ಈ ವಾರ ಸಿನಿಮಾ ರಿಲೀಸ್ ಇಲ್ಲ – ಕಾರಣವೇನು ಗೊತ್ತಾ?

ಈ ವಾರ ಸಿನಿಮಾ ರಿಲೀಸ್ ಇಲ್ಲ – ಕಾರಣವೇನು ಗೊತ್ತಾ?

ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 5 ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ ಎಲ್ಲಾ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಬಹುತೇಕ ನಟ, ನಟಿಯರು ಮೇ 8 ರ ವರೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರೇಕ್ಷಕರಿಗೆ ಸಿನಿಮಾ ನಟರನ್ನು ನೋಡುವುದರಲ್ಲಿ ಇರುವ ಉತ್ಸಾಹ ಅವರ ಸಿನಿಮಾಗಳನ್ನು ನೋಡುವುದರಲ್ಲಿ ಇದ್ದಂತಿಲ್ಲ. ಏಕೆಂದರೆ ಕಳೆದ ತಿಂಗಳಿನಿಂದ ಬಿಡುಗಡೆಯಾಗುತ್ತಿರುವ ಏಳೆಂಟು ಸಿನಿಮಾಗಳು ಸೋಲಿನಿಂದ ಕಂಗೆಟ್ಟಿವೆ. ಹೀಗಾಗಿ ಈ ವಾರ ಒಂದೂ ಚಿತ್ರ ಬಿಡುಗಡೆಗೆ ಸಿದ್ಧವಿಲ್ಲ.

ಏಪ್ರಿಲ್ ನಲ್ಲಿ ಬಿಡುಗಡೆಯಾದ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭಾರಿ ನಷ್ಟ ಅನುಭವಿಸಿದೆ. ಈ ಹಿನ್ನೆಲೆ ಈ ವಾರ ಬಿಡುಗಡೆಯಾಗುತ್ತಿರುವ ಎಲ್ಲಾ ಸಿನಿಮಾಗಳನ್ನು ಮುಂದೂಡಲಾಗುತ್ತಿದೆ ಅಂತಾ ಚಿತ್ರ ತಂಡಗಳು ಹೇಳಿಕೆ ನೀಡಿವೆ. ಇಂಥ ಹೊತ್ತಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಕೈತುಂಬ ನಷ್ಟಖಾತ್ರಿ. ಎಲ್ಲವೂ ಸರಿಯಾಗಿದ್ದಾಗಲೇ ಸಿನಿಮಾ ಮಂದಿರಕ್ಕೆ ಜನ ಬರುತ್ತಿಲ್ಲ. ಪ್ರಚಾರದ ಜತೆ ಐಪಿಎಲ್ ಮತ್ತು ಮಳೆಯೂ ಸೇರಿಕೊಂಡಿದೆ ಎನ್ನುವುದು ಚಿತ್ರೋದ್ಯಮದ ಮಾತು

ಇದನ್ನೂ ಓದಿ: ವರಸೆ ಬದಲಿಸಿದ ‘ದಿ ಕೇರಳ ಸ್ಟೋರಿ’ ಟೀಮ್! – ತಮಿಳುನಾಡು ಸರ್ಕಾರಕ್ಕೆ ಗುಪ್ತಚರ ಇಲಾಖೆ ಹೇಳಿದ್ದೇನು?

ಕಳೆದ ವಾರ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’, ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ರಾಘು’ ಸೇರಿದಂತೆ ಕೆಲವು ಸಿನಿಮಾಗಳು ತೆರೆಕಂಡಿದ್ದವು. ಇವುಗಳಲ್ಲಿ ರಾಘವೇಂದ್ರ ಸ್ಟೋರ್ಸ್ ಹವಾ ಈ ವಾರವೂ ಮುಂದುವರಿದಿದೆ. ಚುನಾವಣೆಯ ಕಾರಣ ಬೇರೆ ಚಿತ್ರಗಳು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಈ ವಾರವೂ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ಇನ್ನೊಂದೆಡೆ ತಮಿಳು ಮೂಲದ ಪ್ಯಾನ್‌ ಇಂಡಿಯಾ ಚಿತ್ರ ‘ಪೊನ್ನಿಯಿನ್‌ ಸೆಲ್ವನ್‌’ ಅಬ್ಬರ ಜೋರಾಗಿದೆ. ಮುಂದಿನ ವಾರವೂ ಇದೇ ಸ್ಥಿತಿ ಮುಂದುವರಿಯಲಿದೆ. ಯಾವುದೇ ಚಿತ್ರತಂಡ ಇಲ್ಲಿಯವರೆಗೆ ಮೇ.12ರಂದು ಸಿನಿಮಾ ಬಿಡುಗಡೆಯನ್ನು ಘೋಷಿಸಿಲ್ಲ. ಮೇ.19ಕ್ಕೆ ‘ಡೇರ್‌ ಡೆವಿಲ್‌ ಮುಸ್ತಫಾ’ ಸೇರಿದಂತೆ ಕೆಲವೊಂದು ಸಿನಿಮಾಗಳು ಬಿಡುಗಡೆ ಕಾಣಲಿವೆ. ಅಲ್ಲಿಗೆ ಕನ್ನಡ ಚಿತ್ರರಂಗದ ಪಾಲಿಗೆ ಮೇ ಬಡತನದ ಮಾಸವೆಂದೇ ಹೇಳಬಹುದು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

suddiyaana