ಭುವಿ & ಶಮಿ ODIಗೆ ವಾಪಸ್? – Experiment ಚೆಲ್ಲಾಟ ಮುಗಿಯಿತಾ?
ಅಹಂ ಬಿಡ್ತಾರಾ ಗಂಭೀರ್?

ಭುವಿ & ಶಮಿ ODIಗೆ ವಾಪಸ್? – Experiment ಚೆಲ್ಲಾಟ ಮುಗಿಯಿತಾ?ಅಹಂ ಬಿಡ್ತಾರಾ ಗಂಭೀರ್?

ಅನುಭವಿಗಳನ್ನ ಸೈಡ್​ಲೈನ್ ಮಾಡಿ ಯಂಗ್​ಬ್ಲಡ್​ಗಳೇ ಗೇಮ್ ಚೇಂಜರ್ಸ್ ಅಂತಾ ಉದ್ಧಟತನ ತೋರಿಸ್ತಿದ್ದ ಗೌತಮ್​ ಗಂಭೀರ್​ ಅಹಂಕಾರಕ್ಕೆ ಮತ್ತೊಮ್ಮೆ ಪೆಟ್ಟು ಬಿದ್ದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಸೋತ ಬೆನ್ನಲ್ಲೇ ಬೌಲಿಂಗ್ ಯುನಿಟ್​ನ ಬಣ್ಣ ಬಯಲಾಗಿದೆ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮೇಲೇ ಡಿಪೆಂಡ್ ಆಗ್ತಿರೋದು ರಿವೀಲ್ ಆಗಿದೆ. ಹಾಗೇ ಬ್ರಿಂಗ್ ಬ್ಯಾಕ್ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಅನ್ನೋ ಕೂಗು ಜೋರಾಗ್ತಿದೆ.  ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಎರಡು ಪಂದ್ಯ ಗೆದ್ದು ಸರಣಿ ಕೈವಶ ಮಾಡ್ಕೊಂಡಿದ್ದ ಭಾರತ ಕ್ಲೀನ್ ಸ್ವೀಪ್ ಟಾರ್ಗೆಟ್​ನಲ್ಲಿತ್ತು. ಆದ್ರೆ ಶನಿವಾರ ನ್ಯೂಚಂಡೀಗಡದಲ್ಲಿ ನಡೆದಿದ್ದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಸೋತಿದೆ.

ಇದನ್ನೂ ಓದಿ : IND Vs WI ಹೊಡಿಬಡಿ ಧಮಾಕ – X -Factor ಪ್ಲೇಯರ್ಸ್ ಯಾರೆಲ್ಲಾ?

351 ಹೊಡೆದ್ರೂ ಸೇಫ್ ಇಲ್ಲ!

ಚೇಸಿಂಗ್ ನಲ್ಲಿ ಗೆದ್ದವ್ರು ಡಿಫೆನ್ಸ್ ನಲ್ಲಿ ಎಡವಿದ್ದರಿಂದ ಬೌಲಿಂಗ್ ವೀಕ್ ನೆಸ್

351 ರನ್ಸ್ ಹೊಡೆದ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳದಿರುವುದು ಆಘಾತ

ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಆಡಲು ಇನ್ನೂ ಅರ್ಹತೆಯನ್ನೇ ಪಡೆದಿಲ್ಲ

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ವಿರುದ್ಧ ಹೇಗೆ?

ಇದೇ ಕಾರಣಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಒಂದು ಸೋಲು ಹಲವು ಆಯಾಮಗಳಲ್ಲಿ ಭಾರತವನ್ನ ಯೋಚಿಸುವಂತೆ ಮಾಡಿದೆ. ಟೀಂ ಇಂಡಿಯಾದ ಮಾಜಿ ಬ್ಯಾಟರ್ ಹನುಮ ವಿಹಾರಿ ಕೂಡ ಭಾರತದ ಬೌಲಿಂಗ್ ಯುನಿಟ್ ಬಗ್ಗೆ ಒಂದಷ್ಟು ವಿಚಾರಗಳನ್ನ ರಿವೀಲ್ ಮಾಡಿದ್ದಾರೆ. ಹಾಗೇ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಅವರನ್ನು ಮತ್ತೆ ಏಕದಿನ ತಂಡಕ್ಕೆ ಕರೆತರುವಂತೆ ಸಲಹೆ ನೀಡಿದ್ದಾರೆ. 2027 ರ ಏಕದಿನ ವಿಶ್ವಕಪ್‌ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಬಾಕಿ ಇದೆ. ಹೀಗಿರುವಾಗ ಕೇವಲ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚು ಡಿಪೆಂಡ್ ಆಗೋ ಬದಲು ಬ್ಯಾಕಪ್ ಇಟ್ಟುಕೊಳ್ಬೇಕು ಅನ್ನೋದನ್ನೂ ಹೇಳಿದ್ದಾರೆ.  ಇದಕ್ಕೆ ಒನ್ ಆಫ್ ದಿ ಬೆಸ್ಟ್ ಚಾಯ್ಸ್ ಭುವನೇಶ್ವರ್ ಕುಮಾರ್. ಭುವನೇಶ್ವರ್ 2022 ರಲ್ಲಿ ಭಾರತ ಪರ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. ಆನಂತ್ರದಲ್ಲಿ ಇಂಜುರಿ ಅಂತಾ ಅವ್ರ ಕೆರಿಯರ್​ಗೆ ದೊಡ್ಡ ಎಫೆಕ್ಟ್ ಆಯ್ತು. ಹೀಗಿದ್ರೂ 36 ವರ್ಷದ ಭುವಿ ಐಪಿಎಲ್‌ ನಲ್ಲಿ ಎಫೆಕ್ಟಿವ್ ಆಗಿ ಬೌಲಿಂಗ್ ಮಾಡ್ತಿದ್ದಾರೆ. 2025 ಮತ್ತು 2026 ರ ಸೀಸನ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 30 ಪಂದ್ಯಗಳಲ್ಲಿ 45 ವಿಕೆಟ್‌ಗಳನ್ನು ಬೇಟೆಯಾಡಿದ್ದಾರೆ. ಅದ್ರಲ್ಲೂ ಭುವಿ ಅನುಭವ ಜೊತೆಗೆ ನ್ಯೂ ಬಾಲ್​ನಲ್ಲಿನ ಕಂಟ್ರೋಲ್ ಭಾರತಕ್ಕೆ ಹೆಚ್ಚಿನ ಬಲ ನೀಡುತ್ತೆ. ಭುವಿ ಜೊತೆಗೆ ಮೊಹಮ್ಮದ್ ಶಮಿಯನ್ನೂ ಕರೆತಂದ್ರೆ ಬೌಲಿಂಗ್ ಯುನಿಟ್ ಬೊಂಬಾಟ್ ಅನ್ನೋದು ವಿಹಾರಿ ಅವ್ರ ಒಪೀನಿಯನ್. ಹಾಗೇ ಅನ್ಶುಲ್ ಕಾಂಬೋಜ್, ಗುರ್ನೂರ್ ಬ್ರಾರ್ ಮತ್ತು ನಿತೀಶ್ ಕುಮಾರ್ ರೆಡ್ಡಿ, ಔಕಿಬ್ ನಬಿ ಅವರ ದುಬಾರಿ ಸ್ಪೆಲ್‌ಗಳ ನಂತರ ಅವ್ರನ್ನ ಬ್ಯಾಕಪ್ ಆಗಿ ಸೆಲೆಕ್ಟ್ ಮಾಡೋದೂ ಕೂಡ ರಿಸಕ್ಸ್ ಎಂದಿದ್ದಾರೆ. ಮತ್ತೊಂದೆಡೆ ನಾಯಕ ಶುಭ್​ಮನ್ ಗಿಲ್ ಕೂಡ ಅಚ್ಚರಿಯ ಮಾತುಗಳನ್ನಾಡಿದ್ದಾರೆ.

ತಂಡದಲ್ಲಿ ಎಕ್ಸ್ ಪೆರಿಮೆಂಟ್ ಸಮಯ ಮುಗಿಯಿತೆಂದ ಗಿಲ್!

ಇನ್ನು ಏಕದಿನ ವಿಶ್ವಕಪ್​ಗೆ ಇನ್ನೊಂದು ವರ್ಷ ಕೂಡ ಬಾಕಿ ಉಳಿದಿಲ್ಲ. ಸೋ ಇಂಥಾ ಟೈಮಲ್ಲೂ ಪದೇಪದೆ ಪ್ರಯೋಗ ಮಾಡಿ ಕೆಟ್ಟಿರೋ ನಾಯಕ ಶುಭ್​ಮನ್ ಗಿಲ್ ಇನ್ಮುಂದೆ ಇದಕ್ಕೆಲ್ಲಾ ಫುಲ್​ಸ್ಟಾಪ್ ಇಡೋದಾಗಿ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ಗಿಲ್  ಭಾರತೀಯ ಕ್ರಿಕೆಟ್ ತಂಡದ ಮುಂದಿನ ಟಾರ್ಗೆಟ್ ಏನು ಅನ್ನೋದನ್ನ ರಿವೀಲ್ ಮಾಡಿದ್ರು. 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಒಂದು ವರ್ಷವಷ್ಟೇ ಬಾಕಿ ಇದೆ. ಹೀಗಾಗಿ ತಂಡದಲ್ಲಿ ಇನ್ನು ಮುಂದೆ ಯಾವುದೇ ಅನಗತ್ಯ ಪ್ರಯೋಗಗಳಿಗೆ ಅವಕಾಶವಿಲ್ಲ ಎಂದಿದ್ದಾರೆ. ಭಾರತದ ಬೌಲಿಂಗ್ ಅಂದ್ರೆ ಕೆಲವ್ರ ಮೇಲಷ್ಟೇ ಡಿಪೆಂಡ್ ಆಗ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಆದ್ರೆ ಸೀನಿಯರ್ ಪ್ಲೇಯರ್​ಗಳನ್ನ ಬೇಕಂತಲೇ ಇಗ್ನೋರ್ ಮಾಡೋ ಗೌತಮ್ ಗಂಭೀರ್​ಗೆ ಅದ್ಯಾವಾಗ ಬುದ್ಧಿ ಬರುತ್ತೋ ಏನೋ.

Shantha Kumari

Leave a Reply

Your email address will not be published. Required fields are marked *