IPLನಲ್ಲಿ ಆಡಲ್ಲ AUS ಪ್ಲೇಯರ್ಸ್? – RCBಗೆ ಕೈಕೊಟ್ರಾ ಡೇವಿಡ್ & ಜೋಶ್?
12 ತಿಂಗಳು.. ಹೇಗಿದೆ ಟ್ರೋಫಿ ಟಾರ್ಗೆಟ್?

ಐಪಿಎಲ್ನಲ್ಲಿ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಪ್ಲೇಯರ್ಸ್ ಎಲ್ರೂ ಆಡ್ತಾರೆ. ಅದ್ರಲ್ಲೂ ಆಸ್ಟ್ರೇಲಿಯಾ ನ್ಯಾಷನಲ್ನ ಟೀಮ್ನ ಆಲ್ಮೋಸ್ಟ್ ಎಲ್ಲಾ ಆಟಗಾರರು ಇರ್ತಾರೆ. ಆದ್ರೆ 2027ರ ಐಪಿಎಲ್ನಲ್ಲಿ ಕಾಂಗರೂನಾಡಿನ ಬಿಗ್ ಪ್ಲೇಯರ್ಗಳೇ ಮಿಸ್ ಆಗ್ಬೋದು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ ಗೆಲ್ಲಲು ಭುವಿ ರೆಡಿ – ಸೆಲೆಕ್ಟರ್ಸ್ ಕೈಯಲ್ಲಿ ಫೈನಲ್ ಟಿಕೆಟ್!
2027ರ ಐಪಿಎಲ್‌ನಿಂದ ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಹೊರಗುಳಿಯೋ ಸಾಧ್ಯತೆ ಜಾಸ್ತಿ ಇದೆ. ಈ ಬಗ್ಗೆ ಅಲ್ಲಿನ ಹೆಡ್ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರೇ ಮಾಹಿತಿ ನೀಡಿದ್ದಾರೆ. ವರ್ಕ್ ಲೋಡ್ ಮ್ಯಾನೇಜ್ಮೆಂಟ್ ಕಾರಣಕ್ಕೆ ಇಂಥಾದ್ದೊಂದು ಬಿಗ್ ಡಿಸಿಷನ್ ಮಾಡಿದ್ದಾರೆ. ಮೊದಲನೇದಾಗಿ
ಆಸೀಸ್ ಟೀಂ ಫುಲ್ ಬ್ಯುಸಿ!
ಮುಂದಿನ 12 ತಿಂಗಳುಗಳಲ್ಲಿ 20 ಟೆಸ್ಟ್ ಪಂದ್ಯ, 14 ಸೀಮಿತ ಓವರ್ ಗಳ ಪಂದ್ಯ
2027ರ ಐಪಿಎಲ್ ಮುಗಿದ ತಕ್ಷಣವೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್
2027ರ ಜೂನ್ 9 ರಿಂದ ಜೂನ್ 13 ರವರೆಗೆ ಲಂಡನ್ ನಲ್ಲಿ ಫೈನಲ್ ಪಂದ್ಯ
ಜೂನ್ 18 ರಿಂದ ಆಗಸ್ಟ್ 2 ರವರೆಗೆ ಒಟ್ಟು 5 ಟೆಸ್ಟ್ ಪಂದ್ಯಗಳ ಆಶಸ್ ಸರಣಿ
2027ರ ಕೊನೆಯಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಗಾಗಿ ಸಿದ್ಧತೆ
ಪ್ರಮುಖ ವೇಗದ ಬೌಲರ್‌ಗಳನ್ನು ಫಿಟ್ ಆಗಿಡುವುದು ಆಸ್ಟ್ರೇಲಿಯಾ ಉದ್ದೇಶ
ಈ ಎಲ್ಲಾ ರೀಸನ್ಗಳಿಂದ ಐಪಿಎಲ್ನಲ್ಲಿ ಆಡುವ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಆಟಗಾರರಿಗೆ ನಿರ್ಬಂಧ ಹೇರೋಕೆ ಪ್ಲ್ಯಾನ್ ಸಿದ್ಧವಾಗಿದೆ. ಅದ್ರಲ್ಲೂ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಕ್ಯಾಮರಾನ್ ಗ್ರೀನ್ ಸಂಪೂರ್ಣವಾಗಿ ಮುಂದಿನ ಐಪಿಎಲ್‌ನಿಂದ ಹೊರಗುಳಿಯಬಹುದು ಅಥವಾ ಇಂತಿಷ್ಟು ಪಂದ್ಯಗಳನ್ನ ಮಾತ್ರ ಆಡ್ಬೇಕು ಅಂತಾ ಲಿಮಿಟೇಷನ್ಸ್ ಹೇರಬಹುದು. ಹಾಗಂತ ಈ ರೀತಿಯಾದ ನಿರ್ಧಾರ ಮಾಡ್ತಿರೋದು ಇದೇ ಮೊದಲೇನೂ ಅಲ್ಲ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಈ ಹಿಂದೆಯೂ (2023 ರಲ್ಲಿ) ಆಶಸ್ ಮತ್ತು WTC ತಯಾರಿಯ ಸಲುವಾಗಿ ಐಪಿಎಲ್‌ನಿಂದ ಹೊರಗುಳಿದ ಇತಿಹಾಸವಿದೆ. ಆದ್ರೆ ಈ ಆಟಗಾರರ ಆಬ್ಸೆನ್ಸ್ನಿಂದ ಐಪಿಎಲ್ ಫ್ರಾಂಚೈಸಿಗಳು ಮತ್ತು ಪರ್ಫಾಮೆನ್ಸ್ ಮೇಲೆ ಅತಿದೊಡ್ಡ ಪರಿಣಾಮ ಬೀರಲಿದೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೇ ತಗೊಂಡ್ರೆ ಕಳೆದ ಎರಡು ಸೀಸನ್ಗಳಲ್ಲಿ ಬೆಂಗಳೂರು ತಂಡ ಕಪ್ ಗೆಲ್ಲುವಲ್ಲಿ ಜೋಶ್ ಹೇಜಲ್ವುಡ್ ಮತ್ತು ಟಿಮ್ ಡೇವಿಡ್ ಪಾತ್ರ ದೊಡ್ಡದಿದೆ. ಇಬ್ರೂ ಆಸೀಸ್ ಪ್ಲೇಯರ್ಸ್. ಹಾಗೇನಾದ್ರೂ ಮುಂದಿನ ಸೀಸನ್ಗೆ ತಂಡದ ಪರ ಆಡಿಲ್ಲ ಅಂದಾಗ ಪ್ಳೇಯಿಂಗ್ 11ನಲ್ಲಿ ಬದಲಾವಣೆ ಅನಿವಾರ್ಯ ಆಗುತ್ತೆ. ಆಗ ತಂಡದ ಬ್ಯಾಲೆನ್ಸ್ ಕೂಡ ತಪ್ಪುತ್ತೆ. ಇದು ಫ್ರಾಂಚೈಸಿಗಳಿಗೂ ತಲೆಬಿಸಿಯಾಗಲಿದೆ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಯಾವ ರೀತಿಯಾದ ತೀರ್ಮಾನಗಳನ್ನ ಕೈಗೊಳ್ಳುತ್ತೆ, ಆಟಗಾರರ ನಿರ್ಧಾರ ಏನು ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

