ಭಾರತ-ಪಾಕ್ ಪಂದ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ – ಆಟಗಾರರಿಗೆ ಮಾತ್ರ ಷರತ್ತು ಏನು?

ಭಾರತ-ಪಾಕ್ ಪಂದ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ – ಆಟಗಾರರಿಗೆ ಮಾತ್ರ ಷರತ್ತು ಏನು?

2025 ರ ಏಷ್ಯಾಕಪ್ ಟೂರ್ನಿ ಟಿ-20 ಮಾದರಿಯಲ್ಲಿ ನಡೆಯುತ್ತಿದ್ದು ಸೆಪ್ಟೆಂಬರ್ 9 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಈಗ ಆಲ್ರೆಡಿ ಅನೌನ್ಸ್ ಆಗಿರೋ ಶೆಡ್ಯೂಲ್ ಪ್ರಕಾರ ಭಾರತ ಸೆಪ್ಟೆಂಬರ್ 10ರಂದು ತನ್ನ ಮೊದಲ ಪಂದ್ಯವನ್ನ ಆಡಲಿದೆ. ಆ ಬಳಿಕ ಸೆಪ್ಟೆಂಬರ್ 14 ರಂದು ಬದ್ಧವೈರಿಗಳು ಅಂತಾನೇ ಬಿಂಬಿತವಾಗಿರೋ ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ. ಇದೇ ಪಂದ್ಯದ ಬಗ್ಗೆಯೇ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ವು. ಸೋ ಏಷ್ಯಾಕಪ್​ನಲ್ಲಿ ಉಭಯ ರಾಷ್ಟ್ರಗಳು ಎದುರು ಬದುರಾಗ್ತಾವಾ ಇಲ್ವಾ ಅನ್ನೋ ಕನ್ಫ್ಯೂಷನ್ ಇತ್ತು. ಈ ಗೊಂದಲಕ್ಕೆ ತೆರೆ ಬಿದ್ದಿದೆ.

ಭಾರತ-ಪಾಕ್ ಪಂದ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್!

ಭಾರತ ಮತ್ತು ಪಾಕಿಸ್ತಾನ ನಡುವೆ ದಶಕಗಳಿಂದಲೂ ವೈಮನಸ್ಸಿದೆ. ಅದ್ರಲ್ಲೂ ಪೆಹಲ್ಗಾಮ್ ಅಟ್ಯಾಕ್ ಆದ್ಮೇಲೆ ಈ ಜಿದ್ದು ಮತ್ತಷ್ಟು ಜಾಸ್ತಿಯಾಗಿದೆ. ಭಾರತ ಸರ್ಕಾರ ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನದ ವಿರುದ್ಧ ಸಮರ ಸಾರಿತ್ತು. ಭಾರತದ ದಾಳಿಗೆ ನಲುಗಿದ್ದ ಪಾಕಿಸ್ತಾನ ಅಂತಿಮವಾಗಿ ಕದನ ವಿರಾಮಕ್ಕೆ ಅಂಗಲಾಚಿತ್ತು.  ಹೀಗಿದ್ರೂ  ಭಾರತ ಸರ್ಕಾರ ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆಗೆ ಮುಂದಾಗಿರಲಿಲ್ಲ. ಹೀಗಾಗಿ ಉಭಯ ದೇಶಗಳ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಕ್ರೀಡಾ ಸಚಿವಾಲಯ ಬದ್ಧವೈರಿಗಳ ಕಾಳಗಕ್ಕೆ ಹಸಿರು ನಿಶಾನೆ ತೋರಿಸಿದೆ.

ಭಾರತ-ಪಾಕ್ ಪಂದ್ಯಕ್ಕೆ ಅಸ್ತು!

ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ

ಐಸಿಸಿ ಮತ್ತು ಏಷ್ಯಾಕಪ್​ನಂತ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿ

ಲೆಜೆಂಡ್ಸ್ ಲೀಗ್ ​ನಲ್ಲಿ ಭಾರತ ಸೀನಿಯರ್ಸ್ ತಂಡ ಪಾಕ್ ವಿರುದ್ಧ ನಿರಾಕರಣೆ

ಭಾರತ-ಪಾಕಿಸ್ತಾನ ಈ ಹಿಂದೆಯಂತೆ ಯಾವುದೇ ದ್ವಿಪಕ್ಷೀಯ ಸರಣಿ ಆಡಲ್ಲ

ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಈ ನಿಲುವನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ

ಭಾರತ ತಂಡವು ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿ ಆಡಲ್ಲ

ಯಾವುದೇ ಪಂದ್ಯಾವಳಿ ಅಥವಾ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಹೋಗುವುದಿಲ್ಲ

ಪಾಕಿಸ್ತಾನ ತಂಡಕ್ಕೂ ಭಾರತದಲ್ಲಿ ಆಡಲು ಅವಕಾಶ ನೀಡುವುದಿಲ್ಲ

ಏಷ್ಯಾಕಪ್ ಬಹುರಾಷ್ಟ್ರೀಯ ಪಂದ್ಯಾವಳಿಯಾಗಿರುವುದರಿಂದ ಪೈಪೋಟಿ

ಯಾವುದೇ ಪಾಕಿಸ್ತಾನಿ ಆಟಗಾರ ಯಾವುದೇ ಸ್ಪರ್ಧೆಗಾಗಿ ಭಾರತಕ್ಕೆ ಬರುವಂತಿಲ್ಲ

ಯಾವುದೇ ಭಾರತೀಯ ಆಟಗಾರ ಪಾಕಿಸ್ತಾನಿ ನೆಲಕ್ಕೆ ಕಾಲಿಡಲು ಸಾಧ್ಯವಿಲ್ಲ

ಉಭಯ ರಾಷ್ಟ್ರಗಳ ಆಟಗಾರರು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಹೋರಾಟ

ಅಲ್ಲಿಗೆ ಏಷ್ಯಾಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗೋದು ಫಿಕ್ಸ್ ಆಗಿದೆ. ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಿದ್ರೆ ಟೂರ್ನಿಯಲ್ಲಿ ಒಟ್ಟಾರೆಯಾಗಿ 3 ಪಂದ್ಯಗಳಲ್ಲಿ ಮುಖಾಮುಖಿಯಾಗೋ ಚಾನ್ಸಸ್ ಇದೆ.

Shantha Kumari