No ಪಿಜ್ಜಾ.. No ಮಟನ್.. ಓನ್ಲಿ ಕ್ರಿಕೆಟ್- ಸೂರ್ಯವಂಶಿ ಯಶಸ್ಸಿನ ಗುಟ್ಟೇನು?
14 ವರ್ಷಕ್ಕೆ ಅದ್ಭುತ ಕಮಿಟ್‌ಮೆಂಟ್?

ವೈಭವ್ ಸೂರ್ಯವಂಶಿ.. ವಯಸ್ಸು ಜಸ್ಟ್ 14 ವರ್ಷ.. ಆಟಕ್ಕೂ ವಯಸ್ಸಿಗೂ ಸಂಬಂಧವೇ ಇಲ್ಲ.. ತಾನು ಐಪಿಎಲ್‌ಗೆ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ತನ್ನ ತಾಕತ್ತನ್ನ ಜಗತ್ತಿಗೆ ತೋರಿಸಿದ್ದಾನೆ. ಬ್ಯಾಟಿಂಗ್ ಸ್ಟೈಲ್, ಮೊದಲ ಎಸೆತದಲ್ಲೇ ಸಿಡಿಸಿದ ಸಿಕ್ಸರ್, ಈತನ ಎನರ್ಜಿ ಒಬ್ಬ ಸ್ಟಾರ್ ಆಟಗಾರನಂತೆ ಇತ್ತು. ಮನಸ್ಸು ಮಾಡಿದ್ರೆ ವಯಸ್ಸಿನ ಚೌಕಟ್ಟು ಇಲ್ಲದೇ ಸಾಧನೆ ಮಾಡಬಹುದು ಅನ್ನೋದನ್ನ ವೈಭವ್ ತೋರಿಸಿದ್ದಾನೆ.
ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಲೋಕದ ನಯಾ ಸೂಪರ್ ಸ್ಟಾರ್. ಗೂಗಲ್ ಸಿ ಯಿಂದ ಹಿಡಿದು ಹಳ್ಳಿ ಹಳ್ಳಿಯ ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ಈತನ ಹೆಸರು ಓಡಾಡ್ತಿದೆ. ಕ್ರಿಕೆಟ್ ಲೋಕ ಕಂಡ ಸೂಪರ್ ಸ್ಟಾರ್ಗಳು ಈತನ ಆಟಕ್ಕೆ ಫಿದಾ ಆಗಿದ್ದಾರೆ. ಅಂದ್ಹಾಗೆ ಈ ಪ್ರಸಿದ್ಧಿ, ಸೂಪರ್ ಸ್ಟಾರ್ ಪಟ್ಟ ಸಖಾಸುಮ್ಮನೆ ಬಂದಿದ್ದಲ್ಲ. ಕಠಿಣ ಶ್ರಮವಿದೆ, ತಂದೆಯ ತ್ಯಾಗದ ಕಥೆಯಿದೆ. ಇದರ ಪ್ರತಿಫಲವೇ ಈ ಯಶಸ್ಸು.
ಕ್ರಿಕೆಟ್ಗಾಗಿ 14 ವರ್ಷದ ಬಾಲಕನಿಗೆ ನೆಚ್ಚಿನ ಊಟ ಬಿಡು ಅಂದ್ರೆ ಕೇಳ್ತಾರಾ.? ಊಟ ಬಿಟ್ರೂ, ಹೊರಗಿನ ತಿಂಡಿಯಾದ್ರೂ ಬೇಕು ಅಂದೆ ಅಂತಾರೆ. ಆದ್ರೆ, ಈ ವೈಭವ್ ಸೂರ್ಯವಂಶಿ ಹಾಗಲ್ಲ. ಕ್ರಿಕೆಟ್ಗಾಗಿ ನೆಚ್ಚಿನ ಪಿಜ್ಜಾವನ್ನೇ ಬಿಟ್ರು. ಅವ್ರ ಕುಟುಂಬದವರೇ ಹೇಳೋ ಪ್ರಕಾರ ನಾನ್ ವೆಜ್ ಅದ್ರಲ್ಲೂ ಮಟನ್ ಅಂದ್ರೆ ಈ ವೈಭವ್ ಪ್ರಾಣವಂತೆ. ಆದ್ರೆ, ಕ್ರಿಕೆಟ್ರ್ ಆಗಬೇಕು ಅನ್ನೋ ಕನಸ ಬೆನ್ನುಬಿದ್ದ ವೈಭವ್ ಕ್ರಿಕೆಟ್ಗಾಗಿ ಅದನ್ನೂ ತ್ಯಾಗ ಮಾಡಿದ್ರು.
ಜಂಕ್ ಫುಡ್ ಹಾಗೂ ನಾನ್ ವೆಜ್ ಅನ್ನ ಸಂಪೂರ್ಣವಾಗಿ ಬಿಟ್ಟಿದ್ದ ವೈಭವ್, ಫಿಟ್ನೆಸ್ ಕಡೆಗೆ ಗಮನ ಹರಿಸಿದರು. ಈ ಬಾರಿ ಐಪಿಎಲ್ಗಂತೂ ಇನ್ನಿಲ್ಲದ ಕಸರತ್ತು ನಡೆಸಿದ್ರು. ರಾಜಸ್ಥಾನ್ ಕ್ಯಾಂಪ್ನ ನೆಟ್ ಸೆಷನ್ಗಳಲ್ಲಿ ಬೆವರು ಹರಿಸುತ್ತಿದ್ದ ವೈಭವ್ ಸೂರ್ಯವಂಶಿ, ತಂಡದಲ್ಲಿರುವ ಸ್ಟಾರ್ ಬೌಲರ್ಗಳನ್ನೇ ಬೆಂಡೆತ್ತಿದ್ದರು. ಜೋಫ್ರಾ ಆರ್ಚರ್ರಂಥ ಬೌಲರ್ಗಳ ದಾಳಿಯನ್ನೇ ಚಿಂದಿ ಉಡಾಯಿಸಿ ಗಮನ ಸೆಳೆದಿದ್ರು.
ವೈಭವ್ ಯಶಸ್ಸಿನ ಹಿಂದೆ ಹೆಡ್ ಕೋಚ್ ಪಾತ್ರ
ಡೆಬ್ಯೂ ಮ್ಯಾಚ್ನಲ್ಲೇ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಈ ಆಕ್ರಮಣಕಾರಿ ಆಟದ ಹಿಂದೆ ರಾಜಸ್ಥಾನ್ ರಾಯಲ್ಸ್ ಹೆಡ್ ಕೋಚ್ ರಾಹುಲ್ ದ್ರಾವಿಡ್ ಪಾತ್ರವಿದೆ. ಹರಾಜಿನಲ್ಲಿ 14 ವರ್ಷದ ವೈಭವ್ ಖರೀದಿಸಿದ ಬಳಿಕ ಹೆಡ್ ಕೋಚ್ ದ್ರಾವಿಡ್ ಈತನ ಮೇಲೆ ವಿಶೇಷ ಆಸಕ್ತಿ ಹೊಂದಿದ್ರು. ತಂಡ ಸೇರಿದ ದಿನದಿಂದಲೂ ನೆಟ್ ಸೆಷನ್ ವೇಳೆ ಸ್ಪೆಷಲ್ ಟಾಸ್ಕ್ ನೀಡುತ್ತಿದ್ದರು. 4 ಓವರ್ಗೆ 40 ರನ್, 60 ರನ್ನಂತೆ ಟಾರ್ಗೆಟ್ ಸೆಟ್ ಮಾಡಿ ಟಾರ್ಗೆಟ್ ರೀಚ್ ಮಾಡುವಂತೆ ಹೇಳ್ತಾ ಇದ್ರು. ಡೆಬ್ಯೂ ಮ್ಯಾಚ್ನಲ್ಲಿ ಆರ್ಭಟಿಸಿಕೆ ಈ ಟಾಸ್ಕ್ಗಳು ಸಹಾಯ ಮಾಡಿದ್ದು ಸುಳ್ಳಲ್ಲ.
ವೈಭವ್ ಸೂರ್ಯವಂಶಿಗೆ ಅಪ್ಪನೇ ಮೊದಲ ಗುರು
ವೈಭವ್ ಸೂರ್ಯವಂಶಿಗೆ ಅಪ್ಪನೇ ಮೊದಲ ಗುರು. ಕ್ರಿಕೆಟ್ನ ಹುಚ್ಚು ಹತ್ತಿಸಿದ್ದೆ ಅಪ್ಪ ಸಂಜೀವ್ ಸೂರ್ಯವಂಶಿ. ಆರಂಭದಲ್ಲಿ ತಂದೆಯ ಜೊತೆ ವೈಭವ್ ಕ್ರಿಕೆಟ್ ಆಡುತ್ತಿದ್ರು. ಮಗನ ಉತ್ಸಾಹ ಕಂಡಿದ್ದ ಸಂಜೀವ್, ಆತನಿಗೆ 5ನೇ ವರ್ಷದಲ್ಲೇ ಮನೆ ಬಳಿ ನೆಟ್ಸ್ ತಯಾರಿಸಿ ಅಭ್ಯಾಸಕ್ಕೆ ನೆರವಾಗಿದ್ರು. ಕೃಷಿಕರಾಗಿದ್ರು ಮಗನ ಕನಸಿಗೆ ನೆರವಾದ ತಂದೆ 9ನೇ ವರ್ಷದಲ್ಲಿ ಸಮೀಪದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರುಮಗನನ್ನ ಕ್ರಿಕೆಟರ್ ಮಾಡೋ ಪಣ ತೊಟ್ಟ ತಂದೆ ಹಣದ ಸಮಸ್ಯೆಯಾದಗ ಇದ್ದ ಸ್ವಲ್ಪ ಕೃಷಿ ಜಮೀನನ್ನೆ ಮಾರಿದ್ರು. ಬಿಹಾರದ ಮಾಜಿ ಕ್ರಿಕೆಟಿಗ ಮನೀಷ್ ಓಜಾ ಬಳಿ ಕೋಚಿಂಗ್ಗೆ ಸೇರಿಸಿದ್ರು. ಅಕಾಡೆಮಿ ಸೇರಿದ ಮೊದಲ ದಿನವೇ ತಂದೆಯ ಋಣ ತೀರಿಸೋ ಪಣ ತೊಟ್ಟಿದ್ದ ವೈಭವ್, ಸಿಕ್ಕ ಪ್ರತಿ ಅವಕಾಶದಲ್ಲೂ ಸಾಮರ್ಥ್ಯ ಫ್ರೂವ್ ಮಾಡಿದ್ದರು. ಯಶಸ್ಸಿನ ಪಯಣದಲ್ಲಿ ಸಾಗಿದ್ದ ವೈಭವ್ ವಿರುದ್ಧ ಏಜ್ ಫ್ರಾಡ್ ಆರೋಪವೂ ಕೇಳಿ ಬಂತು. ಈ ವೇಳೆ ಬಿಸಿಸಿಐ ನಿಯಮದಂತೆ ವೈಭವ್, ಬೋನ್ ಟೆಸ್ಟ್ಗೆ ಒಳಗಾಗಿ, ತಾನು ತಪ್ಪು ಮಾಡಿಲ್ಲ ಅನ್ನೋದು ಪ್ರೂವ್ ಮಾಡಿದ್ರು. ಚಿಕ್ಕ ವಯಸ್ಸಿನಲ್ಲೇ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ವೈಭವ್ಗೆ, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗ್ತಿದೆ. ಆದ್ರೆ ಮೊದಲ ಯಶಸ್ಸಿನ ಮದ ನೆತ್ತಿಗೇರಿಸಿಕೊಳ್ಳದೇ ಮುಂದೆ ಕೂಡ ಕ್ರಿಕೆಟ್ ಲೋಕದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದು ಕ್ರಿಕೆಟ್ ಫ್ಯಾನ್ಸ್‌ಗಳ ಆಶಯ..