INDO-PAK ಪಂದ್ಯಕ್ಕೆ ಬ್ರೇಕ್ – FINAL ಟಿಕೆಟ್ ಪಡೆದ್ರಷ್ಟೇ ಚಾನ್ಸ್
ಏಷ್ಯನ್ ಗೇಮ್ಸ್ ನಲ್ಲಿ ಏನಿದು ಟ್ವಿಸ್ಟ್?

INDO-PAK ಪಂದ್ಯಕ್ಕೆ ಬ್ರೇಕ್ – FINAL ಟಿಕೆಟ್ ಪಡೆದ್ರಷ್ಟೇ ಚಾನ್ಸ್ಏಷ್ಯನ್ ಗೇಮ್ಸ್ ನಲ್ಲಿ ಏನಿದು ಟ್ವಿಸ್ಟ್?

ಕ್ರಿಕೆಟ್ ಜಗತ್ತಿನಲ್ಲಿ ದಿ ಗ್ರೇಟೆಸ್ಟ್ ರೈವಲ್ರಿ ಅಂದ್ರೆ ಅದು ಇಂಡಿಯಾ-ಪಾಕಿಸ್ತಾನ ಮ್ಯಾಚಸ್. ವ್ಯೂವರ್​ಶಿಪ್​ನಲ್ಲೂ ನಂಬರ್ 1 ಸ್ಥಾನದಲ್ಲೇ ಇರುತ್ತೆ. ಹೀಗಿದ್ರೂ ಎರಡೂ ತಂಡಗಳು ದೊಡ್ಡ ದೊಡ್ಡ ಟೂರ್ನಮೆಂಟ್​ಗಳಲ್ಲಿ ಮಾತ್ರವೇ ಮುಖಾಮುಖಿ ಆಗ್ತಿರೋದು. ಹೀಗಾಗೇ ಎಷ್ಟು ಸಾಧ್ಯವೋ ಅಷ್ಟು ಪಂದ್ಯಗಳನ್ನ ಎರಡೂ ತಂಡಗಳ ನಡುವೆ ಶೆಡ್ಯೂಲ್ ಮಾಡಲಾಗುತ್ತೆ. ಆದ್ರೆ ಈ ಸಲ ಏಷ್ಯನ್ ಗೇಮ್​ನಲ್ಲಿ ಭಾರತ-ಪಾಕ್ ಮ್ಯಾಚ್​ ಫಿಕ್ಸ್ ಮಾಡಿಲ್ಲ.

ಇದನ್ನೂ ಓದಿ : KL ಓಪನರ್.. ನಂ.3ನಲ್ಲಿ ಪಡಿಕ್ಕಲ್ – ಬೌಲಿಂಗ್ ಯುನಿಟ್ ವೀಕ್ ಆಗುತ್ತಾ?

ಜಪಾನ್‌ನ ನಾಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026ರ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ನೋಡಿ ಭಾರತ ಮತ್ತು ಪಾಕಿಸ್ತಾನ ಫ್ಯಾನ್ಸ್ ಸ್ವಲ್ಪ ಬೇಜಾರ್ ಆಗಿದ್ದಾರೆ. ಯಾಕಂದ್ರೆ ಏಷ್ಯನ್ ಗೇಮ್ಸ್‌ನಲ್ಲಿ ಈ ಸಲ ಆರಂಭಿಕ ಹಂತದಲ್ಲಿ ಎರಡೂ ತಂಡಗಳ ನಡುವೆ ಅಂದ್ರೆ ಇಂಡೋ-ಪಾಕ್ ನಡುವೆ ಯಾವುದೇ ಪಂದ್ಯ ನಡೆಯುವುದಿಲ್ಲ. ನಾರ್ಮಲಿ ಏಷ್ಯನ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲೇ ಮುಖಾಮುಖಿಯಾಗುವಂತೆ ಶೆಡ್ಯೂಲ್ ಇರ್ತಿತ್ತು. ಬಟ್ ಈ ಸಲ ನಾಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಉಭಯ ತಂಡಗಳು ಆರಂಭಿಕ ಅಥವಾ ಲೀಗ್ ಪಂದ್ಯಗಳಲ್ಲಿ ಎದುರಾಗುವುದಿಲ್ಲ. ಹೀಗಿದ್ರೂ ಎರಡೂ ತಂಡಗಳಿಗೆ ಮುಖಾಮುಖಿಯಾಗೋ ಚಾನ್ಸಸ್ ಇದೆ.

ಭಾರತ-ಪಾಕ್ ಡೈರೆಕ್ಟ್ ಫೈಟ್ ಇಲ್ಲ.. ಹೀಗಿದ್ರೂ 2 ಚಾನ್ಸ್!

ಏಷ್ಯಾದ ಟಾಪ್ ರ್ಯಾಂಕಿಂಗ್ ಟೀಮ್​ಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ. ಇನ್ನು ಅಫ್ಘಾನಿಸ್ತಾನ, ನೇಪಾಳ, ಹಾಂಗ್ ಕಾಂಗ್, ಚೀನಾ, ಜಪಾನ್, ಮಲೇಷ್ಯಾ ಮತ್ತು ಒಮಾನ್ ತಂಡಗಳು ಗ್ರೂಪ್ ಹಂತದಲ್ಲಿ ಸೆಣಸಾಡಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಬೇಕು. ಸೋ ಇಲ್ಲಿ ಅಂದ್ರೆ ಕ್ವಾರ್ಟರ್ ಫೈನಲ್-2ರಲ್ಲಿ ಭಾರತ ತಂಡವು ಆಡಿದ್ರೆ ಪಾಕಿಸ್ತಾನ ತಂಡವು ಕ್ವಾರ್ಟರ್ ಫೈನಲ್-1 ರಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಇಲ್ಲಿಯೂ ಕೂಡ ಭಾರತ ಹಾಗೇ ಪಾಕ್ ತಂಡಗಳಿಗೆ ಮುಖಾಮುಖಿ ಚಾನ್ಸಸ್ ಇಲ್ಲ. ಹೋಗ್ಲಿ ಸೆಮಿಫೈನಲ್​ನಲ್ಲಾದ್ರೂ ಫೇಸ್ ಮಾಡ್ತಾರಾ ಅಂದ್ರೆ ಅಲ್ಲೂ ಇಲ್ಲ. ಯಾಕಂದ್ರೆ ಮೊದಲ ಸೆಮಿಫೈನಲ್ ಪಂದ್ಯವು Q1 ಅಂದ್ರೆ ಪಾಕ್ ವಿನ್ ಆಗಿದ್ರೆ ಪಾಕಿಸ್ತಾನ ಮತ್ತು Q4 ವಿಜೇತರ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯವು Q2 (ಭಾರತ) ಮತ್ತು Q3 ವಿಜೇತರ ನಡುವೆ ನಡೆಯಲಿದೆ. ಹೀಗಾಗಿ ಸೆಮಿಫೈನಲ್‌ನಲ್ಲೂ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲು ಸಾಧ್ಯವಿಲ್ಲ. ಹೀಗಿದ್ರೂ ಎರಡು ಚಾನ್ಸಸ್ ಇದೆ. ಬೋತ್ ಟೀಮ್ಸ್ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಗೆದ್ದು ಫೈನಲ್ ತಲುಪಿದರೆ ಗೋಲ್ಡನ್ ಮೆಡಲ್​ಗಾಗಿ ಮುಖಾಮುಖಿ ಆಗ್ಬೋದು. ಅಕ್ಟೋಬರ್ 3 ರಂದು ನಡೆಯುವ ಚಿನ್ನದ ಪದಕದ (ಫೈನಲ್) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಕಸ್ಮಾತ್ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಸೋತರೆ ಬ್ರೋಂಜ್ ಮೆಡಲ್​ಗಾಗಿ ಎದುರು ಬದುರುಆಗ್ಬೋದು. ಸೋ ಅಲ್ಲಿಗೆ ಶೆಡ್ಯೂಲ್ ಪ್ರಕಾರ ಎಲ್ಲಿಯೂ ಡೈರೆಕ್ಟ್ ಆಗಿ ಮುಖಾಮುಖಿ ಆಗೋಕೆ ಚಾನ್ಸ್ ಇಲ್ಲ. ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳ ರಿಸಲ್ಟ್ ಮೇಲೆ ಭಾರತ-ಪಾಕ್ ಪಂದ್ಯ ನಡೆಯುತ್ತಾ ಅನ್ನೋದು ಗೊತ್ತಾಗುತ್ತೆ. ಮತ್ತೊಂದೆಡೆ ಮಹಿಳಾ ವಿಭಾಗದಲ್ಲೂ ಪುರುಷರ ತಂಡದಂತೆಯೇ ವೇಳಾಪಟ್ಟಿ ಇದ್ದು, ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಬೇಕಾದರೆ ಸೆಪ್ಟೆಂಬರ್ 22 ರಂದು ನಡೆಯುವ ಫೈನಲ್ ಅಥವಾ ಕಂಚಿನ ಪದಕದ ಪಂದ್ಯದವರೆಗೂ ಕಾಯಬೇಕಾಗುತ್ತದೆ. ಒಟ್ನಲ್ಲಿ ಬಿಗ್ ಟೂರ್ನಮೆಂಟ್ಸ್ ಅಂತಾ ಬಂದಾಗ ಭಾರತ-ಪಾಕ್ ನಡುವಿನ ಪಂದ್ಯಗಳೇ ಹೈಲೆಟ್. ಹೀಗಿದ್ರೂ ವೇಳಾಪಟ್ಟಿಯಲ್ಲಿ ಮಾತ್ರ ಡೈರೆಕ್ಟ್ ಫೈಟ್​ಗೆ ಅವಕಾಶ ನೀಡದೇ ಇರೋದೇ ಕುತೂಹಲ ಮೂಡಿಸಿದೆ.

Shantha Kumari

Leave a Reply

Your email address will not be published. Required fields are marked *