ಏರ್ ಶೋ ನೋಡಲು ಕಾಯುತ್ತಿದ್ದವರಿಗೆ ಶಾಕ್ –RCB ಕಾಲ್ತುಳಿತದ ಎಫೆಕ್ಟ್ ಇದಕ್ಕೆ ಕಾರಣ!

ಏರ್ ಶೋ ನೋಡಲು ಕಾಯುತ್ತಿದ್ದವರಿಗೆ ಶಾಕ್ –RCB ಕಾಲ್ತುಳಿತದ ಎಫೆಕ್ಟ್ ಇದಕ್ಕೆ ಕಾರಣ!

ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯೆಂದರೆ ದಸರಾ ಏರ್ ಶೋ. ಆದರೆ, ಈ ಬಾರಿ ಮೈಸೂರಿಗೆ, ಹಾಗೂ ಮೈಸೂರಿಗೆ ಬಂದವರಿಗೆ ರಾಜ್ಯ ಸರ್ಕಾರ ಶಾಕ್ ಕೊಡಲಿದೆ. ಯಾಕೆಂದರೆ, ಮೈಸೂರು ದಸರಾ ಏರ್ ಶೋಗೆ ಉಚಿತ ಪ್ರವೇಶವಿಲ್ಲ.

ಇದನ್ನೂ ಓದಿ:ಮೈಸೂರು ದಸರಾದಲ್ಲಿ ವೈಭವದ ದೀಪಾಲಂಕಾರ! – ಈ ಬಾರಿ 136 ಕಿಮೀ ರಸ್ತೆ, 118 ವೃತ್ತಗಳಿಗೆ ಲೈಟಿಂಗ್ಸ್‌!

RCB ವಿಜಯೋತ್ಸವದ ಕಾಲ್ತುಳಿತದ ಪರಿಣಾಮದಿಂದ ರಾಜ್ಯ ಸರ್ಕಾರ ಸಾಕಷ್ಟು ಪಾಠ ಕಲಿತಿದೆ. ಹೀಗಾಗಿ ಮೈಸೂರು ದಸರಾದಲ್ಲೂ ಎಚ್ಚರಿಕೆಯ ಕ್ರಮ ಕೈಗೊಂಡಿದೆ. ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿಯೇ ದಸರಾ ಏರ್ ಶೋಗೆ ನಡೆಸಲು ತಯಾರಿ ಶುರುವಾಗಿದೆ. ಆದರೆ ಏರ್ ಶೋ ಉಚಿತವಾಗಿ ನೋಡೋಣ ಎಂದು ಕಾದಿದ್ದ ಜನರಿಗೆ ಸರ್ಕಾರ  ಶಾಕ್ ಕೊಟ್ಟಿದೆ. ಏರ್ ಶೋಗೆ ಈ ಬಾರಿ ಉಚಿತ  ಪ್ರವೇಶ ಇರುವುದಿಲ್ಲ .

ಮೈಸೂರಿನ ಬನ್ನಿಮಂಟಪದ ಟಾರ್ಚ್ ಲೈಟ್ ಮೈದಾನದಲ್ಲಿ ವಿಜಯದಶಮಿ ದಿನದಂದು ನಡೆಯುವ ಏರ್ ಶೋ ವೀಕ್ಷಣೆಗೆ ಪ್ರವೇಶ ದರ ನಿಗದಿ ಮಾಡಲಾಗುತ್ತಿದೆ. ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ಇಷ್ಟು ವರ್ಷ ನಡೆದ ಏರ್ ಶೋ ತಾಲೀಮು ವೀಕ್ಷಣೆಗೆ ಉಚಿತ ಪ್ರವೇಶವಿತ್ತು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಿ ಮೈದಾನದೊಳಗೆ ಉಚಿತವಾಗಿ ಪ್ರವೇಶ ನೀಡಲಾಗುತ್ತಿತ್ತು. ಆದರೆ ಈ ವರ್ಷ ಏರ್ ಶೋ ವೀಕ್ಷಣೆಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆರ್.ಸಿ.ಬಿ ವಿಜಯೋತ್ಸವದಲ್ಲಿ ಆದ ಅನಾಹುತಕ್ಕೆ ಎಚ್ಚೆತ್ತುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಅರಮನೆಯೊಳಗಿನ ಜಂಬೂಸವಾರಿ ಮೆರವಣಿಗೆ ಹಾಗೂ  ಬನ್ನಿಮಂಟಪದ ಟಾರ್ಚ್ ಲೈಟ್ ಮೈದಾನದ ಏರ್ ಶೋ ನಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ದಸರಾ ಏರ್ ಶೋನಲ್ಲಿ ಸಹಸ್ರಾರು ಜನರು ಭಾಗವಹಿಸುತ್ತಾರೆ. ಆ ವೇಳೆ ಜನಸಂದಣಿಯಿಂದ ಕಾಲ್ತುಳಿತ ದಂತಹ ಅಹಿತಕರ ಘಟನೆ ಸಂಭವಿಸದಂತೆ ಏರ್ ಶೋಗೆ ಪ್ರವೇಶ ದರ ನಿಗದಿ ಮಾಡಲಾಗಿದೆ. ಟಿಕೆಟ್ ದರ ಸೇರಿದಂತೆ ಇತರೆ ವಿವರವನ್ನು ಶೀಘ್ರದಲ್ಲೇಪ್ರಕಟಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತ ರೆಡ್ಡಿ ಹೇಳಿದ್ದಾರೆ.

Sulekha