ವರ್ಷಾಂತ್ಯದ ವೇಳೆಗೆ ಚಂದ್ರನ ಮೇಲೆ  4ಜಿ  ನೆಟ್ ವರ್ಕ್!  

ವರ್ಷಾಂತ್ಯದ ವೇಳೆಗೆ ಚಂದ್ರನ ಮೇಲೆ  4ಜಿ  ನೆಟ್ ವರ್ಕ್!  

ಬಾಹ್ಯಾಕಾಶ ಕ್ಷೇತ್ರದ ವಿದ್ಯಮಾನಗಳೇ ವಿಚಿತ್ರ ಅಲ್ಲಿ ಕಾಣಬಹುದಾದ ಕನಸುಗಳಿಗೆ ಅಂತ್ಯವಿಲ್ಲ. ಚಂದ್ರನ ಮೇಲೆ ಇಳಿಯುವ ಕನಸು, ಅಲ್ಲಿ ಮನೆ ಮಾಡುವ ಕನಸು, ಅಲ್ಲಿ ನೀರು ಹುಡುಕುವ ಕನಸು, ಹೀಗೆ ಒಂದಾ ಎರಡಾ. ಮಾನವನ ಚಂದ್ರನ ಅನ್ವೇಷಣಾ ಪಯಣ ಯತೇಚ್ಛವಾಗಿ ಸಾಗಿದೆ. ಇದೆಲ್ಲದರ ನಡುವೆ ಇದೀಗ ನೋಕಿಯಾ ಸಂಸ್ಥೆ ಚಂದ್ರನ ಅಂಗಳದಲ್ಲಿ 4ಜಿ ನೆಟ್ ವರ್ಕ್ ಸ್ಥಾಪಿಸಲು ಮುಂದಾಗಿದೆ.

ಇತ್ತೀಚೆಗಷ್ಟೇ ನೋಕಿಯಾ ತನ್ನ ಲೋಗೋ ಬದಲಿಸುವ ಮೂಲಕ ಸುದ್ಧಿಯಾಗಿತ್ತು. ಇದೀಗ ಭೂಮಿಯ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನಲ್ಲಿ ವರ್ಷಾಂತ್ಯದಲ್ಲಿ 4ಜಿ ಸೇವೆ ನೀಡುವುದಾಗಿ ನೋಕಿಯಾ ತಿಳಿಸಿದೆ. ಅಷ್ಟೇ ಅಲ್ಲದೇ ಇದಕ್ಕೆ ಸಂಬಂಧಿಸಿದ ಕಾರ್ಯವನ್ನು ಆರಂಭಿಸಿರುವುದಾಗಿ ತಿಳಿಸಿದೆ.

ಇದನ್ನೂ ಓದಿ: ಸೌರಮಂಡಲದಲ್ಲಿ ನಡೆಯಿತು ಅಪರೂಪದ ಚಮತ್ಕಾರ – ಖಗೋಳದ ಕೌತುಕತೆ ನಿಮಗೂ ಕಾಣುತ್ತೆ..!

ಈ ಬಗ್ಗೆ ಸಂಸ್ಥೆಯ ಪ್ರಧಾನ ಇಂಜಿನಿಯರ್‌ ಆಗಿರುವ ಲೂಯಿಸ್‌ ಮೆಸ್ಟ್ರೋ ರೂಯಿಜ್‌ ಡಿ ಟೆಮಿನೋ ಮಾಹಿತಿ ನೀಡಿದ್ದು, ಚಂದ್ರನಲ್ಲಿ ನೆಟ್ ವರ್ಕ್ ಸ್ಥಾಪನೆಗೆ ಬೇಕಿರುವ ಉಪಕರಣಗಳನ್ನು ಸಾಗಿಸಲು ಸ್ಪೇಸ್‌-ಎಕ್ಸ್‌ ರಾಕೆಟ್‌ಗಳನ್ನು ಬಳಕೆ ಮಾಡೋದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆಯಾದ ಇಂಟಿಟ್ಯೂವ್‌ ಮಿಷನ್ಸ್‌ ವಿನ್ಯಾಸಗೊಳಿಸಿದ ನೋವಾ ಸಿ-ಲ್ಯಾಂಡರ್‌ ಹಾಗೂ ಆ್ಯಂಟೆನಾವನ್ನು ಬೇಸ್‌ ಸ್ಟೇಷನ್‌ನಲ್ಲಿ ಅಳವಡಿಸಲಾಗಿದ್ದು, ಅದರ ಸಹಾಯದ ಮೂಲಕ 4ಜಿ ನೆಟ್ ವರ್ಕ್ ಕಾರ್ಯನಿರ್ವಹಿಸಲಿದೆ. ಲ್ಯಾಂಡರ್‌ ಹಾಗೂ ಲಾಂಚ್‌ ವೆಹಿಕಲ್‌ನ ರೋವರ್‌ ನಡುವೆ 4ಜಿ ಸಂಪರ್ಕ ಸ್ಥಾಪಿಸಲಾಗುತ್ತದೆ. ಇದು ಬಾಹ್ಯಾಕಾಶದಲ್ಲಿ ಎದುರಾಗುವ ಸಂಭವನೀಯ ಪರಿಸ್ಥಿತಿ ನಿಭಾಯಿಸಲು ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

suddiyaana