ಇನ್ಮುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸರ್- ಮೇಡಂ ಅನ್ನುವಂತಿಲ್ಲ…  

ಇನ್ಮುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸರ್- ಮೇಡಂ ಅನ್ನುವಂತಿಲ್ಲ…  

ತಿರುವನಂತಪುರಂ: ಶಾಲೆಗಳಲ್ಲಿ ವಿದ್ಯಾರ್ಥಿಗಳು ಸರ್ – ಮೇಡಂ ಅಂತ ಇಷ್ಟು ದಿನ ಕರೆಯುತ್ತಿದ್ದರು. ಆದರೆ ಇನ್ನು ಮುಂದೆ ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸರ್, ಮೇಡಂ ಅನ್ನುವಂತಿಲ್ಲ. ಬದಲಿಗೆ ಟೀಚರ್ ಎಂದು ಕರೆಯುವಂತೆ ಅಲ್ಲಿನ ಮಕ್ಕಳ ಹಕ್ಕುಗಳ ಆಯೋಗ ತಿಳಿಸಿದೆ.

ಇದನ್ನೂ ಓದಿ: ಸಂಪೂರ್ಣ ಮುಳುಗಡೆಯಾಗುತ್ತಾ ಜೋಶಿಮಠ? – ಭೂಕುಸಿತದ ಪ್ರಾಥಮಿಕ ವರದಿ ಬಿಡುಗಡೆ

ಸರ್, ಮೇಡಂ ಅಂದರೆ ಲಿಂಗ ಸಂಭೋದಿಸಿದಂತೆ ಆಗುತ್ತದೆ. ಆದರೆ ಟೀಚರ್ ಎಂಬ ಪದದ ಲಿಂಗ ತಟಸ್ಥವಾಗಿರುವುದರಿಂದ ಹೀಗೆ ಕರೆಯಬೇಕು. ಕೇವಲ ವಿದ್ಯಾರ್ಥಿಗಳು ಮಾತ್ರ ಅಲ್ಲ, ಶಿಕ್ಷಕರು ಕೂಡಾ ಈ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ನಿರ್ದೇಶಿಸಿದೆ.

ಕೇರಳ ರಾಜ್ಯ ಮಕ್ಕಳ ಆಯೋಗದ ಮುಖ್ಯಸ್ಥರಾದ ಕೆ. ವಿ. ಮನೋಜ್ ಕುಮಾರ್ ಹಾಗೂ ಸದಸ್ಯ ಸಿ. ವಿಜಯ್ ಕುಮಾರ್ , ಶಿಕ್ಷಣ ಇಲಾಖೆಗೆ ಈ ನಿರ್ದೇಶನ ನೀಡಿದ್ದಾರೆ. ಸಮಾನತೆ ಹಾಗೂ ಶಿಕ್ಷಕರೊಂದಿಗೆ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

suddiyaana