ಬಟರ್ ಫ್ರೂಟ್ ಎಂದು ಬದನೆ ತಿಂದ ನಿವಿ.. ನಿವೇದಿತಾ ಗೌಡಗೆ ತರಕಾರಿನೇ ಗೊತ್ತಿಲ್ವಾ? – ಬೋಲ್ಡ್ ಬೆಡಗಿ ಹೊಸ ಎಡವಟ್ಟು!?

ನಿವೇದಿತಾ ಗೌಡ… ಸದಾ ಸುದ್ದಿಯಲ್ಲಿರೋ ಬೆಡಗಿ.. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೋ, ವಿಡಿಯೋ ಶೇರ್ ಮಾಡಿ, ಪಡ್ಡೆ ಹುಡುಗರ ನಿದ್ದೆಗೆಡಿಸ್ತಾ ಇದ್ದಾರೆ ನಿವಿ.. ಆದ್ರೀಗ ನಿವೇದಿತಾ ಗೌಡ ಸರಿಯಾಗೇ ಬಕ್ರಾ ಆಗಿದ್ದಾರೆ.. ಬಟರ್ ಫ್ರೂಟ್ ಅಂತಾ ಬದನೆಕಾಯಿ ತಿಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಗೊಂಬೆಯಾಗಿ ಮಿಂಚಿದ್ದ ನಿವೇದಿತಾ ಗೌಡ ಇತ್ತೀಚೆಗಂತೂ ಭಾರಿ ಸುದ್ದಿಯಲ್ಲಿದ್ದಾರೆ. ತನ್ನ ಬ್ಯೂಟಿ ಮತ್ತು ಗ್ಲಾಮರಸ್ ಲುಕ್ಗಳಿಂದ ನಿವೇದಿತಾ ವೇಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ. ಚಂದನ್ ಶೆಟ್ಟಿಯಿಂದ ಡಿವೋರ್ಸ್ ಪಡೆದ ಬಳಿಕ ನಿವಿ ಸಿಂಗಲ್ ಆಗೇ ಇದ್ದಾರೆ. ಹಾಗಂತ ಅವರ ಲೈಫ್ನಲ್ಲಿ ಎಂಜಾಯ್ಮೆಂಟ್ ಕಡಿಮೆನೂ ಆಗಿಲ್ಲ. ಡಿವೋರ್ಸ್ ಬಳಿಕ ನಿವೇದಿತಾ ಗೌಡ ಸುತ್ತಾಟ, ಅವರ ರೀಲ್ಸ್ ವಿಡಿಯೋಗಳು ಸಿಕ್ಕಾಪಟ್ಟೆ ಹೆಚ್ಚಾಗಿವೆ. ಯಾರು ಏನೇ ಹೇಳ್ಲಿ.. ಎಷ್ಟು ಬೇಕಾದ್ರೂ ಕೆಟ್ಟದಾಗಿ ಕಮೆಂಟ್ ಮಾಡ್ಲಿ.. ಟ್ರೋಲ್ ಆದ್ರೂ ಆಕೆಯದ್ದು ಡೋಂಟ್ ಕೇರ್ ಅನ್ನೋ ಮನಸ್ಥಿತಿ.. ಪ್ರತಿ ದಿನ ಒಂದಲ್ಲ ಒಂದು ರೀಲ್ಸ್ ಪೋಸ್ಟ್ ಮಾಡ್ತಾನೆ ಇರ್ತಾರೆ.. ಇದೀಗ ನಿವೇದಿತಾ ಗೌಡ ಟ್ರೋಲ್ ಪೇಜ್ಗಳಿಗೆ ಮತ್ತೊಂದು ಕಂಟೆಂಟ್ ಕೊಟ್ಟದ್ದಾರೆ. ಬಟರ್ ಫ್ರೂಟ್ ಎಂದು ಬದನೆಕಾಯಿ ತಿಂದಿದ್ದಾರೆ.
ನಿವೇದಿತಾ ಗೌಡ ಹಾಗೂ ಮಜಾಭಾರತ ಮಾಜಿ ಸ್ಪರ್ಧಿ ಪ್ರಶಾಂತ್ ಕೆಲ ದಿನಗಳ ಹಿಂದೆ ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಚಾರ್ ಮನೆಗೆ ಹೋಗಿದ್ರು. ಈ ವೇಳೆ ಫುಲ್ ಎಂಜಾಯ್ ಮಾಡಿದ್ದಾರೆ. ಧನರಾಜ್ ಆಚಾರ್ ಅವರ ಮೂಲ ಮನೆ, ದೈವದ ಸ್ಥಾನ, ತೋಟಕ್ಕೆಲ್ಲಾ ಕರ್ಕೊಂಡು ಹೋಗಿದ್ರು.. ತೋಟದಲ್ಲಿ ಸುತ್ತಾಡ್ತಿರೋ ವೇಳೆ ಅಲ್ಲೇ ಬೆಳೆದಿದ್ದ ಕೆಲ ಹಣ್ಣುಗಳನ್ನ ಕೂಡ ಸವಿದಿದ್ದಾರೆ.. ಈ ವೇಳೆ ಪ್ರಶಾಂತ್ ಹಾಗೇ ಧನರಾಜ್ ಆಚಾರ್ ಅವರ ಜಗ್ಗ ಚಿಕ್ಕ ಸರಿಯಾಗೇ ಬಕ್ರ ಮಾಡಿದ್ದಾರೆ.. ಗಿಡದಲ್ಲಿ ಬೆಳಿದ್ದ ಬದನೆಕಾಯಿಯನ್ನ ತೋರಿಸಿ.. ಇದು ಬಟರ್ ಫ್ರೂಟ್.. ತುಂಬಾನೇ ಟೇಸ್ಟ್ ಅಂತಾ ಹೇಳಿದ್ದಾರೆ.. ಬಳಿಕ ಬದನೆಕಾಯಿಯನ್ನ ಕೊಟ್ಟು ಟೇಸ್ಟ್ ಮಾಡಿ ಅಂದಿದ್ದಾರೆ… ಬದನೆಕಾಯಿ ಬೇರೆ ಬಲಿತು, ಹಳದಿ ಕಲರ್ಗೆ ಟರ್ನ್ ಆಗಿತ್ತು.. ಹೀಗಾಗಿ ಅವ್ರ ಮಾತನ್ನ ನಂಬಿ ನಿವೇದಿತಾ ತಿಂದು ಬಿಟ್ಟಿದ್ದಾರೆ.. ಟೇಸ್ಟ್ ಚೆನ್ನಾಗಿದೆ ಅಂತಾ ಹೇಳಿದ್ದಾರೆ.. ಬಳಿಕ ಇದು ಬಟರ್ ಫ್ರೂಟ್ ಅಲ್ಲ.. ಬದನೆಕಾಯಿ.. ನಿಮ್ಮನ್ನ ನಾವು ಬಕ್ರ ಮಾಡಿದ್ದು ಅಂತಾ ಹೇಳಿದ್ದಾರೆ.. ಇದ್ರಿಂದಾಗಿ ನಿವೇದಿತಾ ಗೌಡ ಶಾಕ್ ಆಗಿದ್ದಾರೆ.. ಇದ್ರ ವಿಡಿಯೋವನ್ನ ಪ್ರಶಾಂತ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಟ್ ಮಾಡಿದ್ದಾರೆ.. ಈ ವಿಡಿಯೋ ನೋಡಿದ ಅನೇಕರು ನಿವೇದಿತಾ ಗೌಡಗೆ ತರಕಾರಿ ಯಾವುದು? ಹಣ್ಣು ಯಾವುದು ಅಂತಾ ಫೈಂಡ್ ಮಾಡೋದಿಕ್ಕೂ ಬರೋದಿಲ್ವಾ? ಹೀಗೆಲ್ಲಾ ಆದ್ರೆ ತುಂಬಾ ಕಷ್ಟ ಅಂತಾ ಕಾಮೆಂಟ್ ಮಾಡಿದ್ದಾರೆ..
ಅಂದ್ಹಾಗೆ ನಿವೇದಿತಾ ಗೌಡ ಯಾವತ್ತೂ ಅಡುಗೆ ಮನೆಗೆ ಕಾಲಿಟ್ಟವರಲ್ಲ.. ಅವರಿಗೆ ಈ ತರಕಾರಿಗಳ ಬಗ್ಗೆಯೂ ಅಷ್ಟೊಂದು Knowledge ಇಲ್ಲ.. ಈಗಾಗಲೇ ಕೆಲ ಶೋ ನಲ್ಲಿ ಈ ಬಗ್ಗೆ ಹೇಳಿದ್ದುಂಟು.. ಕಾಟ್ಲೆ ಕಿಚನ್ನಲ್ಲೂ ನಿವೇದಿತಾ ಗೌಡ ಸ್ಪರ್ಧಿಸುತ್ತಿದ್ದು, ಅವ್ರಿಗೆ ಟಾಸ್ಟ್ ವೇಳೆ ತರಕಾರಿ ಯಾವುದು ಅಂತಾ ಫೈಂಡ್ ಮಾಡೋದೆ ಕಷ್ಟದ ಕೆಲಸ.. ಇನ್ನು ರಾಗಿ ಮುದ್ದೆ ತಿನ್ನೋ ವಿಚಾರವಾಗಿಯೂ ನಿವೇದಿತಾ ಗೌಡ ಅನೇಕರ ಕೆಂಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ.. ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಬಂದಿದ್ದ ನಿವೇದಿತಾ ಗೌಡ ರಾಗಿಮುದ್ದೆಯನ್ನು ಫೋರ್ಕ್ನಲ್ಲಿ ತಿಂದು ಟ್ರೋಲ್ ಗೆ ಆಹಾರ ಆಗಿದ್ರು.. ಅದಾದ ಬಳಿಕ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಉಗುರಲ್ಲಿ, ನಿವೇದಿತಾ ಗೌಡ, ಜಾಮೂನು ತಿನ್ನಿಸಿದ್ದು, ಬಾಳೆ ಹಣ್ಣು ಕಟ್ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.. ಇದೀಗ ತರಕಾರಿ ಯಾವುದು? ಹಣ್ಣು ಯಾವುದು ಅನ್ನೋ ವ್ಯತ್ಯಾಸ ಗೊತ್ತಿಲ್ಲದೇ ಬದನೆಕಾಯಿ ತಿಂದು ಸರಿಯಾಗೆ ಬಕ್ರಾ ಆಗಿದ್ದಾರೆ.. ಇನ್ನಾದ್ರೂ ನಿವಿ ಸ್ವಲ್ಪ ಸಾಮಾನ್ಯ ವಿಚಾರಗಳನ್ನ ತಿಳ್ಕೊಂಡೆ ಒಳ್ಳೆದು.. ಇಲ್ಲ ಅಂದ್ರೆ ಮತ್ತೆ ಬಕ್ರಾ ಆಗೋದು ಪಕ್ಕಾ ಅಂತಾ ಅವ್ರ ಫ್ಯಾನ್ಸ್ ಹೇಳ್ತಿದ್ದಾರೆ.

ನೋಡಿರಿ

