ಏಷ್ಯಾ ಕಪ್ ಗೆದ್ದರೂ ಭಾರತಕ್ಕೆ ಟ್ರೋಫಿ ಇಲ್ಲ – ಟೀಂ ಇಂಡಿಯಾ ಆಟಗಾರರ ಜಾಲಿ ಜಾಲಿ

ಏಷ್ಯಾ ಕಪ್ ಗೆದ್ದರೂ ಭಾರತಕ್ಕೆ ಟ್ರೋಫಿ  ಇಲ್ಲ – ಟೀಂ ಇಂಡಿಯಾ ಆಟಗಾರರ ಜಾಲಿ ಜಾಲಿ

ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವೆ ಆಪರೇಷನ್ ಸಿಂದೂರದ  ಕಾವು ಕಮ್ಮಿಯಾಗುತ್ತಿಲ್ಲ. ಕ್ರಿಕೆಟ್‌ನಲ್ಲೂ ಇದು ಸಖತ್ ಸದ್ದು ಮಾಡ್ತಿದೆ.  ಅದ್ರಲ್ಲೂ ಈ ಬಾರಿ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಂದ್ಯದ ಫಲಿತಾಂಶಕ್ಕಿಂತಲೂ ಪಂದ್ಯದ ವೇಳೆ ನಡೆದ ಘಟನೆಗಳು ಭಾರೀ ಚರ್ಚೆಗೆ ಗುರಿಯಾಗಿದ್ದವು. ಈಗ ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಕೈ ಸಹ ಮಿಲಾಯಿಸಲಿಲ್ಲ. ಈ ಬಗ್ಗೆ ಪಿಸಿಬಿ, ಐಸಿಸಿಗೆ ದೂರನ್ನು ಸಹ ನೀಡಿತ್ತು. ಈ ಹ್ಯಾಂಡ್‌ ಶೇಕ್‌ ವಿವಾದ ತೆರೆಯ ಹಿಂದೆ ಸರಿಯುತ್ತಿರುವಾಗಲೇ, ಟೀಮ್ ಇಂಡಿಯಾ ಪಿಸಿಬಿ ಅಧ್ಯಕ್ಷರಿ ನಖ್ವಿ ಭಾರೀ ಮುಖಭಂಗವಾಗಿದೆ.

ಇದನ್ನೂ ಓದಿ: ಭಾರತಕ್ಕೆ ಏಷ್ಯಾಕಪ್ ‘ಸಿಂದೂರ’ – ಶತ್ರುದೇಶ ಪಾಕ್‌ನ ಬಗ್ಗು ಬಡಿದ ಟೀಂ ಇಂಡಿಯಾ

ಟೀಮ್ ಇಂಡಿಯಾ ಒಂಬತ್ತನೇ ಬಾರಿಗೆ ಏಷ್ಯಾ ಕಪ್‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆದರೆ ಟ್ರೋಫಿ ವಿತರಣಾ ಸಮಾರಂಭದಿಂದ ದೂರ ಉಳಿದು ಟ್ರೋಫಿಯನ್ನೇ ಸ್ವೀಕಾರ ಮಾಡಿಲ್ಲ.  ಟೀಂ ಇಂಡಿಯಾ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಅಲ್ಲದೆ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಟೀಮ್ ಇಂಡಿಯಾ ಹಿಂದೇಟು ಹಾಕಿತು. ಈ ಮೂಲಕ ಭಾರತ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥರನ್ನು ತೀವ್ರವಾಗಿ ಅವಮಾನಿಸಿತು. ಅಲ್ಲದೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷರಿಗೂ ಭಾರತ ಅವಮಾನ ಮಾಡಿತು. ನಖ್ವಿ ಅವರೇ ಎಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಭಾರತ ಏಷ್ಯಾ ಕಪ್‌ ಗೆದ್ದರೂ ಸಹ ಟ್ರೋಫಿಯನ್ನು ಸ್ವೀಕರಿಸಲಿಲ್ಲ. ಅಲ್ಲದೆ ಟೀಮ್ ಇಂಡಿಯಾದ ನಾಯಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿಲ್ಲ.

 ಇದ್ರ ನಡುವೆ  ಭಾರತೀಯ ಆಟಗಾರರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟ್ರೋಫಿ ಇಲ್ಲದಿದ್ದರೂ, ಟೀಮ್ ಇಂಡಿಯಾ ಆಟಗಾರರು ಫೋಟೋ ಎಡಿಟ್ ಮೂಲಕ ಕಪ್ ಚಿತ್ರ ಹಾಕಿ ಪೋಸ್ ನೀಡಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ಪ್ರತಿ ಬಾರಿ ಟ್ರೋಫಿ ಗೆದ್ದು ಟ್ರೇಡ್ ಮಾರ್ಕ್ ಸೆಲೆಬ್ರೇಷನ್ ಮಾಡುವ ಹಾರ್ದಿಕ್ ಪಾಂಡ್ಯ ಈ ಬಾರಿ ಕೂಡ ಅದನ್ನು ಮುಂದುವರೆಸಿದ್ದಾರೆ. ಆದರೆ ಈ ಬಾರಿ ಟ್ರೋಫಿ ಇಲ್ಲದ ಕಾರಣ, ಅಲ್ಲಿ ಕಪ್ ಚಿತ್ರವನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಕೂಡ ನೋ ಟ್ರೋಫಿ, ನೋ ಟೆನ್ಶನ್ ಎಂಬಂತೆ ಎಡಿಟ್ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಡಿದ್ದಾರೆ. ಹಾಗೆಯೇ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಕೂಡ ಟ್ರೋಫಿ ಎಡಿಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.

Kishor KV