TOXIC ಎಫೆಕ್ಟ್, 100 Cr. ಕೈ ಬಿಟ್ರಾ? ಸೋತ ರಾಯ, ರಾವಣನಾಗಿ ಗೆಲ್ತಾನಾ?

TOXIC ಎಫೆಕ್ಟ್, 100 Cr. ಕೈ ಬಿಟ್ರಾ? ಸೋತ ರಾಯ, ರಾವಣನಾಗಿ ಗೆಲ್ತಾನಾ?

ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡ ನಟ ಯಶ್, ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಟಾಕ್ಸಿಕ್ ಮೂಲಕ ತೆರೆಗೆ ಬಂದಿದ್ದರು. ಸಿನಿಮಾದ ಬಗ್ಗೆ ಆರಂಭದಿಂದಲೇ ಭಾರೀ ನಿರೀಕ್ಷೆ ಇತ್ತು. ಆದರೆ ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್‌ನಲ್ಲಿ  ಠುಸ್ ಪಟಾಕಿ ಆಯ್ತು. ಯಶ್‌ ಈಗ ಸೈಲೆಂಟ್ ಆಗಿದ್ದಾರೆ. ಈಗ ಕೇಳಿ ಬರ್ತಿರೋ ಪ್ರಶ್ನೆ ಒಂದೇ ಯಶ್ ಮುಂದೇನು ಮಾಡ್ತಾರೆ? ಅನ್ನೋದು. ಇದೀಗ ಎಲ್ಲರ ಕಣ್ಣು ಯಶ್ ಅವರ ಮುಂದಿನ ದೊಡ್ಡ ಪ್ರಾಜೆಕ್ಟ್ ರಾಮಾಯಣದ ಮೇಲೆ ಇದೆ.

ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ಮಾಸ್ ಇಮೇಜ್ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತು. ರಾಕಿ ಭಾಯ್ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದಿತ್ತು. ಆದರೆ ಟಾಕ್ಸಿಕ್‌ನಲ್ಲಿ ಯಶ್ ವಿಭಿನ್ನ ಶೈಲಿಯ ಕಥೆ ಮತ್ತು ಪಾತ್ರದೊಂದಿಗೆ ಬಂದಿದ್ದರು. ಆದ್ರೆ ಜನರ ಮನಸ್ಸಿನಲ್ಲಿ ರಾಯ ಮನೆ ಮಾಡಲಿಲ್ಲ. ಕೆಜಿಎಫ್ ನಂತರ ಯಶ್ ಮೇಲೆ ನಿರ್ಮಾಣವಾಗಿದ್ದ ನಿರೀಕ್ಷೆಗಳು ಟಾಕ್ಸಿಕ್‌ನಲ್ಲಿ ಪ್ಯಾನ್ಸ್ ನೋಡಿಲ್ಲ. ಈಗ ಯಶ್‌ ಮುಂದೆ ಇರೋ ಬಿಗ್ ಚಾಲೆಂಜ್ ಆಂದ್ರೆ ಮುಂದಿನ ಸಿನಿಮಾ ಬಗ್ಗೆ.

ಇದನ್ನೂ ಓದಿ: ಮೈಸೂರಿನ ಪ್ರಣವಿ ಉರ್ಸ್ ಇತಿಹಾಸ! ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಬೇಟೆ!

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಅಧಿಕೃತ ಟ್ರೈಲರ್‌ನಲ್ಲಿ ಯಶ್ ರಾವಣನಾಗಿ ಕಾಣಿಸಿಕೊಂಡಿರುವುದು ಈಗಾಗಲೇ ಭಾರೀ ಗಮನ ಸೆಳೆದಿದೆ. ಚಿತ್ರವು 2026ರ ನವೆಂಬರ್ 6ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಅಧಿಕೃತ ಟ್ರೈಲರ್ ಮಾಹಿತಿಯಲ್ಲಿ ತಿಳಿಸಲಾಗಿದೆ. ರಾವಣನಾಗಿ ಹೇಗೆ ಅಭಿನಯಿಸಿದ್ದಾರೆ ಅನ್ನೋದು ಕೂಡ ಇಲ್ಲಿ ಮುಖ್ಯ ಆಗುತ್ತೆ.

ರಾಮಾಯಣಕ್ಕೆ 100 ಕೋಟಿ ಪಡೆದ್ರಾ ಯಶ್‌?

ರಾಮಾಯಣ ಸಿನಿಮಾಕ್ಕೆ ಯಶ್ 100 ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋಮಾತು ಮೊದಲಿಗೆ ಕೇಳಿ ಬಂದಿತ್ತು. ರಾಮಾಯಣ ಚಿತ್ರದಲ್ಲಿ ಸಹ-ನಿರ್ಮಾಪಕರಾಗಿಯೂ ಇರುವ ಯಶ್‌, ಇತ್ತೀಚಿನ ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು ಪಡೆಯಲು ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋದು ತಿಳಿದು ಬಂದಿದೆ. ಈ ಪೌರಾಣಿಕ ಚಿತ್ರದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುತ್ತಿರುವ ಯಶ್, 100 ಕೋಟಿ ರೂ.ಗಳ ಬೃಹತ್ ಸಂಭಾವನೆಯನ್ನ ನಿರಾಕರಿಸಿದ್ದಾರೆ.  ಟಾಕ್ಸಿಕ್ ಪ್ಲಾಫ್ ಆಗಿದ್ದಕ್ಕೆ ಈ ನಿರ್ಧಾರವನ್ನ ಇವರು ತೆಗೆದುಕೊಂಡಿಲ್ಲ.  ಬದಲಾಗಿ ಚಿತ್ರದ ದಕ್ಷಿಣ ಭಾರತದ ಚಿತ್ರಮಂದಿರಗಳ ವಿತರಣಾ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಯಶ್ ಅಥವಾ ನಿರ್ಮಾಪಕರಿಂದ ₹100 ಕೋಟಿ/ವಿತರಣೆ ಹಕ್ಕಿನ ಒಪ್ಪಂದದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.

ರಾಮಾಯಣದ ನಂತ್ರ ಯಶ್ ಸಿನಿಮಾ ಹೇಗಿರುತ್ತೆ?

ಟಾಕ್ಸಿಕ್ ನಂತ್ರ ರಾವಣನ ಪಾತ್ರದಲ್ಲಿ ಯಶ್ ಬರ್ತಿದ್ದಾರೆ. ರಾಮಾಯಣದಲ್ಲಿ ರಾವಣನಂತಹ ವಿಭಿನ್ನ ಮತ್ತು ದೊಡ್ಡ ಪಾತ್ರವನ್ನು ಆಯ್ಕೆ ಮಾಡಿರುವುದು ಯಶ್ ಅವರ ಸಿನಿಮಾಗಳ ಆಯ್ಕೆಯಲ್ಲಿ ಮತ್ತೊಂದು ದಿಕ್ಕನ್ನು ತೋರಿಸುತ್ತಿದೆ. ಆದ್ರೆ ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡುತ್ತಾರೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಟಾಕ್ಸಿಕ್‌ನ ಫಲಿತಾಂಶ ಯಶ್  ಅವರಿಗೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಮುಂದಿನ ಸಿನಿಮಾದ ಬಗ್ಗೆ ಅವರು ಎಚ್ಚರಿಕೆ ಹೆಜ್ಜೆ ಇಡಬೇಕು.  ಕೆಜಿಎಫ್ ನಂತರ ನಿರ್ಮಾಣವಾದ ಅವರ ಪ್ಯಾನ್ ಇಂಡಿಯಾ ಇಮೇಜ್ ಉಳಿಸಿಕೊಂಡು ಹೋಗುವಂತಹ ಸಿನಿಮಾ ಮಾಡಬೇಕು. ಟಾಕ್ಸಿಕ್‌ ರಿಸಲ್ಟ್ ಮರೆಯವಂತಹ ರಿಸಲ್ಟ್ ಕೊಡುವ ಸಿನಿಮಾ ಮಾಡಬೇಕು..

Kishor KV

Leave a Reply

Your email address will not be published. Required fields are marked *