ಇಸ್ರೇಲ್ ಮೇಲೆ ಪಾಕಿಸ್ತಾನ ಪರಮಾಣು ದಾಳಿ ಮಾಡಲ್ಲ – ಪಾಕ್ ರಕ್ಷಣಾ ಸಚಿವ

ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದರೆ, ಪಾಕಿಸ್ತಾನ ಕೂಡ ಇಸ್ರೇಲ್ ಮೇಲೆ ಪರಮಾಣು ಬಾಂಬ್ ದಾಳಿ ಮಾಡುತ್ತದೆ ಅಂತ ಹೇಳಲಾಗಿತ್ತು. ಈ ಮಾತನ್ನ ಐಆರ್‌ಜಿಸಿ ಕಮಾಂಡರ್ ಮತ್ತು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಜನರಲ್ ಮೊಹ್ಸೆನ್ ರೆಜೈ ಹೇಳಿದ್ರು. ಆದ್ರೆ ಮಾತನ್ನ ಪಾಕಿಸ್ತಾನ ನಿರಾಕರಿಸಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಈ ಹೇಳಿಕೆಯನ್ನು ತಳ್ಳಿಹಾಕಿ, ಪಾಕ್ ಅಂತಹ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ಲ್ಲಿ ಪೋಸ್ಟ್ ಮಾಡಿರುವ ಆಸಿಫ್, ಪ್ರಸ್ತುತ ಅಸ್ಥಿರ ಪರಿಸ್ಥಿತಿಯ ನಡುವೆಯೂ ಇಸ್ರೇಲ್‌ನ ಅಘೋಷಿತ ಪರಮಾಣು ಶಸ್ತ್ರಗಾರವು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸಲು ಧೈರ್ಯ ತುಂಬಬಹುದು. ಇದು ವ್ಯಾಪಕ ಪ್ರಾದೇಶಿಕ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದರು. ಪರಮಾಣು ಪ್ರತೀಕಾರದ ಮಾತನ್ನು ಪಾಕಿಸ್ತಾನ ತಿರಸ್ಕರಿಸಿದ್ದರೂ, ಪಾಕಿಸ್ತಾನವು ಇರಾನ್‌ನ ಜೊತೆಗೆ ನಿಲ್ಲುವುದಾಗಿ’ ಹೇಳಿತ್ತು. ಅಲ್ಲದೇ ಯಹೂದಿ ರಾಷ್ಟ್ರವಾದ ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟçಗಳ ಏಕತೆಗೆ ಕರೆ ನೀಡಿತ್ತು. ಜೂನ್ 14ರಂದು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸಂಸತ್‌ನಲ್ಲಿ ಮಾತನಾಡಿ, ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಒಂದಾಗಬೇಕು ಅಥವಾ ಇರಾನ್ ಮತ್ತು ಪ್ಯಾಲೆಸ್ತೀನ್‌ನಂತೆಯೇ ಅದೇ ಗತಿಯನ್ನು ಎದುರಿಸುವ ಅಪಾಯವಿದೆ ಎಂದು ಹೇಳಿದ್ದರು. ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಮುಸ್ಲಿಂ ರಾಷ್ಟ್ರಗಳು ಸಂಬಂಧಗಳನ್ನು ಕಡಿದುಕೊಳ್ಳುವಂತೆ ಆಸಿಫ್ ಒತ್ತಾಯಿಸಿದ್ದರು. ಅಲ್ಲದೇ ಯಹೂದಿ ರಾಷ್ಟ್ರದ ವಿರುದ್ಧ ಜಂಟಿ ಕಾರ್ಯತಂತ್ರವನ್ನು ರೂಪಿಸಲು ಇಸ್ಲಾಮಿಕ್ ಸಹಕಾರ ಸಂಸ್ಥೆ ಸಭೆ ಕರೆಯುವಂತೆ ಕರೆ ನೀಡಿದ್ದರು.

ನೋಡಿರಿ

