ರಾಜ್ಯದಲ್ಲಿ ಪೊಲೀಸರಿಗೆ ರಜೆ ಘೋಷಣೆ ಮಾಡಲ್ಲ – ಹೆಚ್ಚುವರಿ ರಜೆಗಳನ್ನ ಯಾರಿಗೂ ಕೊಡ್ತಿಲ್ಲ

ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಕಾರ್ಮೋಡ ಸೃಷ್ಟಿಯಾಗಿದೆ. ಭಾರತದ ಆಪರೇಷನ್ ಸಿಂಧೂರ್ ದಾಳಿಯಿಂದ ತತ್ತರಿಸಿ ಹೋಗಿರುವ ಪಾಕ್, ಗಡಿಯಲ್ಲಿ ಪ್ರಚೋದನಾಕಾರಿ ಗುಂಡಿನ ದಾಳಿ ನಡೆಸುತ್ತಿದೆ. ಇತ್ತ ಪಾಕ್ನಿಂದ ಮಿಸೈಲ್ ದಾಳಿ ಹಿನ್ನೆಲೆಯಲ್ಲಿ ಕೇಂದ್ರದಿಂದ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರತಿಯೊಂದು ರಾಜ್ಯಕ್ಕೂ ಎಚ್ಚರಿಕೆಯ ಸಂದೇಶ ನೀಡಲಾಗಿದೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಈ ಬಗ್ಗೆ ಮಾತನಾಡಿ.. ಸೂಕ್ಷ್ಮ ಪರಿಸ್ಥಿತಿ ಇರೋದ್ರಿಂದ ಪೊಲೀಸರಿಗೆ ರಜೆ ಘೋಷಣೆ ಮಾಡಲ್ಲ. ಹೆಚ್ಚುವರಿ ರಜೆಗಳನ್ನ ಯಾರಿಗೂ ಕೊಡ್ತಿಲ್ಲ. ಗಡಿಯಲ್ಲಿ ಈಗಾಗಲೇ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ಷ್ಮ ಸನ್ನಿವೇಶ ಯಾವಾಗ ನಾರ್ಮಲ್ ಆಗುತ್ತೋ ಗೊತ್ತಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಗಡಿ ಪ್ರದೇಶ ಹಾಗೂ ಕರಾವಳಿ ಪ್ರದೇಶಗಳಲ್ಲಿ ಸೆಕ್ಯೂರಿಟಿ ಹೆಚ್ಚಿಸಲಾಗಿದೆ. ಯುದ್ಧದ ಸನ್ನಿವೇಶದಲ್ಲಿ ಟೈಟ್ ಇರುತ್ತದೆ. ಮಂಗಳೂರು, ಉತ್ತರ ಕನ್ನಡದಲ್ಲಿ ಹೆಚ್ಚು ಸೆಕ್ಯೂರಿಟಿ ಇರುತ್ತದೆ. ನೌಕಾ ಸೇನೆಯ ಜೊತೆಗೆ ಪೊಲೀಸರು ಕೂಡ ಭದ್ರತೆಯನ್ನ ನೋಡಿಕೊಳ್ತಾರೆ. ಹೀಗಾಗಿ ಪೊಲೀಸರಿಗೆ ರಜೆ ಘೋಷಣೆ ಮಾಡಲ್ಲ. ಹಾಗೂ ಹೆಚ್ಚುವರಿ ರಜೆಗಳನ್ನ ಯಾರಿಗೂ ಕೊಡ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.