ಉತ್ತರ ಕೊರಿಯಾದಲ್ಲಿ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗ – ಏನಿದರ ಉದ್ದೇಶ..?

ಉತ್ತರ ಕೊರಿಯಾದಲ್ಲಿ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗ – ಏನಿದರ ಉದ್ದೇಶ..?

ಉತ್ತರ ಕೊರಿಯಾವು ಕಳೆದ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗ ನಡೆಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ಉತ್ತರ ಕೊರಿಯಾ ತನ್ನ ಪೂರ್ವ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ. ಸೋಮವಾರ ಬೆಳಗ್ಗೆ ಉಡಾವಣೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿದ್ದಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಅಭ್ಯಾಸದ ನಂತರ ಉತ್ತರ ಕೊರಿಯಾ ಪೂರ್ವ ಸಮುದ್ರದ ಕಡೆಗೆ ಎರಡು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ.

ಇದನ್ನೂ ಓದಿ : ವಿದೇಶಿ ಪ್ರಯಾಣದಲ್ಲಿ ದಾಖಲೆ ಬರೆದ ಭಾರತೀಯರು – ಬರೋಬ್ಬರಿ $10 ಬಿಲಿಯನ್ ಖರ್ಚು..!

48 ಗಂಟೆಗಳಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಉತ್ತರ ಕೊರಿಯಾದ ಸುಖೋನ್ ಪ್ರದೇಶದಿಂದ ಬೆಳಿಗ್ಗೆ 7 ಗಂಟೆಗೆ ಉಡಾವಣೆ ಮಾಡಲಾಗಿತ್ತು ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು (ಜೆಸಿಎಸ್) ತಿಳಿಸಿದ್ದಾರೆ. 395 ಕಿಮೀ ಮತ್ತು 337 ಕಿಮೀ ದೂರದ ಗುರಿಗಳ ಮೇಲೆ ಎರಡು ಸ್ಫೋಟಕಗಳನ್ನು ಹಾರಿಸಿರುವುದಾಗಿ ದಕ್ಷಿಣ ಕೊರಿಯಾ ಹೇಳಿದೆ. B-1B ಸ್ಟ್ರಾಟೆಜಿಕ್ ಪಾಲುದಾರಿಕೆಯ ಭಾಗವಾಗಿ ಯುಎಸ್ ಮತ್ತು ದಕ್ಷಿಣ ಕೊರಿಯಾ ಭಾನುವಾರ ಜಂಟಿ ಏರ್ ಡ್ರಿಲ್​ಗಳನ್ನು ನಡೆಸಿದ ಒಂದು ದಿನದ ನಂತರ ಉತ್ತರ ಕೊರಿಯಾ ಪರೀಕ್ಷೆ ನಡೆಸಿದೆ.

ಘಟನೆ ಬಳಿಕ ದಕ್ಷಿಣ ಕೊರಿಯಾ ತನ್ನ ಕಣ್ಗಾವಲು ಮತ್ತು ಜಾಗರೂಕತೆಯನ್ನು ಬಲಪಡಿಸುವ ಜೊತೆಗೆ ಯುಎಸ್ ಜೊತೆ ನಿಕಟ ಸಂಬಂಧವನ್ನು ಉಳಿಸಿಕೊಳ್ಳುವುದಾಗಿ ಹೇಳಿದೆ. ಉತ್ತರ ಕೊರಿಯಾ ಶನಿವಾರ ಅಪಾಯಕಾರಿ ದೂರಗಾಮಿ ಕ್ಷಿಪಣಿಯನ್ನು ಪರೀಕ್ಷಿಸಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಮಾರಣಾಂತಿಕ ಪರಮಾಣು ದಾಳಿಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ. ಜಂಟಿ ಕಸರತ್ತು ನಡೆಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳಿಗೆ ಎಚ್ಚರಿಕೆ ನೀಡಿತ್ತು.

ಜಪಾನ್‌ನ ಪ್ರಧಾನ ಮಂತ್ರಿ ಕಚೇರಿ ಕೂಡ ‘ಉತ್ತರ ಕೊರಿಯಾ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿದೆ’ ಎಂದು ಟ್ವೀಟ್ ಮಾಡಿದೆ.

suddiyaana