RCB ಕೆಣಕಿದ ಪೊಲಾರ್ಡ್ – ವಾಂಖೆಡೆಯಲ್ಲಿ ಕಾಣಲ್ಲ ರೆಡ್ ಜೆರ್ಸಿ
ಬ್ಯಾಟ್ & ಟೇಪ್ ನಲ್ಲೂ ಕೀರನ್ ಕಿರಿಕ್

2027ರ ಐಪಿಎಲ್ಗೂ ಮುನ್ನ ಫ್ರಾಂಚೈಸಿಗಳಲ್ಲಿ ಈಗಾಗ್ಲೇ ಸಾಕಷ್ಟು ಬದಲಾವಣೆಗಳು ಆಗ್ತಿವೆ. ಟೂರ್ನಮೆಂಟ್ನ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಕೂಡ ವೆಸ್ಟ್ ಇಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಅಪಾಯಿಂಟ್ ಮಾಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಹೆಡ್ ಕೋಚ್ ಆದ ಮೇಲೆ ತಮ್ಮ ಮೊದಲ ಇಂಟರ್ವ್ಯೂನಲ್ಲೇ ಪೊಲಾರ್ಡ್ ಆರ್‌ಸಿಬಿ ಅಭಿಮಾನಿಗಳನ್ನ ಕೆಣಕಿದ್ದಾರೆ. ಸಿಎಸ್ಕೆ ಫ್ಯಾನ್ಸ್ಗೂ ಟಾಂಟ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಭುವಿ Vs ಪ್ರಿನ್ಸ್ Vs ಮಯಾಂಕ್! – ಬುಮ್ರಾಗೆ ವಿಶ್ವಕಪ್ ಬ್ಯಾಕಪ್ ಯಾರು?
ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆದ್ಮೇಲೆ ಮುಂಬೈ ಇಂಡಿಯನ್ಸ್ ತಂಡದ ಪರ್ಫಾಮೆನ್ಸ್ ಫ್ಲ್ಯಾಪ್ ಆಗಿದೆ. ಌಂಡ್ ಫ್ಯಾನ್ಸ್ ಕ್ರೇಜ್ ಕೂಡ ಕಮ್ಮಿಯಾಗಿದೆ. ಇದೀಗ ಮತ್ತೆ ತಂಡವನ್ನ ಮೇಲೆತ್ತಲು ಮಾಜಿ ಆಲ್ರೌಂಡರ್ ಕೀರನ್ ಪೊಲಾರ್ಡ್ರನ್ನ ಹೆಡ್ ಕೋಚ್ ಆಗಿ ಅಂಬಾನಿ ಬ್ರಿಗೇಡ್ ನೇಮಕ ಮಾಡಿದೆ. ಕೋಚ್ ಆಗಿ ಮುಂಬೈ ಇಂಡಿಯನ್ಸ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಫಸ್ಟ್ ಇಂಟರ್ವ್ಯೂನಲ್ಲೇ ಆರ್‌ಸಿಬಿ ಮತ್ತು ಸಿಎಸ್ಕೆ ಫ್ಯಾನ್ಸ್ ಬಗ್ಗೆ ಪೊಲಾರ್ಡ್ ಮಾತನಾಡಿದ್ದಾರೆ.
ವಾಂಖೆಡೆಯಲ್ಲಿ ರೆಡ್ & ಯೆಲ್ಲೋ ಜೆರ್ಸಿ ಕಾಣಬಾರದೆಂದ ಪೊಲಾರ್ಡ್!
ಐಪಿಎಲ್ನಲ್ಲಿ ಆರ್ಸಿಬಿಗೆ ಇರೋ ಫ್ಯಾನ್ಸ್ನ ಬೇರೆ ಯಾವ ಟೀಂ ಕೂಡ ಮ್ಯಾಚ್ ಮಾಡೋಕೆ ಸಾಧ್ಯನೇ ಇಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲೂ ಟೀಂ ಇಂಡಿಯಾ ಪಂದ್ಯಗಳು ನಡೆದಾಗ ಭಾರತದ ಫ್ಯಾನ್ಸ್ ಹೇಗೆ ಅಲ್ಲಿಗೇ ಹೋಗಿ ಪಂದ್ಯಗಳನ್ನ ನೋಡ್ತಾ ಹೋಂ ಪಿಚ್ ಅನ್ನೋ ಥರ ಎನ್ಕರೇಜ್ ಮಾಡ್ತಾರೋ ಆರ್‌ಸಿಬಿ ಫ್ಯಾನ್ಸ್ ಕೂಡ ಹಾಗೇ. ಭಾರತದ ಯಾವುದೇ ಗ್ರೌಂಡ್ನಲ್ಲಿ ಆರ್‌ಸಿಬಿ ಪಂದ್ಯ ಇತ್ತು ಅಂದ್ರೆ ಅಲ್ಲಿನ ತಂಡಕ್ಕಿಂತ ಜಾಸ್ತಿ ಆರ್‌ಸಿಬಿ ಜೆರ್ಸಿ ತೊಟ್ಟ ಅಭಿಮಾನಿಗಳೇ ಕಾಣ್ತಾರೆ.. ಆರ್‌ಸಿಬಿ ಫ್ಲಾಗ್ಗಳೇ ರಾರಾಜಿಸ್ತಾ ಇರ್ತಾವೆ. ಌಂಡ್ ಆರ್‌ಸಿಬಿ ಆರ್‌ಸಿಬಿ ಅನ್ನೋ ಘೋಷ ಮುಗಿಲು ಮುಟ್ತಾ ಇರುತ್ತೆ. ಕಳೆದ ಎರಡು ವರ್ಷಗಳಲ್ಲಂತೂ ಯಶಸ್ವೀ ತಂಡಗಳಿಗೇ ಚಳ್ಳೇಹಣ್ಣು ತಿನ್ಸಿದ್ದಾರೆ. ಮುಂಬೈನ ಬಲಿಷ್ಠ ಕೋಟೆ ವಾಂಖೆಡೆಯಲ್ಲಿ, ಚೆನ್ನೈನ ಚೆಪಾಕ್ನಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಗೆದ್ದು ಬಿಗಿದ್ದಾರೆ. ಌಂಡ್ ಈ ಮೂರೂ ತಂಡಗಳು ಕಳೆದ ಎರಡು ವರ್ಷಗಳಿಂದ ಆರ್‌ಸಿಬಿ ವಿರುದ್ಧ ಒಂದೇ ಒಂದು ಪಂದ್ಯವನ್ನ ಗೆಲ್ಲೋಕಾಗಿಲ್ಲ. ಇನ್ನು ಚೆನ್ನೈ ತಂಡದ ಫ್ಯಾನ್ಸ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಂಡಕ್ಕೆ ಬೇರೆ ಗ್ರೌಂಡ್ಗಳಲ್ಲೂ ಸಪೋರ್ಟ್ ಮಾಡ್ತಾ ಇರ್ತಾರೆ. ಸೋ ಇದ್ರ ಬಗ್ಗೆಯೇ ಮಾತನಾಡಿರೋ ಪೊಲಾರ್ಡ್, 2027ರ ಐಪಿಎಲ್ನಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಜೆರ್ಸಿ ಹಾಗೂ ಬಾವುಟಗಳು ಕಾಣಿಸಬಾರದು ಎಂದಿದ್ದಾರೆ. ಹಾಗೇ ಕೇವಲ ಮುಂಬೈ ಇಂಡಿಯನ್ಸ್ ತಂಡದ ನೀಲಿ ಬಾವುಟಗಳು ಮಾತ್ರ ಹಾರಾಡಬೇಕು. ಅಭಿಮಾನಿಗಳಲ್ಲಿ ಅದೇ ಹಳೆಯ ಜಿದ್ದಾಜಿದ್ದಿನ ಜೋಶ್ ಇರ್ಬೇಕು. ಮುಂದಿನ ಆವೃತ್ತಿಯಲ್ಲಿ ಎದುರಾಳಿ ತಂಡಗಳು ವಾಂಖೆಡೆಗೆ ಬಂದಾಗ ಅವರಿಗೆ ಮುಂಬೈನ ಹಳೆಯ ಭೀತಿ ನೆನಪಾಗುವಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗೆ ಪೊಲಾರ್ಡ್ ಆರ್‌ಸಿಬಿ ಮತ್ತು ಸಿಎಸ್ಕೆಯನ್ನೇ ಟಾರ್ಗೆಟ್ ಮಾಡಿ ಈ ಹೇಳಿಕೆ ನೀಡಿದ ಬಳಿಕ ಆರ್‌ಸಿಬಿ ಜೊತೆಗಿನ ಆ ಎರಡು ಕಿರಿಕ್ಗಳು ಮತ್ತೆ ಸದ್ದು ಮಾಡ್ತಿವೆ.
ಆರ್ ಸಿಬಿ ಜೊತೆ 2 ಬಾರಿ ಕಿರಿಕ್ ಮಾಡಿಕೊಂಡಿದ್ದ ಪೊಲಾರ್ಡ್!
ಕೀರನ್ ಪೊಲಾರ್ಡ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಬಾಂಡಿಂಗ್ ಇಂದು ನಿನ್ನೆಯದಲ್ಲ. ಸುದೀರ್ಘ 16 ವರ್ಷಗಳ ಬಾಂಧವ್ಯ ಅದು. 2010 ರಲ್ಲಿ ಒಬ್ಬ ಯುವ ಆಟಗಾರನಾಗಿ ಮುಂಬೈ ಇಂಡಿಯನ್ಸ್ ಸೇರಿಕೊಂಡ ಪೊಲಾರ್ಡ್ ಸತತ 12 ವರ್ಷಗಳ ಕಾಲ ಅಂದ್ರೆ 2022ರವರೆಗೆ ತಮ್ಮ ನಿವೃತ್ತಿವರೆಗೂ ಮುಂಬೈ ಇಂಡಿಯನ್ಸ್ ಪರವೇ ಆಡಿದ್ರು. ಈಗ Head Coach ಆಗಿ ನೇಮಕಗೊಂಡಿದ್ದಾರೆ. 5 ಐಪಿಎಲ್ ಟ್ರೋಫಿ ಹಾಗೂ 2 ಚಾಂಪಿಯನ್ಸ್ ಲೀಗ್ ವಿಜೇತ ತಂಡಗಳ ಪ್ರಮುಖ ಭಾಗವಾಗಿದ್ದರು. ಹೀಗೆ ತಾವು ಮುಂಬೈ ಟೀಂ ಪ್ಲೇಯರ್ ಆಗಿದ್ದ ವೇಳೆ ಆರ್‌ಸಿಬಿ ಜೊತೆ ಕಿರಿಕ್ಗಳನ್ನೂ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಈ ಎರಡು ಗಲಾಟೆಗಳಂತೂ ಐಪಿಎಲ್ ಇತಿಹಾಸದಲ್ಲೇ ಹಾಗೇ ಉಳಿದಿವೆ.
ನಂಬರ್ 1
ಮಿಚೆಲ್ ಸ್ಟಾರ್ಕ್ ವಿರುದ್ಧ ಬ್ಯಾಟ್ ಎಸೆದಿದ್ದ ಪೊಲಾರ್ಡ್!
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಅಗ್ರೆಸ್ಸಿವ್ ಌಂಡ್ ಡೇಂಜರಸ್ ಫೈಟ್ ಅಂತಾನೇ ಈ ಘಟನೆಯನ್ನ ಹೇಳಲಾಗುತ್ತೆ. 2014ರಲ್ಲಿ ನಡೆದಿದ್ದ ಫೈಟ್ ಇದು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಮುಂಬೈ ನಡುವೆ ಮ್ಯಾಚ್ ನಡೀತಿತ್ತು. ಮುಂಬೈ ಬ್ಯಾಟಿಂಗ್ ವೇಳೆ ಕೀರನ್ ಪೊಲಾರ್ಡ್ ಕ್ರಿಸ್ನಲ್ಲಿದ್ದು 17ನೇ ಓವರ್ನಲ್ಲಿ ಆರ್‌ಸಿಬಿ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಬೌನ್ಸರ್ ಆಡಲು ಪೊಲಾರ್ಡ್ ಫೇಲ್ ಆಗಿದ್ರು. ಈ ವೇಳೆ ಸ್ಟಾರ್ಕ್ ಪೊಲಾರ್ಡ್ ಹತ್ತಿರ ಬಂದು ಏನೋ ಹೇಳುತ್ತಾ ಕಿಚಾಯಿಸಿದ್ರು. ಅಂದ್ರೆ ಸ್ಲೆಡ್ಜಿಂಗ್ ಮಾಡಿದ್ರು.ಈ ವೇಳೆ ಪೊಲಾರ್ಡ್ ಕೈಸನ್ನೆ ಮಾಡಿ ದೂರ ಹೋಗು ಎಂದಿದ್ರು. ನೆಕ್ಸ್ಟ್ ಬಾಲ್ ಬೌಲಿಂಗ್ ಮಾಡಲು ಸ್ಟಾರ್ಕ್ ಓಡಿ ಬರುತ್ತಿದ್ದಾಗ, ಪೊಲಾರ್ಡ್ ಕ್ರೀಸ್‌ನಿಂದ ಪಕ್ಕಕ್ಕೆ ಸರಿದ್ರು. ಈ ವೇಳೆ ರನ್-ಅಪ್ ನಿಲ್ಲಿಸದ ಸ್ಟಾರ್ಕ್, ಕೋಪದಿಂದ ಮುಂದೆ ಬಂದು ನೇರವಾಗಿ ಪೊಲಾರ್ಡ್ ಮೇಲೇ ಬಾಲ್ ಎಸೆದ್ರು. ಈ ವೇಳೆ ಸಿಟ್ಟಾದ ಪೊಲಾರ್ಡ್, ತಮ್ಮ ಕೈಯಲ್ಲಿದ್ದ ಬ್ಯಾಟನ್ನು ಸ್ಟಾರ್ಕ್ ಕಡೆಗೆ ಜೋರಾಗಿ ಎಸೆದಿದ್ರು. ಅದೃಷ್ಟವಶಾತ್ ಬ್ಯಾಟ್ ಸ್ಟಾರ್ಕ್ ಮೈಗೆ ತಾಗದೆ ಅವರ ಪಕ್ಕದಲ್ಲಿ ಬಿದ್ದಿತು. ತಕ್ಷಣ ಫೀಲ್ಡಿಂಗ್ನಲ್ಲಿದ್ದ ಕ್ರಿಸ್ ಗೇಲ್ ಮತ್ತು ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ರು. ಈ ಕಿರಿಕ್‌ನಿಂದಾಗಿ ಪೊಲಾರ್ಡ್‌ಗೆ ಪಂದ್ಯದ ಸಂಭಾವನೆಯ ಶೇ. 75 ಹಾಗೂ ಸ್ಟಾರ್ಕ್‌ಗೆ ಶೇ. 50 ರಷ್ಟು ದಂಡ ವಿಧಿಸಲಾಗಿತ್ತು.
ನಂಬರ್ 2
ಬಾಯಿಂಗ್ ಪ್ಲಾಸ್ಟರ್ ಅಂಟಿಸಿಕೊಂಡು ಫೀಲ್ಡಿಂಗ್ ಮಾಡಿದ್ದ ಪೊಲಾರ್ಡ್!
ಇನ್ನು 2015ರಲ್ಲಿ ಕೀರನ್ ಪೊಲಾರ್ಡ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಇನ್ನೊಂದು ಕೀಟಲೆ ಮಾಡಿದ್ರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡಿಫ್ರೆಂಟಾಗಿ ಪ್ರೊಟೆಸ್ಟ್ ಮಾಡಿದ್ರು. ಆಗಿದ್ದೇನಂದರೆ ಆರ್‌ಸಿಬಿ ಇನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಕ್ರಿಸ್ ಗೇಲ್ ಅವರನ್ನು ಕೆಣಕಲು ಮತ್ತು ಕಾನ್ಸಂಟ್ರೇಷನ್ ಹಾಳು ಮಾಡೋಕೆ ಪೊಲಾರ್ಡ್ ಕಂಟಿನ್ಯುಯಸ್ ಆಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಆನ್-ಫೀಲ್ಡ್ ಅಂಪೈರ್‌ಗಳು ಪೊಲಾರ್ಡ್ ಹತ್ತಿರಕ್ಕೆ ಹೋಗಿ ಮಾತನಾಡುವುದನ್ನು ನಿಲ್ಲಿಸಿ, ಸುಮ್ಮನಿರಬೇಕು ಅಂತಾ ವಾರ್ನಿಂಗ್ ಕೊಟ್ಟಿದ್ರು. ಅಂಪೈರ್ ಎಚ್ಚರಿಕೆಯಿಂದ ಬೇಸತ್ತ ಪೊಲಾರ್ಡ್, ತಕ್ಷಣವೇ ಡಗೌಟ್‌ಗೆ ಹೋಗಿ ಬಾಯಿಗೆ ದಪ್ಪನೆಯ ಸೆಲೋಟೇಪ್ (ಡಕ್ ಟೇಪ್) ಅಂಟಿಸಿಕೊಂಡು ಮರಳಿ ಮೈದಾನಕ್ಕೆ ಬಂದು ಫೀಲ್ಡಿಂಗ್ ಮಾಡಲು ಮುಂದಾದ್ರು. ಬಾಯಿಗೆ ಟೇಪ್ ಹಾಕಿಕೊಂಡಿದ್ದ ಪೊಲಾರ್ಡ್ ದೃಶ್ಯ ಟಿವಿಯಲ್ಲಿ ಟೆಲಿಕಾಸ್ಟ್ ಆದ ಬೆನ್ನಲ್ಲೇ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು, ಕಾಮೆಂಟೇಟರ್‌ಗಳು ಮತ್ತು ಮುಂಬೈ ತಂಡದ ಕೋಚ್ ರಿಕಿ ಪಾಂಟಿಂಗ್ ಸೇರಿ ಎಲ್ಲರೂ ಜೋರಾಗಿ ನಗಲು ಪ್ರಾರಂಭಿಸಿದರು. ತಮ್ಮದೇ ಟೀಂ ಪ್ಲೇಯರ್ಸ್ ಜೊತೆ ಮಾತನಾಡಬೇಕಾದಾಗ ಟೇಪ್ ಸ್ವಲ್ಪ ಬಿಡಿಸಿ ಮಾತನಾಡಿ, ಮತ್ತೆ ಅಂಟಿಸಿಕೊಳ್ಳುತ್ತಿದ್ದರು. ಕೊನೆಗೆ ಅವರು ಬೌಲಿಂಗ್ ಮಾಡಲು ಬರುವಾಗ ಮಾತ್ರ ಆ ಟೇಪ್ ತೆಗೆದಿದ್ರು. ಹೀಗೆ ಆರ್‌ಸಿಬಿ ವಿರುದ್ಧದ ಪಂದ್ಯಗಳೆಂದರೆ ಕೀರನ್ ಪೊಲಾರ್ಡ್ ಯಾವಾಗ್ಲೂ ಈ ಥರದ್ದೇ ಹೈ-ವೋಲ್ಟೇಜ್ ಡ್ರಾಮಾ ಮತ್ತು ಜಗಳಗಳಿಗೆ ಕಾರಣವಾಗುತ್ತಿದ್ದರು. ಈಗ ಮುಂಬೈ ತಂಡಕ್ಕೆ ಹೆಡ್ಕೋಚ್ ಆದ ಬೆನ್ನಲ್ಲೇ ಜೆರ್ಸಿ ಮತ್ತು ಬಾವುಟಗಳ ವಿಚಾರ ತೆಗೆದು ಟಾಂಟ್ ಕೊಟ್ಟಿದ್ದಾರೆ. ಆದ್ರೆ ಪೊಲಾರ್ಡ್ ಈ ರೀತಿ ಎಷ್ಟೇ ಸ್ಟೇಟ್ಮೆಂಟ್ಸ್ ಪಾಸ್ ಮಾಡಿದ್ರೂ ಆರ್‌ಸಿಬಿ ಫ್ಯಾನ್ಸ್ನಂತೂ ತಡೆಯೋಕಾಗಲ್ಲ. ಬಹುಶಃ ನೆಕ್ಸ್ಟ್ ಸೀಸನ್ಗೆ ಪೊಲಾರ್ಡ್‌ಗೆ ಟಾಂಟ್ ಕೊಡ್ಬೇಕು ಅಂತಾನೇ ಆರ್‌ಸಿಬಿ ಅಭಿಮಾನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಾಂಖೆಡೆ ಸ್ಟೇಡಿಯಮ್ಗೆ ಹೋದ್ರೂ ಅಚ್ಚರಿ ಪಡ್ಬೇಕಿಲ್ಲ.

ನೋಡಿರಿ

