ವಿಧಾನಸಭೆ ಎಲೆಕ್ಷನ್ ಮುಗಿಯುವವರೆಗೂ ಬಿಬಿಎಂಪಿಗಿಲ್ಲ ಚುನಾವಣೆ ! – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್

ವಿಧಾನಸಭೆ ಎಲೆಕ್ಷನ್ ಮುಗಿಯುವವರೆಗೂ ಬಿಬಿಎಂಪಿಗಿಲ್ಲ ಚುನಾವಣೆ ! – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್

ಬಿಬಿಎಂಪಿ ಚುನಾವಣೆಯನ್ನು ಹೇಗಾದ್ರೂ ಮಾಡಿ ಮುಂದೂಡಬೇಕು ಎಂದು ಸರ್ಕಸ್‌ ಮಾಡ್ತಿದ್ದ ಸರ್ಕಾರಕ್ಕೆ ಈಗ ದೊಡ್ಡ ರಿಲೀಫ್‌ ಸಿಕ್ಕಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಬಿಬಿಎಂಪಿಗೆ ಚುನಾವಣೆ ನಡೆಸದಿರಲು ಸುಪ್ರೀಂ ಕೋರ್ಟ್‌ನಿಂದಲೇ ಈಗ ರಾಜ್ಯ ಸರ್ಕಾರಕ್ಕೆ ರಿಲೀಫ್‌ ಸಿಕ್ಕಿದೆ.  ಬಿಬಿಎಂಪಿ ಚುನಾವಣೆಗೆ ಕಾಲವಕಾಶ ಕೋರಿ  ಸರ್ಕಾರ ಈ ಹಿಂದೆಯೇ ಅರ್ಜಿ ಸಲ್ಲಿಸಿತ್ತು. ಇದೀಗ ಸರ್ಕಾರ ಅಂದುಕೊಂಡಂತೆ ಕಾಲವಕಾಶ ಸಿಕ್ಕಿದೆ. ಎಪ್ರಿಲ್, ಮೇ ತಿಂಗಳಿಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಾದ ನಂತರವೇ ಬೃಹತ್ ಬೆಂಗಳೂರು ಪಾಲಿಕೆಯ ಚುನಾವಣೆ ನಡೆಯಲಿದೆ.

ಇದನ್ನೂ ಓದಿ :   ‘ತೆನೆ’ ಇಳಿಸುವುದು ನಿಶ್ಚಿತ, ‘ಕೈ’ ಹಿಡಿಯುವುದು ಖಚಿತ – ವೈಎಸ್‌ವಿ ದತ್ತ ಸ್ಪಷ್ಟನೆ

ವಾರ್ಡ್‌ ಪುನರ್‌ವಿಂಗಡಣೆ, ವಾರ್ಡ್‌ಗಳಲ್ಲಿ ಮೀಸಲಾತಿ ನಿಗದಿ ವಿಚಾರದಲ್ಲಿ ತಾಂತ್ರಿಕ ಲೋಪಗಳನ್ನು ಮುಂದಿಟ್ಟುಕೊಂಡೇ ರಾಜ್ಯ ಸರ್ಕಾರ ಚುನಾವಣೆ ಮುಂದೂಡಿಕೆಗೆ ಪ್ರಯತ್ನಪಡುತ್ತಲೇ ಇತ್ತು. ಆದರೆ ಈಗ ವಾರ್ಡ್‌ ಮೀಸಲಾತಿಯ ಬಗ್ಗೆ ವರದಿ ನೀಡಲು ಮಾ.31 ರವರೆಗೆ ಸುಪ್ರೀಂಕೋರ್ಟ್ ಕಾಲಾವಕಾಶ ನೀಡಿದೆ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ನಿಗದಿ ಮಾಡಲು ಕಾಲಾವಕಾಶ ನೀಡಿದ್ದು, ವರದಿ ಸಲ್ಲಿಸಲು ಮಾರ್ಚ್ 31,2023 ರವರೆಗೆ ಕಾಲಾವಕಾಶ ನೀಡಿದೆ. ನ್ಯಾ. ಎಸ್. ಅಬ್ದುಲ್ ನಜೀರ್ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರಿದ್ದ ಪೀಠ ಈ ಆದೇಶ ನೀಡಿದೆ.

ವಿಧಾನಸಭೆ ಚುನಾವಣೆಯ ತಯಾರಿಯಲ್ಲಿರುವ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ನಡೆಸಲು ಆಸಕ್ತಿಯಿರಲಿಲ್ಲ. ಹೀಗಾಗಿಯೇ ಮೂರು ತಿಂಗಳು ಕಾಲವಕಾಶ ಕೋರಿ ಅರ್ಜಿ ಸಲ್ಲಿಸಿತ್ತು.

suddiyaana