ಪಾಕ್ ನಂತೆ ಬಾಂಗ್ಲಾಗೂ ಇಲ್ಲ IPL – ಹಿಂದೂ ವಿರೋಧಿಗಳಿಗೆ ಸೈಲೆಂಟ್ ಶಾಕ್!
ಫ್ರಾಂಚೈಸಿಗಳಿಗೆ ಸೂಚನೆ ನೀಡಿತ್ತಾ BCCI?
ಈ ಬಾರಿಯ ಐಪಿಎಲ್-2025 ಮೆಗಾ ಹರಾಜು ಸಖತ್ ಥ್ರೀಲ್ ಕೊಟ್ಟಿತ್ತು. ಯಾವ ತಂಡ ಯಾರನ್ನ ಖರೀದಿ ಮಾಡುತ್ತೆ ಅಂತ ಜನ ಕಾಯುತ್ತಾ ಕುಳಿತ್ತಿದ್ದರು.. ಟಿವಿ ಮುಂದೆ ಕುಳಿತು ಬಿಡ್ಡಿಂಗ್ ನೋಡುತ್ತಿದ್ದವರು ನಾವೇ ಪ್ರಾಂಚೈಸಿ ಆಗಿದ್ರೆ ಅವರನ್ನ, ಇವ್ರರನ್ನ ತಗೊಳ್ಳುತ್ತೇವೆ ಅಂತಾ ಚರ್ಚೆ ಮಾಡುತ್ತಿದ್ದರು.ದೇಶಿ ಹಾಗು ವಿದೇಶಿ ಆಟಗಾರರು ದುಬಾರಿ ಬೆಲೆಗೆ ಬಿಡ್ ಆಗಿದ್ದಾರೆ. ಆದರೆ, ಈ ಹರಾಜಿನಲ್ಲಿ ಬಾಂಗ್ಲಾ ಕ್ರಿಕೆಟರ್ಸ್ಗೆ ಗೇಟ್ಪಾಸ್ ನೀಡಲಾಗಿದೆ. ಬಾಂಗ್ಲಾದೇಶದ ಆಟಗಾರರಿಗೆ ಐಪಿಎಲ್ ಫ್ರಾಂಚೈಸಿಗಳು ಮಣೆ ಹಾಕಿಲ್ಲ. ಇದು ಕ್ರಿಕೆಟ್ ಗಲ್ಲಿಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದ್ದು, ಇದಕ್ಕೆ ಸಾಕಷ್ಟು ಕಾರಣಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: RCB ಹಿಂದಿ ಹೇರಿಕೆ ಮಾಡ್ತಿದ್ಯಾ? – ಸಚಿವರ ವಾರ್ನ್.. ಪಂದ್ಯಗಳು ಬ್ಯಾನ್
ಈ ಬಾರಿ ಮೆಗಾ ಹರಾಜಿನಲ್ಲಿ ಬಾಂಗ್ಲಾದೇಶದ ಒಬ್ಬ ಆಟಗಾರನನ್ನೂ ಬಿಡ್ ಆಗಿಲ್ಲ. ಮೆಗಾ ಹರಾಜಿನಲ್ಲಿ ಒಟ್ಟು 10 ಫ್ರಾಂಚೈಸಿಗಳು 639.15 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೂ ಬಾಂಗ್ಲಾದೇಶದ ಯಾವುದೇ ಆಟಗಾರನಿಗೆ ಯಾರೂ ಒಂದು ರೂ.ಗಳನ್ನು ಹೂಡಿಕೆ ಮಾಡಲು ಮುಂದಾಗಿಲ್ಲ. ಮೆಗಾ ಹರಾಜಿನಲ್ಲಿ ಒಟ್ಟು 182 ಆಟಗಾರರನ್ನು ಖರೀದಿಸಲಾಗಿದ್ದು, ಇದರಲ್ಲಿ ಬಾಂಗ್ಲಾದೇಶದ ಒಬ್ಬ ಆಟಗಾರನೂ ಸೇರಿಲ್ಲ ಎಂಬುದನ್ನು ಅಚ್ಚರಿಯ ವಿಷಯ. ಬಾಂಗ್ಲಾದೇಶದ ಒಟ್ಟು 12 ಆಟಗಾರರು ಮೆಗಾ ಹರಾಜಿಗೆ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಕೇವಲ ಇಬ್ಬರು ಆಟಗಾರರನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ಈ ಇಬ್ಬರು ಆಟಗಾರರನ್ನು ಬಿಡ್ ಮಾಡಕು ಐಪಿಎಲ್ ಫ್ರಾಂಚೈಸಿಗಳು ಮುಂದಾಗಿಲ್ಲ. ಹೀಗಾಗಿ ಪಾಕಿಸ್ತಾನದ ನಂತರ ಬಾಂಗ್ಲಾದೇಶದ ಯಾವುದೇ ಆಟಗಾರ ಕೂಡ ಐಪಿಎಲ್ 2025ರಲ್ಲಿ ಆಡುತ್ತಿಲ್ಲ.
ಪಾಕ್ ನಂತ್ರ ಬಾಂಗ್ಲಾ ಐಪಿಎಲ್ನಿಂದ ಔಟ್
ಐಪಿಎಲ್ 2008ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನದ ಕ್ರಿಕೆಟಿಗನೊಬ್ಬ ಆಡಿದ್ದರು. ಇದಾದ ನಂತರ 2008 ಆವೃತ್ತಿಯೇ ಕೊನೆಯದಾಗಿತ್ತು. ಇದಾದ ಬಳಿಕ ಪಾಕಿಸ್ತಾನದ ಕ್ರಿಕೆಟಿಗರನ್ನು ಐಪಿಎಲ್ಗೆ ಕರೆದೊಯ್ಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಭಾರತದೊಂದಿಗೆ ಹದಗೆಟ್ಟಿರುವ ಸಂಬಂಧದಿಂದಾಗಿ ಪಾಕ್ ಕ್ರಿಕೆಟಿಗರ ಐಪಿಎಲ್ ವೃತ್ತಿಜೀವನವನ್ನು ಸಹ ಕೊನೆಗೊಳಿಸಿತು. ಈಗ ಬಾಂಗ್ಲಾದೇಶದ ಆಟಗಾರರಿಗೂ ಇಂತಹದೆ ಪರಿಸ್ಥಿತಿ ಎದುರಾಗಿದೆ.
ಬಾಂಗ್ಲಾ ಕ್ರಿಕೆಟರ್ಸ್ಗಳನ್ನ ಯಾಕೆ ಖರೀದಿ ಮಾಡಿಲ್ಲ ಅನ್ನೋದಕ್ಕೆ ಸಾಕಷ್ಟು ಕಾರಣವಾಗಿದೆ. ಮೊದಲ ಕಾರಣ ಬಾಂಗ್ಲಾ ಪೇಯರ್ಸ್ ನೆಟ್ಟಗೆ ಆಡುತ್ತಿಲ್ಲ, ಪ್ರತಿಭೆಗಳ ಕೊರತೆಯಿದೆ. ಎರಡನೆಯ ಕಾರಣವೆಂದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು NOC ನೀಡಲು ಹಿಂದೇಟು ಹಾಕುತ್ತಿದೆ. 3 ನೇ ಕಾರಣ ಬಾಂಗ್ಲಾದೇಶವು ಐಪಿಎಲ್ ನಡುವೆ ಸರಣಿಯನ್ನು ಆಯೋಜಿಸುತ್ತದೆ. ಐಪಿಎಲ್ ನಡುವೆ ತನ್ನ ಆಟಗಾರರನ್ನು ಹಿಂದಕ್ಕೆ ಕರೆಯುತ್ತದೆ ಅನ್ನೋ ಕಾರಣಕ್ಕೆ ಐಪಿಎಲ್ ತಂಡ ಬಾಂಗ್ಲಾದೇಶದ ಕ್ರಿಕೆಟಿಗರನ್ನು ಆಯ್ಕೆ ಮಾಡದಿರಬಹುದು.ಇನ್ನು ಮುಸ್ತಾಫಿಜುರ್ ಕಳೆದ ಋತುವಿನಲ್ಲಿ CSK ಪರ ಉತ್ತಮ ಪ್ರದರ್ಶನ ನೀಡಿದ್ದರು, ಆದರೆ ಅವರು IPL ಅನ್ನು ಮಧ್ಯದಲ್ಲಿಯೇ ಬಿಟ್ಟಿದ್ದು ಕೂಡ ಒಂದು ಕಾರಣ..ಎಲ್ಲದ್ದಕ್ಕಿಂತ ಇಂಪಾರ್ಟೆಂಟ್ ಅಂದ್ರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರ.. ಇದೇ ಕಾರಣಕ್ಕೆ ಐಪಿಎಲ್ ಪ್ರಾಂಚೈಸಿ ಬಾಂಗ್ಲಾದೇಶಿ ಕ್ರಿಕೆಟಿಗರನ್ನು ಯಾವುದೇ ತಂಡ ಖರೀದಿಸಿಲ್ಲ ಅನ್ನೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಅನ್ನು ಕಾರಣದಿಂದಲೇ ಪಾಕಿಸ್ತಾನದ ಯಾವೊಬ್ಬ ಆಟಗಾರನಿಗೂ ಐಪಿಎಲ್ ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಅದೇ ರೀತಿ ಇದೀಗ ಹಿಂದೂಗಳನ್ನು ವಿರೋಧಿಸುತ್ತಿರುವ ಬಾಂಗ್ಲಾದೇಶಕ್ಕೆ ಇದು ಕೇಂದ್ರ ಸರ್ಕಾರ ಪರೋಕ್ಷವಾಗಿ ಟಾಂಗ್ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಒಂದ್ಕಡೆ ಪಾಕ್ ಜೊತೆ ಸೇರಿ ಹಿಂದೂಗಳನ್ನ ಹಿಂಸೆ ಮಾಡುತ್ತಿವುದಕ್ಕೆ ಬಿಸಿಸಿಐ ಬಾಂಗ್ಲಾ ಕ್ರಿಕೆಟರ್ಸ್ನ ಖರೀದಿ ಮಾಡಿಲ್ಲ ಅಂತಾ ಜನ ಚರ್ಚೆ ಮಾಡುತ್ತಿದ್ದರೆ.. ನಾವು ಹರಾಜಿನ ಸುತ್ತಿಗೆ ಬಂದರೂ ನಮ್ಮನ್ನು ಬೇಕೆಂತಲೇ ಖರೀದಿಸಿಲ್ಲ ಎಂದು ಬಾಂಗ್ಲಾದೇಶದ ಆಟಗಾರರು ಅಳಲು ತೊಡಿಕೊಳ್ಳುತ್ತಿದ್ದಾರೆ. ನಮ್ಮ ಪವರ್ ಏನು ಅಂತ ಬಾಂಗ್ಲಾಗೆ ಚಿಕ್ಕ ಚಮಕ್ ಕೊಟ್ಟಿದೆ ಭಾರತ.