ಯುದ್ಧಕ್ಕೆ ಸಿದ್ಧರಾಗಿ.. ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ! – ಮಿಲಿಟರಿ ಅಧಿಕಾರಿಗಳಿಗೆ ಕಿಮ್‌ ಜಾಂಗ್‌ ಉನ್‌ ಸೂಚನೆ

ಯುದ್ಧಕ್ಕೆ ಸಿದ್ಧರಾಗಿ.. ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ! – ಮಿಲಿಟರಿ ಅಧಿಕಾರಿಗಳಿಗೆ ಕಿಮ್‌ ಜಾಂಗ್‌ ಉನ್‌ ಸೂಚನೆ

ಮುಂದೆ ನಡೆಯಬಹುದಾದ ಯುದ್ದಕ್ಕೆ ಸಿದ್ದರಾಗಿ ಎಂದು ಉತ್ತರ ಕೊರಿಯಾ ದೊರೆ ಕಿಮ್‌ ಜಾಂಗ್‌ ಉನ್‌ ಹೇಳಿದ್ದಾರೆ. ದೇಶದಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ ಮತ್ತು ಮಿಲಿಟರಿ ಡ್ರಿಲ್ಸ್ ಗಳನ್ನು ವಿಸ್ತರಿಸಿ ಎಂದು ಕಿಮ್ ಜಾಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಕಿಮ್ ಜಾಂಗ್ ಉನ್‌ ಅವರು ತನ್ನ ಮಿಲಿಟರಿಯ ಹಿರಿಯ ಜನರಲ್ ನನ್ನು ವಜಾಗೊಳಿಸಿದ್ದಾರೆ. ಈ ಬೆನ್ನಲ್ಲೇ ಅಲ್ಲಿನ ಅಧಿಕಾರಿಗಳಿಗೆ ಮುಂದೆ ಬರಬಹುದಾದ ಯುದ್ಧಕ್ಕೆ ಹೆಚ್ಚಿನ ಸಿದ್ದತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಒಬ್ಬ ತಪ್ಪು ಮಾಡಿದ್ರೆ ಮೂರು ತಲೆಮಾರಿನವರಿಗೆ ಶಿಕ್ಷೆ – ಉತ್ತರ ಕೊರಿಯಾದಲ್ಲಿವೆ ವಿಚಿತ್ರ ಕಾನೂನುಗಳು

ಕಿಮ್‌ಜಾಂಗ್‌ ಉನ್‌ ಅವರು ಉತ್ತರ ಕೊರಿಯಾದ ಶತ್ರುಗಳನ್ನು ತಡೆಯಲು ಕ್ರಮಗಳ ಯೋಜನೆಗಳನ್ನು ಚರ್ಚಿಸಿದ ಕೇಂದ್ರೀಯ ಮಿಲಿಟರಿ ಆಯೋಗದ ಸಭೆಯಲ್ಲಿ  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಿಲಿಟರಿಯ ಉನ್ನತ ಜನರಲ್  ಸ್ಟಾಫ್ ಪಾಕ್ ಸು ಇಲ್ ಬದಲಿಗೆ ಜನರಲ್ ರಿ ಯೋಂಗ್ ಗಿಲ್ ಅವರನ್ನು ಹೆಸರಿಸಲಾಗಿದೆ ಎಂದು ವರದಿಯಾಗಿದೆ.

ಕಿಮ್‌ ಜಾಂಗ್‌ ಉನ್‌ ಕಳೆದ ವಾರ ಅವರು ವೆಪನ್ ಫ್ಯಾಕ್ಟರಿಗೆ ಭೇಟಿ ನೀಡಿದ್ದು, ಅಲ್ಲಿ ಹೆಚ್ಚು ಕ್ಷಿಪಣಿ ಎಂಜಿನ್‌ ಗಳು, ಫಿರಂಗಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಸೂಚಿಸಿದ್ದರು.

ಉತ್ತರ ಕೊರಿಯಾ ದೇಶವು ಉಕ್ರೇನ್ ವಿರುದ್ಧದ ಯುದ್ದಕ್ಕೆ ರಷ್ಯಾಕ್ಕೆ ಫಿರಂಗಿ ಶೆಲ್ ಗಳು, ರಾಕೆಟ್‌ ಗಳು ಮತ್ತು ಕ್ಷಿಪಣಿಗಳನ್ನು ಸರಬರಾಜು ಮಾಡುತ್ತಿದೆ ಎಂದು ಯುಎಸ್ ಎ ಆರೋಪಿಸಿತ್ತು. ರಷ್ಯಾ ಮತ್ತು ಉತ್ತರ ಕೊರಿಯಾ ಆ ಆರೋಪಗಳನ್ನು ನಿರಾಕರಿಸಿವೆ.

suddiyaana