ನ ಚೆಂಡಾಡಿದ ಅಭಿಷೇಕ್ ಟೆಸ್ಟ್ ಆಡುವ ನೇಷನ್ಸ್ ವಿರುದ್ಧದ ಫಾಸ್ಟೆಸ್ಟ್ ಸೆಂಚುರಿಯ ಚರಿತ್ರೆ ಸೃಷ್ಟಿಸಿದ್ರು. ಅಫ್ಘಾನಿಸ್ತಾನ ವಿರುದ್ಧ ಬ್ಯಾಟಿಂಗ್​ನಲ್ಲಿ ರುದ್ರತಾಂಡವ ಆಡಿದ ಅಭಿಷೇಕ್ ಸೆಲೆಬ್ರೇಷನ್ ನಲ್ಲಿ ಮಾತ್ರ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದು ವಿಶೇಷವಾಗಿತ್ತು. ಇದೇ ಸೆಲೆಬ್ರೇಷನ್ ಈಗ ಫುಲ್ ಟ್ರೆಂಡಿಂಗ್​ನಲ್ಲಿದೆ. ಌಂಡ್ ಹಾಟ್ ಟಾಪಿಕ್ ಕೂಡ. ಅಭಿಷೇಕ್ ಜ್ವಾಲೆ ಹಿಂದಿನ ಶಕ್ತಿಯೇ ಗುರು ಯುವರಾಜ್ ಸಿಂಗ್ ಅನ್ನೋದೂ ರಿವೀಲ್ ಆಗಿದೆ.

ಇದನ್ನೂ ಓದಿ : ಪಂತ್ ಕೈಗೆ ‘ರೆಸ್ಟ್ ಆಫ್ ಇಂಡಿಯಾ’ -ಏಷ್ಯನ್ ಗೇಮ್‌ನಿಂದ ನಿತೀಶ್ OUT

ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವ್ರ ಬ್ಯಾಟಿಂಗೇ ಫುಲ್ ಹೈಲೆಟ್. ಮೂರು ಪಂದ್ಯಗಳಲ್ಲಿ 229 ರನ್‌ ಗಳಿಸಿ ಸರಣಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ರು. ಅದ್ರಲ್ಲೂ ಮೂರನೇ ಮ್ಯಾಚಲ್ಲಿ 30 ಬಾಲಲ್ಲೇ ಸೆಂಚುರಿ ಬಾರಿಸಿ ರೋಹಿತ್ ಶರ್ಮಾ ಹೆಸ್ರಲ್ಲಿದ್ದ ಅತೀವೇಗದ ಶತಕದ ದಾಖಲೆಯನ್ನ ಬ್ರೇಕ್ ಮಾಡಿದ್ರು. ಇದ್ರಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್‌ಗಳು ಸೇರಿದ್ವು. ಹೀಗೆ ಸ್ಫೋಟಕ ಶತಕದ ಬಳಿಕ ಮಾಡಿದ ಸೆಲೆಬ್ರೇಷನ್ ಕಾಪಿ ಮಾಡಿದ್ದು ಅನ್ನೋ ರೀತಿಯ ಚರ್ಚೆ ಶುರುವಾಗಿದೆ. ಆದ್ರೆ ಇದಕ್ಕೆಲ್ಲಾ ಕ್ಲಾರಿಟಿ ಕೊಟ್ಟಿರೋ ಅಭಿಷೇಕ್ ತಮ್ಮ ಸೆಲೆಬ್ರೇಷನ್ ಹಿಂದಿನ ಉದ್ದೇಶವನ್ನೂ ಬಿಚ್ಚಿಟ್ಟಿದ್ದಾರೆ.

ಫುಟ್ ಬಾಲ್ ತಾರೆ ಹಾಲೆಂಡ್ ಕಾಪಿ ಮಾಡಿಲ್ಲ ಎಂದ ಅಭಿಷೇಕ್!

ಇನ್ನು ಸೆಂಚುರಿ ಬಳಿಕ ಅಭಿಷೇಕ್ ಶರ್ಮಾ ಮಾಡಿದ್ದ ಸೆಲೆಬ್ರೇಷನ್ ಬಗ್ಗೆ ಚರ್ಚೆಗಳು ನಡೀತಿವೆ. ಶತಕ ಪೂರೈಸಿದ ನಂತರ ಅಭಿಷೇಕ್ ಶರ್ಮಾ ಸ್ಪೆಷಲ್ಲಾಗಿ ಆಚರಿಸಿದ್ರು. ಹೆಲ್ಮೆಟ್ ತೆಗೆದು ನೆಲದ ಮೇಲೆ ಕುಳಿತು ಧ್ಯಾನ ಯೋಗ ಭಂಗಿಯಲ್ಲಿ ಕುಳಿತಿದ್ರು. ಅಭಿಷೇಕ್ ತಂದೆ ಮಗನ ಸಾಧನೆ ನೋಡಿ ಸಂಭ್ರಮಿಸಿದ್ರೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ನಗುಮೊಗದಲ್ಲೇ ಖುಷಿ ಪಡ್ತಿದ್ರು. ಈ ಸೆಲೆಬ್ರೇಷನ್ ಸ್ಟೈಲ್​ನ ಕೆಲವ್ರು ಯೋಗ ಅಂದ್ರೆ ಇನ್ನೂ ಕೆಲವ್ರು ಧ್ಯಾನ ಅಂತಿದ್ರು. ಮತ್ತೆ ಕೆಲವ್ರು ತಪಸ್ಸು, ಶಿವನ ಧ್ಯಾನ ಅಂತೆಲ್ಲಾ ತಮ್ಮದೇ ರೀತಿಯಲ್ಲಿ ವಿವರಣೆ ಕೊಡ್ತಿದ್ರು. ಅದ್ರಲ್ಲೂ ಇದು ಫುಟ್​ಬಾಲ್ ತಾರೆ ಎರ್ಲಿಂಗ್ ಹಾಲೆಂಡ್ ಕೂಡ ಇದೇ ಥರ ಮಾಡಿದ್ದು ಅಭಿ ಕೂಡ ಅದನ್ನೇ ಕಾಪಿ ಮಾಡಿದ್ದಾರೆ ಎಂದಿದ್ರು. ಆದ್ರೆ ಇದಕ್ಕೆ ಅಭಿಷೇಕ್ ರಿಪ್ಲೈ ಮಾಡಿದ್ದಾರೆ. ತಮ್ಮ ಸ್ಟೈಲ್ ಹಿಂದಿನ ಸತ್ಯವನ್ನೂ ರಿವೀಲ್ ಮಾಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅಭಿಷೇಕ್, ನಾನು ಯಾವುದೇ ಹಾಲೆಂಡ್ ಅವ್ರ ಟ್ರೇಡ್​ ಮಾರ್ಕ್ ಕಾಪಿ ಮಾಡಿಲ್ಲ. ಕ್ರಿಕೆಟ್ ಆಡುವ ಒತ್ತಡವನ್ನು ನಿಭಾಯಿಸಲು ಕಳೆದ ಒಂದು ವರ್ಷದಿಂದ ಧ್ಯಾನವನ್ನು ತನ್ನ ಜೀವನದ ಒಂದು ಭಾಗವಾಗಿ ಬಳಸುತ್ತಿದ್ದೇನೆ. ಧ್ಯಾನವು ತನಗೆ ಬಹಳಷ್ಟು ಸಹಾಯ ಮಾಡಿದೆ ಮತ್ತು ಅದರಿಂದ ಆಗುವ ಲಾಭಗಳ ಬಗ್ಗೆ ನನ್ನ ಆಚರಣೆಯ ಮೂಲಕ ಬೇರೆಯವ್ರಿಗೂ ತಿಳಿಸಲು ಬಯಸಿದ್ದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಈಗಾಗ್ಲೇ ಒಂದು ವರ್ಷದಿಂದಲೂ ನಾನು ಧ್ಯಾನ ಮಾಡುತ್ತಿದ್ದೇನೆ. ವರ್ಷವಿಡೀ ಕ್ರಿಕೆಟ್ ಆಡುವಾಗ, ಕ್ರಿಕೆಟಿಗನಾಗಿ ಸಾಕಷ್ಟು ಸಲ ಅಪ್ಸ್ ಌಂಡ್ ಡೌನ್ಸ್ ನೋಡಿದ್ದೇನೆ. ಇಂಥಾ ಟೈಮಲ್ಲಿ ನಿಮ್ಮ ಮನಸ್ಸನ್ನ ಹೇಗೆ ಸ್ಥಿರವಾಗಿ ಇಟ್ಟುಕೊಳ್ಳುತ್ತೀರಿ. ಮೆಡಿಟೇಷನ್ ನಿಜವಾಗಿಯೂ ವರ್ಕ್ ಆಗುತ್ತೆ. ನನಗೂ ಕೂಡ ಸಹಾಯ ಮಾಡಿದೆ ಎನ್ನುವ ಮೂಲಕ ಧ್ಯಾನದ ಮಹತ್ವವನ್ನ ತಿಳಿಸಿದ್ದಾರೆ. ಌಂಡ್ ಇದೇ ವೇಳೆ ತಮ್ಮ ಗುರುವಿನ ಮಹತ್ವವನ್ನ ಹೇಳೋದನ್ನೂ ಮರೆಯಲಿಲ್ಲ.

ಅಭಿಷೇಕ್ ಬ್ಯಾಟಿಂಗ್ ಹಿಂದಿನ ಶಕ್ತಿಯೇ ಯುವರಾಜ್ ಸಿಂಗ್!

ತಮ್ಮ ಸ್ಫೋಟಕ ಶತಕದ ಬಳಿಕ ಗುರು ಯುವಿ ಬಗ್ಗೆ ಮಾತನಾಡಿದ ಅಭಿಷೇಕ್, ಯುವಿ ಬಗ್ಗೆ ಅತ್ಯಂತ ಗೌರವ ಮತ್ತು ಕೃತಜ್ಞತೆಯ ಮಾತುಗಳನ್ನಾಡಿದ್ರು. ಫಸ್ಟ್ ಟೈಂ ನನ್ನನ್ನ ನಂಬಿದ್ದೇ ಯುವಿ ಪಾಜಿ. ನನ್ನ ಸಾಮರ್ಥ್ಯವನ್ನು ಮೊದಲ ಬಾರಿಗೆ ಗುರುತಿಸಿ, ನನ್ನನ್ನು ನಂಬಿದ ವ್ಯಕ್ತಿ. ಅವ್ರು ನನ್ನನ್ನು ನಡೆಸಿಕೊಂಡ ರೀತಿ ಮತ್ತು ನನ್ನನ್ನು ಪಂದ್ಯಗಳಿಗೆ ಸಿದ್ಧಪಡಿಸಿದ ರೀತಿ ಅದ್ಭುತವಾಗಿದ್ದು. ಎಂಥದ್ದೇ ಪರಿಸ್ಥಿತಿ ಇದ್ರೂ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ.  ನಾನು ಕ್ರೀಸ್‌ನಲ್ಲಿ ನಿಂತು 15 ರಿಂದ 20 ನೇ ಓವರ್‌ವರೆಗೂ ಬ್ಯಾಟಿಂಗ್ ಮಾಡಬೇಕು ಅನ್ನೋದೇ ಅವ್ರ ಬಯಕೆ.  ಜಿಂಬಾಬ್ವೆ ವಿರುದ್ಧ ನಾನು ಡಕ್ ಔಟ್ ಆದಾಗ ಯುವಿ ಖುಷಿ ಪಟ್ಟಿದ್ರು. ಎರಡನೇ ಪಂದ್ಯದಲ್ಲೇ ಶತಕ ಬಾರಿಸಿದಾಗ ವಿಡಿಯೋ ಕಾಲ್ ಮಾಡಿ  ಫೇಲ್ಯೂರ್​ಗಳಿಂದ ಕಲಿಯೋ ಪಾಠ ದೊಡ್ಡದು ಅನ್ನೋದನ್ನ ಹೇಳಿದ್ದರು ಎಂದಿದ್ದಾರೆ. ಹಾಗೇ ಈ ಪಂದ್ಯಕ್ಕೂ ಮುನ್ನ ಮೆಸೇಜ್ ಮಾಡಿದ್ರು. ಪ್ರತಿ ಬಾಲಲ್ಲೂ ಫೋರ್ಸ್​ಫುಲಿ ಬಿಗ್ ಹಿಟ್​ಗೆ ಬಾರಿಸೋಕೆ ಹೋಗ್ಬೇಡ. ಸಿಂಗಲ್ಸ್ ತಗೊಂಡು ಸ್ಟ್ರೈಕ್ ರೊಟೇಟ್ ಮಾಡು ಎಂದಿದ್ರು. ಹೀಗಾಗಿ ನನ್ನ ಬ್ಯಾಟಿಂಗ್ ಹಿಂದಿನ ಶಕ್ತಿಯೇ ನನ್ನ ಗುರು ಅನ್ನೋದನ್ನ ರಿವೀಲ್ ಮಾಡಿದ್ದಾರೆ. ಅಭಿಷೇಕ್​ರ ಸೆಂಚುರಿ ಬಳಿಕ ಗುರು ಯುವಿ ಮತ್ತು ಶಿಷ್ಯ ಅಭಿ ಧ್ಯಾನಸ್ಥರಾಗಿ ಕುಳಿತಿರೋ ಫೋಟೋಸ್ ಕೂಡ ವೈರಲ್ ಆಗಿವೆ. ಯಥಾ ಗುರು ತಥಾ ಶಿಷ್ಯ ಅಂತಾ ಫ್ಯಾನ್ಸ್ ಕಮೆಂಟ್ಸ್ ಮಾಡ್ತಿದ್ದಾರೆ.

ಒಟ್ನಲ್ಲಿ ಅಫ್ಘಾನಿಸ್ತಾನ ಸರಣಿಯಲ್ಲಿ ಅಭಿಷೇಕ್ ಶರ್ಮಾ ಮತ್ತೆ ಧೂಳೆಬ್ಬಿಸಿ ಗ್ರೇಟ್ ಕಂ ಬ್ಯಾಕ್ ಮಾಡಿದ್ದಾರೆ. ಅವ್ರ ಸೆಲೆಬ್ರೇಷನ್ ಬಗ್ಗೆ ಯಾರು ಎಷ್ಟೇ ಮಾತನಾಡಿದ್ರೂ ಅವ್ರ ಬ್ಯಾಟ್​ನಲ್ಲೇ ಉತ್ತರ ಕೊಡ್ತಿದ್ದಾರೆ. ನಮಸ್ಕಾರ.

Shantha Kumari

Leave a Reply

Your email address will not be published. Required fields are marked *