ಡಬಲ್ ಡೆಕ್ಕರ್ ಬಸ್​, ಟ್ರಕ್​ ಮುಖಾಮುಖಿ ಡಿಕ್ಕಿ – 20 ಮಂದಿ ಸಜೀವ ದಹನ

ಡಬಲ್ ಡೆಕ್ಕರ್ ಬಸ್​, ಟ್ರಕ್​ ಮುಖಾಮುಖಿ ಡಿಕ್ಕಿ – 20 ಮಂದಿ ಸಜೀವ ದಹನ

ಮೆಕ್ಸಿಕೋದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಡಬಲ್‌ ಡೆಕ್ಕರ್‌ ಬಸ್‌ ಹಾಗೂ ಟ್ರಕ್‌ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ್ದು, 20 ಮಂದಿ ಜನರು ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಧರ್ಮ ಧ್ವಜ ಸಂಘರ್ಷದ ಕಿಚ್ಚು! – ಬೆಂಗಳೂರಿನ ಮತ್ತೊಂದು ಕಡೆ ಹಸಿರು ಧ್ವಜ ಹಾರಾಟ!

ಡಬಲ್ ಡೆಕ್ಕರ್ ಬಸ್ ಮತ್ತು ಟ್ರಕ್ ಡಿಕ್ಕಿಯಾದ ರಭಸಕ್ಕೆ ವಾಹನಗಳ ನಡುವೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ. ಮಜಟ್ಲಾನ್ ಮತ್ತು ಲಾಸ್ ಮೊಚಿಸ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬಸ್​ನಲ್ಲಿ 50 ಜನ ಪ್ರಯಾಣಿಕರಿದ್ದರು. 20 ಮಂದಿ ಸಜೀವ ದಹನವಾಗಿದ್ದಾರೆ. ಜನರ ಸುಟ್ಟ ದೇಹಗಳನ್ನು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಅಪಘಾತದ ನಂತರ ಸ್ಥಳದಲ್ಲೇ ಬಸ್‌ ಹೊತ್ತಿ ಉರಿದಿದ್ದು, ಸ್ಥಳಕ್ಕೆ ತುರ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ಸಿನಾಲೋವಾ ರಾಜ್ಯದ ಅಟಾರ್ನಿ ಜನರಲ್ ಸಾರಾ ಕ್ವಿನೋನೆಜ್ ಮಾಹಿತಿ ನೀಡಿದ್ದಾರೆ.

ಮೆಕ್ಸಿಕೋದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ.  ಆಗಾಗ ಹೆಚ್ಚಿನ ವೇಗ, ಚಾಲಕನ ನಿರ್ಲಕ್ಷ್ಯ, ವಾಹನಗಳ ಕಳಪೆ ಮಟ್ಟದಿಂದ ಅಪಘಾತ ಸಂಭವಿಸುತ್ತದೆ. ದೇಶದ ಹೆದ್ದಾರಿಗಳಲ್ಲಿ ಸರಕು ಸಾಗಣೆ ಟ್ರಕ್‌ಗಳನ್ನು ಒಳಗೊಂಡ ಅಪಘಾತಗಳೂ ಹೆಚ್ಚಿವೆ. ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಪಘಾತಗಳಲ್ಲಿ, ಜುಲೈ 2023 ರಲ್ಲಿ ನಡೆದ ಅಪಘಾತ ಭೀಕರವಾಗಿತ್ತು. ಈ ಅಪಘಾತದಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿದರು, ಪ್ರಯಾಣಿಕರಿದ್ದ ಬಸ್ ಪರ್ವತದ ರಸ್ತೆಯಿಂದ ಕೆಳಗಿಳಿದು ದಕ್ಷಿಣ ರಾಜ್ಯವಾದ ಓಕ್ಸಾಕಾದಲ್ಲಿ ಕಂದರಕ್ಕೆ ಬಿದ್ದಿತು.

Shwetha M