ಸಂಜು ಸಿಡಿಗುಂಡು.. ಗಂಭೀರ್ ಹುಚ್ಚಾಟಕ್ಕೆ ಡಿಚ್ಚಿ – ಆಟ ಕಲಿಸಬೇಡಿ ಎಂದಿದ್ದೇಕೆ?

ಸಂಜು ಸಿಡಿಗುಂಡು.. ಗಂಭೀರ್ ಹುಚ್ಚಾಟಕ್ಕೆ ಡಿಚ್ಚಿ – ಆಟ ಕಲಿಸಬೇಡಿ ಎಂದಿದ್ದೇಕೆ?

ಸಂಜು ಸ್ಯಾಮ್ಸನ್.. 2026ರ ಟಿ20 ವಿಶ್ವಕಪ್ ಹೀರೋ. ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ವಿಜೇತ. ಟೀಂ ಇಂಡಿಯಾದ ಟ್ಯಾಲೆಂಟೆಡ್ ವೀಕೆಟ್ ಕೀಪರ್ ಬ್ಯಾಟರ್. ತಮ್ಮದೇ ಆದ ಬ್ಯಾಟಿಂಗ್ ಸ್ಟೈಲ್, ಸಿಕ್ಸರ್ ಸಿಡಿಸೋ ಎಬಿಲಿಟಿ, ಕ್ಲಾಸಿಕ್ ಟೈಮಿಂಗ್‌ನಿಂದಲೇ ಒಂದು ಟ್ರೇಡ್​ಮಾರ್ಕ್ ಸೆಟ್ ಮಾಡಿದ್ದಾರೆ. ಆದ್ರೆ ಇತ್ತೀಚೆಗೆ ಭಾರತ ತಂಡದಲ್ಲಿ ಸಂಜುರನ್ನ ಸೈಡ್​ಲೈನ್ ಮಾಡಲಾಗ್ತಿದೆ. ಆರಂಭದಲ್ಲಿ ಬೆಂಚ್​ಗೆ ಸೀಮಿತ ಮಾಡಿದ ಮ್ಯಾನೇಜ್​ಮೆಂಟ್ ಈಗ ತಂಡದಿಂದಲೇ ಹೊರಗಿಡ್ತಿದೆ. ಟೀಂ ಇಂಡಿಯಾದ ಇದೇ ನವರಂಗಿ ಆಟದ ಬಗ್ಗೆ ಸಂಜು ಕೆಂಡವಾಗಿದ್ದಾರೆ. ಗೌತಮ್ ಗಂಭೀರ್​ಗೆ ಡೈರೆಕ್ಟ್ ಡಿಚ್ಚಿ ಕೊಟ್ಟಿದ್ದಾರೆ. ಬ್ಯಾಟಿಂಗ್ ಬಗ್ಗೆ ಮಾತ್ನಾಡಿದವ್ರಿಗೂ ಮುಟ್ಟಿನೋಡಿಕೊಳ್ಳುವಂತೆ ರಿಪ್ಲೈ ಕೊಟ್ಟಿದ್ದಾರೆ.

ಇದನ್ನೂ ಓದಿ : ₹20 ಕೋಟಿಗೆ CSKಗೆ ಹಾರ್ದಿಕ್ ಪಾಂಡ್ಯ – ಮುಂಬೈಗೆ ದುಬೆ, ಬ್ರೆವಿಸ್ ಟ್ರೇಡ್?

ಭಾರತ ಇವತ್ತು 2026ರ ಟಿ-20 ವಿಶ್ವಕಪ್ ಚಾಂಪಿಯನ್ಸ್ ಅಂದ್ರೆ ಅದಕ್ಕೆ ಕಾರಣವೇ ಸಂಜು ಸ್ಯಾಮ್ಸನ್. ಕ್ರೂಶಿಯಲ್ ಟೈಮಲ್ಲಿ ಸತತ ಮೂರು ಪಂದ್ಯಗಳಲ್ಲಿ 85+ ರನ್ಸ್ ಸಿಡಿಸಿ ಭಾರತಕ್ಕೆ ಟ್ರೋಫಿ ಕಿರೀಟ ತೊಡಿಸಿದ್ರು. ಆದ್ರೆ ಆ ನಂತ್ರದಲ್ಲಿ ಸ್ವಲ್ಪ ಫಾರ್ಮ್ ಕಳ್ಕೊಂಡಿದ್ದಾರೆ. ರನ್ಸ್ ಬಂದಿಲ್ಲ. ಇದೇ ರೀಸನ್ ಮುಂದಿಟ್ಟುಕೊಂಡ ಗೌತಮ್ ಗಂಭೀರ್ ಌಂಡ್ ಟೀಂ ಸಂಜುರನ್ನ ತಂಡದಿಂದ ಹೊರಗಿಟ್ಟಿದೆ. ಇನ್ನೂ ಕೆಲವ್ರು ಸಂಜುಗೆ ಬ್ಯಾಟಿಂಗ್ ಬರೋದೇ ಇಲ್ವೇನೋ ಏನೆಲ್ಲಾ ಇಂಪ್ರೂವ್ ಮಾಡ್ಕೋಬೇಕು ಅಂತಾ ಬಿಲ್ಡಪ್ ಕೊಡ್ತಿದ್ರು. ಆದ್ರೆ ಅಂಥವ್ರಿಗೆಲ್ಲಾ ಸಂಜು ಸರಿಯಾಗೇ ಟಾಂಟ್ ಕೊಟ್ಟಿದ್ದಾರೆ.

ಹೇಗೆ ಬ್ಯಾಟಿಂಗ್ ಮಾಡ್ಬೇಕು ಅನ್ನೋದನ್ನ ಯಾರು ಹೇಳಿಕೊಡಬೇಕಿಲ್ಲ!

ಸಂಜು ಸ್ಯಾಮ್ಸನ್ ಟೀಂ ಇಂಡಿಯಾಗೆ ಕಾಲಿಟ್ಟು ದಶಕವೇ ಕಳೆದಿದ್ರೂ ಅವ್ರ ಸ್ಲಾಟ್ ಮಾತ್ರ ಪರ್ಮನೆಂಟ್ ಇಲ್ಲ. ಸ್ವಲ್ಪ ದಿನ ಆಡ್ತಾರೆ ಮತ್ತೆ ಬೆಂಚ್ ಕಾಯಿಸ್ತಾರೆ. ಈಗ್ಲೂ ಅವ್ರ ಕೆರಿಯರ್ ತೂಗುಯ್ಯಾಲೆಯಲ್ಲೇ ಇದೆ. ಅದೂ ಅಲ್ದೇ ಈಗ ಫಾರ್ಮ್ ಕಳ್ಕೊಂಡ ಮೇಲೆ ಕೆಲವ್ರು ಹಂಗ್ ಬ್ಯಾಟಿಂಗ್ ಮಾಡ್ಬೇಕು ಹಿಂಗ್ ಆಡ್ಬೇಕು ಅಂತಾ ಬಿಟ್ಟಿ ಸಲಹೆಗಳನ್ನ ಕೊಡ್ತಾ ಇದ್ರು. ಇದ್ರಿಂದ ರೋಸತ್ತು ಹೋಗಿರೋ ಸಂಜು ಡೈರೆಟ್ ಹಿಟ್ ಎನ್ನುವಂತೆ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ನನಗೆ ಹೇಗೆ ಬ್ಯಾಟಿಂಗ್ ಮಾಡ್ಬೇಕು ಅಥವಾ ನಾನು ಏನ್ ಮಾಡ್ಬೇಕು ಅನ್ನೋದ್ರ ಬಗ್ಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಸಂಜುಗಾಗಿ ಏನು ಬೇಕೋ ಅದನ್ನು ಸಂಜುನೇ ನಿರ್ಧರಿಸುತ್ತಾನೆ ಎನ್ನುವ ಮೂಲಕ ಖಡಕ್ಕಾಗೇ ಉತ್ತರ ಕೊಟ್ಟಿದ್ದಾರೆ. ಜಿಯೋಹಾಟ್​ಸ್ಟಾರ್​ಗೆ ನೀಡಿದ ಸಂದರ್ಶನದಲ್ಲಿ ಮಾತ್ನಾಡಿರೋ ಸಂಜು ಇನ್ಮುಂದೆ ಒತ್ತಡಗಳಿಗೆಲ್ಲಾ ಬಗ್ಗಲ್ಲ ಅಂದಿದ್ದಾರೆ. ಹಾಗೇ ನಮ್ಮ ದೇಶದಲ್ಲಿ ರ್ಯಾಟ್ ರೇಸ್ ಅಂದ್ರೆ ಇಲಿ ಓಟ ಇದೆ ಅನ್ನೋದನ್ನ ನಾನು ತಿಳ್ಕೊಂಡಿದ್ದೇನೆ. ನನಗೆ ಕೇವಲ ಕ್ರಿಕೆಟ್​​ನ ಎಂಜಾಯ್ ಮಾತ್ರ ಮಾಡ್ಬೇಕಿದೆ ಎಂದಿದ್ದಾರೆ. ನನಗೀಗ 31 ವರ್ಷ. ದೇವರ ದಯೆಯಿಂದ ಸಾಕಷ್ಟು ಅಚೀವ್ ಮಾಡಿದ್ದೇನೆ ಅನ್ನೋ ಮೂಲಕ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಇಲ್ಲಿ ಸಂಜು ಸಿಟ್ಟಾಗೋಕೆ ಕಾರಣವೂ ಇದೆ. ಗೌತಮ್ ಗಂಭೀರ್ ಸಂಜು ವಿಚಾರದಲ್ಲಿ ನಡೆದುಕೊಳ್ತಿರೋದು ಕೂಡ. ಇಂಗ್ಲೆಂಡ್ ಸರಣಿ ವೇಳೆ ವೈಭವ್​ಗೆ ಚಾನ್ಸ್ ಕೊಡೋ ವಿಚಾರದಲ್ಲಿ ಸಂಜು ಮತ್ತು ಗಂಭೀರ್ ನಡುವೆ ಸಾಕಷ್ಟು ಹೊತ್ತು ಮಾತುಕತೆಯಾಗಿತ್ತು. ಈ ವೇಳೆ ಸಂಜು ಸ್ವಲ್ಪ ಅನ್​ಕಂಫರ್ಟಬಲ್ ಆಗಿ ಇರೋದು ಗೊತ್ತಾಗ್ತಿತ್ತು. ಇಬ್ಬರ ನಡುವಿನ ಮಾತುಕತೆ ವಿಡಿಯೋ ವೈರಲ್ ಆಗಿ ಹತ್ತಾರು ಚರ್ಚೆಗಳಿಗೂ ಕಾರಣವಾಗಿತ್ತು. ಇದೆಲ್ಲದ್ರಿಂದ ಬೇಸತ್ತಿರೋ ಸಂಜು ಈಗ ತಮಗಾದ ಅನ್ಯಾಯವನ್ನ ನೇರಾನೇರಾವಾಗಿ ಹೇಳಿದ್ದಾರೆ. ಅದೂ ಅಲ್ದೇ ತಂಡದಲ್ಲಿ ಬೇರೆ ಯಾರೇ ಫೇಲ್ಯೂರ್ ಆದ್ರೂ ಅವ್ರಿಗೆ ಮತ್ತೆ ಮತ್ತೆ ಅವಕಾಶಗಳು ಸಿಗುತ್ತೆ. ಆದ್ರೆ ತಂಡದಿಂದ ಹೊರಗಿಡ್ಬೇಕು ಅಂತಾ ಬಂದಾಗ ಸಂಜು ಹೆಸರೇ ಮೊದಲಿರುತ್ತೆ.

ಅಭಿಷೇಕ್ ಗೆ ಒಂದು ನ್ಯಾಯ.. ಸಂಜುಗೆ ಒಂದು ನ್ಯಾಯನಾ?

ಇನ್ನು ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್‌ರನ್ನು ಜಿಂಜಾಬ್ವೆ ಪ್ರವಾಸದಲ್ಲಿ ತಂಡದಿಂದ ಕೈಬಿಟ್ಟಿರುವುದನ್ನು ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಪ್ರಶ್ನಿಸಿದ್ದಾರೆ.  ಒಂದ್ಕಡೆ ಕಂಟಿನ್ಯೂಯಸ್ ಆಗಿ ಫೇಲ್ಯೂರ್ ಆಗ್ತಿರೋ ಅಭಿಷೇಕ್ ಶರ್ಮಾಗೆ ನೀಡುತ್ತಿರುವ ಅವಕಾಶಗಳನ್ನು ಸಂಜುಗೆ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗೇ ಸಂಜುರನ್ನು ವಾಪಸ್ ತಂಡಕ್ಕೆ ಸೆಲೆಕ್ಟ್ ಮಾಡ್ಬೇಕು ಅಂತಾ ಒತ್ತಾಯಿಸಿದ್ದಾರೆ. ಅಭಿಷೇಕ್​ಗೆ ಸಿಗ್ತಿರೋ ಬೆಂಬಲ ಮತ್ತು ಅವಕಾಶಗಳನ್ನು ವಿಶ್ವಕಪ್ ಹೀರೋ ಸಂಜುಗೆ ಯಾಕೆ ನೀಡುತ್ತಿಲ್ಲ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಿಂದ ಕೇವಲ 11 ರನ್ ಗಳಿಸಿರುವ ಅಭಿಷೇಕ್ ಫಾರ್ಮ್ ನಲ್ಲಿಲ್ಲ. ಹೀಗಿದ್ರೂ ಅಭಿಷೇಕ್ ಸೆಲೆಕ್ಟ್ ಆಗ್ತಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದಾಗ ಸಂಜು ಸ್ಯಾಮ್ಸನ್ ತಂಡದ ಶಕ್ತಿಯಾಗಿದ್ದರು. ಐರ್ಲೆಂಡ್ ವಿರುದ್ಧದ 2 ಪಂದ್ಯಗಳಲ್ಲಿ ಫೇಲ್ಯೂರ್ ಆದ ಮಾತ್ರಕ್ಕೆ ಕೈಬಿಡ್ತೀರಿ ಅಂದ್ರೆ ಒಬ್ಬರಿಗೊಂದು ಒಬ್ಬರಿಗೊಂದು ನ್ಯಾಯನಾ ಎಂದು ಪ್ರಶ್ನಿಸಿದ್ದಾರೆ.

ಸಂಜು ಟ್ಯಾಲೆಂಟೆಡ್ ಪ್ಲೇಯರ್. 2024ರಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸತತ ಎರಡು ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದರು. ಟಿ-20 ವಿಶ್ವಕಪ್​ನಲ್ಲೂ ಮಿಂಚಿದ್ರು. ಆದ್ರೆ ಒಂದೆರಡು ಪಂದ್ಯಗಳಲ್ಲಿ ಸೈಲೆಂಟ್ ಆದ ಕೂಡಲೇ ಅವ್ರನ್ನ ಹೊರಗಿಡ್ತಿರೋ ಗೌತಮ್ ಗಂಭೀರ್ ಮತ್ತು ಟೀಂ ನಿರ್ಧಾರಗಳೇ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

Shantha Kumari

Leave a Reply

Your email address will not be published. Required fields are marked *