ಇನ್ಮುಂದೆ ಅಪಾರ್ಟ್‌ಮೆಂಟ್‌ನಲ್ಲಿ ಲುಂಗಿ, ನೈಟಿ ಧರಿಸುವಂತಿಲ್ಲ! – ಹೊಸ ರೂಲ್ಸ್ ನೋಡಿ ತಬ್ಬಿಬ್ಬಾದ ನಿವಾಸಿಗಳು
ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆ ಪಡೆಯುವುದೇ ದೊಡ್ಡ ತಲೆನೋವಾಗಿದೆ. ಒಂದು ಕಡೆಯಲ್ಲಿ ಬಾಡಿಗೆ ದರ ಹೆಚ್ಚಾದರೆ, ಇನ್ನೂ ಕೆಲವು ಕಡೆ ಬಾಚುಲರ್ಸ್ ಗಳಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ, ಮಾಂಸಹಾರಿಗಳಿಗೆ ಮನೆ ನೀಡುವುದಿಲ್ಲ ಅಂತಾ ಮನೆ ಮಾಲೀಕರು ಇರಾದೆ ತೆಗೆಯುತ್ತಾರೆ. ಇದೀಗ ಇಲ್ಲೊಂದು ಅಪಾರ್ಟ್‌ಮೆಂಟ್ ನ ಮಾಲೀಕನೊಬ್ಬ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿರುವವರು ಪುರುಷರು ಲುಂಗಿ ಧರಿಸಬಾರದು. ಮಹಿಳೆಯರು ನೈಟಿ ಧರಿಸಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಪ್ರಭುದೇವ – ಎರಡನೇ ಪತ್ನಿ ಹಿಮಾನಿಗೆ ಹೆಣ್ಣು ಮಗು
ಗ್ರೇಟರ್ ನೋಯ್ಡಾದ ಸೆಕ್ಟರ್ ಫಿ-2ನಲ್ಲಿರುವ ಅಪಾರ್ಟ್‌ಮೆಂಟ್ ಮಾಲೀಕ ಈ ಹೊಸ ನಿಯಮ ಜಾರಿಗೆ ತಂದಿದ್ದು. ಅಪಾರ್ಟ್‌ಮೆಂಟ್‌ನ ನಿವಾಸಿಗಳು ಸಾಮಾನ್ಯ ಪ್ರದೇಶ, ಉದ್ಯಾನವನ, ಕಾರಿಡಾರ್ ಪ್ರದೇಶಗಳಲ್ಲಿ ಮಹಿಳೆಯರು ನೈಟಿಗಳನ್ನು ಪುರುಷರು ಲುಂಗಿಗಳನ್ನು ಧರಿಸಬೇಡಿ ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ.
‘ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ನಿವಾಸಿಗಳು ಓಡಾಡುವ ವೇಳೆ ನಿಮ್ಮ ವರ್ತನೆ ಹಾಗೂ ಧರಿಸುವ ವಸ್ತ್ರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ನಿಮ್ಮ ವರ್ತನೆಯ ಬಗ್ಗೆಯಾಗಲಿ ನಿಮ್ಮ ಬಟ್ಟೆಯ ಬಗ್ಗೆಯಾಗಲಿ ಯಾರೂ ಕೂಡ ಆಕ್ಷೇಪಿಸಲು ಅವಕಾಶ ನೀಡಬಾರದು. ನಿಮ್ಮ ಮಕ್ಕಳು ಕೂಡ ನಿಮ್ಮಿಂದ ಕಲಿಯುತ್ತಾರೆ. ಆದ್ದರಿಂದ ನಿಮ್ಮ ಫ್ಲ್ಯಾಟ್‌ನಿಂದ ಹೊರಗೆ ತಿರುಗಾಡುವಾಗ ಲುಂಗು ಹಾಗೂ ನೈಟಿಗಳನ್ನು ಧರಿಸಿ ತಿರುಗಾಡಬೇಡಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅಪಾರ್ಟ್‌ಮೆಂಟ್‌ನ ಹೊಸ ರೂಲ್ಸ್‌ಗೆ ಅಲ್ಲಿನ ನಿವಾಸಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಪಾರ್ಟ್‌ಮೆಂಟ್‌ನ ಕೆಲವು ನಿವಾಸಿಗಳು ಈ ಸೂಚನೆ ಅಗತ್ಯವಿತ್ತು ಎಂದು ಹೇಳಿದ್ದರೆ, ಇನ್ನೂ ಕೆಲವರು ಅಪಾರ್ಟ್‌ಮೆಂಟ್ ಮಾಲೀಕರ ಒಕ್ಕೂಟ (ಎಓಎ) ವ್ಯಕ್ತಿಯ ವೈಯಕ್ತಿಕ ಆಯ್ಕೆ ಹಾಗೂ ಬಟ್ಟೆಯ ಕುರಿತಾದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಓಎ ಅಧ್ಯಕ್ಷ ಸಿಕೆ ಕಾಲ್ರಾ, ‘ನಾವು ಯಾರಿಗೂ ತಾರತಮ್ಯ ಮಾಡುವ ಉದ್ದೇಶ ಹೊಂದಿಲ್ಲ. ಆದರೆ, ಯೋಗ ಮಾಡುವ ಸ್ಥಳದಲ್ಲಿ ಪುರುಷರು ಹಾಗೂ ಮಹಿಳೆಯರು ಬಹಳ ಸಡಿಲವಾದ ಬಟ್ಟೆಗಳನ್ನು ಧರಿಸಿಕೊಂಡಿರುತ್ತಾರೆ ಎನ್ನುವ ಅತಿಯಾದ ದೂರುಗಳು ಬಂದಿವೆ. ಆ ಕಾರಣದಿಂದಾಗಿ ಈ ಮಾರ್ಗಸೂಚಿ ನೀಡಿದ್ದೇವೆ. ಇದರಲ್ಲಿ ನಾವು ವಿನಂತಿ ಮಾಡಿದ್ದೇವೆಯೇ ಹೊರತು ಕಡ್ಡಾಯ ಮಾಡಿಲ್ಲ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ, ಮಹಿಳೆಯೊಬ್ಬಳು ಅಪಾರ್ಟ್‌ಮೆಂಟ್‌ನ ಹಿರಿಯ ವ್ಯಕ್ತಿಯೊಬ್ಬರು ಲುಂಗಿ ಧರಿಸಿ ಯೋಗ ಮಾಡುತ್ತಿದ್ದರು ಎಂದು ದೂರು ನೀಡಿದ್ದಾರೆ. ಮೊದಲಿಗೆ ನಾವು ಈಗಾಗಲೇ ಎಲ್ಲರಿಗೂ ಮೌಖಿಕವಾಗಿ ಸೂಚನೆಯನ್ನೂ ನೀಡಿದ್ದೇವೆ. ಆ ನಂತರವೇ ಈ ಮಾರ್ಗಸೂಚಿಯನ್ನು ಪ್ರಕಟ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಕಾಲ್ರಾ ತಿಳಿಸಿದ್ದಾರೆ.