ಇಂತಹ ಆಹಾರಗಳನ್ನು ತಿಂದ ಬಳಿಕ ತಪ್ಪಿಯೂ ಹಾಲು ಸೇವಿಸಬಾರದು!

ಇಂತಹ ಆಹಾರಗಳನ್ನು ತಿಂದ ಬಳಿಕ ತಪ್ಪಿಯೂ ಹಾಲು ಸೇವಿಸಬಾರದು!

ನಮ್ಮ ಆಹಾರ ಪದ್ಧತಿ ಸಮತೋಲನವಾಗಿದ್ದರೆ, ನಮ್ಮ ಆರೋಗ್ಯ ಕೂಡ ಹೆಚ್ಚು ಕಾಲ ಚೆನ್ನಾಗಿರುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರ ಪದಾರ್ಥಗಳು ಆರೋಗ್ಯಕರ ಎನಿಸಿದರೂ ಕೂಡ ಅವುಗಳಿಂದ ಅನಾರೋಗ್ಯ ಉಂಟಾಗುತ್ತದೆ. ಆಯುರ್ವೇದ ಶಾಸ್ತ್ರ ಹೇಳುವ ಪ್ರಕಾರ ನಾವು ತಿನ್ನುವ ಒಂದೊಂದು ಆಹಾರ ಪದಾರ್ಥಗಳು ನಮಗೆ ಒಂದೊಂದು ರೀತಿಯ ಆರೋಗ್ಯದ ಪ್ರಭಾವಗಳನ್ನು ಉಂಟು ಮಾಡುತ್ತವೆ. ಅದೇ ರೀತಿ ಅವುಗಳು ಜೀರ್ಣವಾಗಲು ಬೇರೆ ಬೇರೆ ರೀತಿಯ ಜೀರ್ಣ ಶಕ್ತಿಯ ಪರಿಸರ ಬೇಕಾಗುತ್ತದೆ. ಮುಖ್ಯವಾಗಿ ಕೆಲವೊಂದು ಆಹಾರಗಳನ್ನು ಸೇವಿಸಿದ ನಂತರ ಅನೇಕ ಹಾಲು ಕುಡಿಯುತ್ತಾರೆ. ಕೆಲವೊಂದು ಆಹಾರಗಳನ್ನು ಸೇವಿಸದ ಬಳಿಕ ಹಾಲು ಕುಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ.

ಇದನ್ನೂ ಓದಿ: ಮಾತು-ಮಾತಿಗೂ ಮಕ್ಕಳಿಗೆ ಹೊಡೆಯೋಕು ಮೊದ್ಲು ಈ ವಿಚಾರ ತಿಳಿಯಲೇ ಬೇಕು!

ಹಾಲು ಆರೋಗ್ಯಕ್ಕೆ ಅತ್ಯುತ್ತಮ. ಹಾಲಿನಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಪ್ರೋಟೀನ್ ಸಿಗುತ್ತದೆ. ಆದರೆ ಹಾಲಿನ ಜತೆ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು.  ಕೆಲವೊಂದು ಆಹಾರ ತಿಂದ‌ಮೇಲೆ ಹಾಲು‌ಕುಡಿದ್ರೆ  ಹೊಟ್ಟೆನೋವು, ಸುಸ್ತು, ಗ್ಯಾಸ್ಟ್ರಿಕ್ ಗೆ ಕಾರಣವಾಗಬಹುದು. ಹಾಗಾದ್ರೆ ಹಾಲಿನ ಜತೆ ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ನಿಮ್ಮಲ್ಲಿ ಪ್ರಶ್ನೆ ಮೂಡೋದು ಸಹಜ. ಮೊಟ್ಟೆ, ಮಾಂಸ ಮತ್ತು ಮೀನು ಸೇವನೆಯ ನಂತರ ಹಾಲು ಕುಡಿಯಬಾರದು. ಇದು ತೂಕ ಹೆಚ್ಚಳ ಹಾಗೂ ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ಮೀನು ತಿಂದ ಬಳಿಕ ಹಾಲು ಕುಡಿದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆಗಳಿರುತ್ತವೆ.

ಹಾಲು ಕುಡಿದ ತಕ್ಷಣ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಮುಂತಾದವುಗಳನ್ನು ಸೇವಿಸಬಾರದು. ಬಾಳೆಹಣ್ಣು, ಚೆರ್ರಿ ಹಣ್ಣುಗಳ ಜೊತೆಗೂ ಹಾಲು  ಸೇವಿಸಬಾರದು. ಆದರೆ ಮಾವಿನಹಣ್ಣು, ಬೆಣ್ಣೆಹಣ್ಣು, ಅಂಜೂರ, ಖರ್ಜೂರ ಈ ರೀತಿಯ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸಬಹುದು. ಉಪ್ಪಿನ ಅಂಶ ಹೆಚ್ಚಿರುವ ಆಹಾರ, ಮೊಸರು ತಿಂದ ಬಳಿಕ ಹಾಲು ಕುಡಿಯಬಾರದು. ಇವುಗಳನ್ನು ಸೇವಿಸಿ ಹಾಲು ಕುಡಿದ್ರೆ ಆರೋಗ್ಯ ಕೆಡುವ ಸಾಧ್ಯತೆ ಇದೆ.

Shwetha M