ನಿತೀಶ್ ಕುಮಾರ್​​ ಆರ್​​​ಜೆಡಿ ಜೊತೆಗಿನ ಮೈತ್ರಿ ಮುರಿದು ಬಿಜೆಪಿ ಜೊತೆ ಕೈಜೋಡಿಸಿದ್ಯಾಕೆ?

ನಿತೀಶ್ ಕುಮಾರ್​​ ಆರ್​​​ಜೆಡಿ ಜೊತೆಗಿನ ಮೈತ್ರಿ ಮುರಿದು ಬಿಜೆಪಿ ಜೊತೆ ಕೈಜೋಡಿಸಿದ್ಯಾಕೆ?

ರಾಜಕೀಯ ಅನ್ನೋದೆ ಹಾಗೆ..ಇಲ್ಲಿ ಯಾವುದೂ ಶಾಶ್ವತವಲ್ಲ..ಯಾರು ಎಲ್ಲಿ ಬೇಕಾದ್ರೂ ಸಲ್ಲಬಹುದು. ರಾಜಕಾರಣದದಲ್ಲಿ ಬಾಗಿಲು ಅನ್ನೋದು ಸಂಪೂರ್ಣವಾಗಿ ಬಂದ್ ಆಗೋದೆ ಇಲ್ಲ. ಒಂದು ಕಡೆ ಡೋರ್ ಬಂದ್ ಆದ್ರೂ ಇನ್ನೊಂದು ಕಡೆ ಓಪನ್​ ಆಗಿರುತ್ತೆ. ಹೀಗಾಗಿ ಅಧಿಕಾರ, ಪವರ್​​ ಎಲ್ಲಿರುತ್ತೋ ಅಲ್ಲೇ ರಾಜಕಾರಣಿಗಳಿರ್ತಾರೆ. ಎಲ್ಲಿ ಡೋರ್ ಓಪನ್​ ಆಗುತ್ತೋ ಅಲ್ಲಿ ನುಗ್ತಾರೆ. ರಾಜಕಾರಣಿಗೆ ನಿಷ್ಠೆ ಇರೋದು ಅಧಿಕಾರಕ್ಕೆ ಮಾತ್ರ. ಪಕ್ಷಕ್ಕೂ ಅಲ್ಲ..ಯಾವ ಸಂಬಂಧಕ್ಕೂ ಅಲ್ಲ.. ಮೈತ್ರಿಗಂತೂ ಅಲ್ವೇ ಅಲ್ಲ. ಈ ವಿಚಾರದಲ್ಲಿ ಬಿಹಾರ ಸಿಎಂ ನಿತೀಶ್​ ಕುಮಾರ್​ರನ್ನಂತೂ ಮೀರಿಸುವವರು ಯಾರು ಕೂಡ ಇಲ್ಲ. ಪಲ್ಟುರಾಮ್ ನಿತೀಶ್ ಕುಮಾರ್​ರಂಥಾ ರಾಜಕಾರಣಿ ಸದ್ಯ ರಾಷ್ಟ್ರ ರಾಜಕೀಯದಲ್ಲಿ ಯಾರೂ ಇಲ್ಲ ಅಂತಾನೆ ಹೇಳಬಹುದು. ಕಳೆದ 10 ವರ್ಷಗಳಲ್ಲಿ 4ನೇ ಬಾರಿಗೆ ಯೂ ಟರ್ನ್ ಹೊಡೆದಿರೋ ನಿತೀಶ್ ಕುಮಾರ್ ಈಗ ಮತ್ತೆ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ಅಷ್ಟಕ್ಕೂ ಲೋಕಸಭೆ ಚುನಾವಣೆಗೆ ಕೆಲ ತಿಂಗಳುಗಳು ಇರೋವಾಗಲೇ ನಿತೀಶ್ ಕುಮಾರ್​​ ಆರ್​​​ಜೆಡಿ ಜೊತೆಗಿನ ಮೈತ್ರಿ ಮುರಿದು ಬಿಜೆಪಿ ಜೊತೆ ಕೈಜೋಡಿಸದ್ಯಾಕೆ? ಇಂಡಿಯಾ ಮೈತ್ರಿಕೂಟ ಬಿಟ್ಟು ಎನ್​​ಡಿಎ ಸೇರಿಕೊಳ್ಳಲು ಅಸಲಿ ಕಾರಣ ಏನು? ಇದ್ರಲ್ಲಿರೋ ರಾಜಕೀಯ ಲೆಕ್ಕಾಚಾರಗಳೇನು ಅನ್ನೋ ಮಾಹಿತಿ ಇಲ್ಲಿದೆ.

2022ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಗುಡ್​​ಬೈ ಹೇಳಿ ಆರ್​ಜೆಡಿ ಜೊತೆಗೆ ಅಧಿಕಾರಕ್ಕೇರಿದಾಗ ನಿತೀಶ್​ ಕುಮಾರ್​ ಮೈಂಡ್​​ನಲ್ಲಿ ಇದ್ದಿದ್ದು 2024ರ ಲೋಕಸಭೆ ಚುನಾವಣೆ. ಮೋದಿಯನ್ನ ಕೆಳಗಿಳಿಸಿ ದೇಶದ ಪ್ರಧಾನಿಯಾಗಬೇಕೆಂಬ ಟಾರ್ಗೆಟ್ ಇಟ್ಟುಕೊಂಡೇ ನಿತೀಶ್ ಕುಮಾರ್​ಗೆ ಅಂದು ಬಿಜೆಪಿಗೆ ಸೆಡ್ಡು ಹೊಡೆದಿದ್ರು.

ಇದನ್ನೂ ಓದಿ: ಬಿಸಿಯೂಟ ಮಾಡಿ ಬಡಿಸುವ ತಾಯಂದಿರ ಸಂಬಳಕ್ಕೇ ಕತ್ತರಿ? – ನವೆಂಬರ್ ತಿಂಗಳಿಂದಲೇ ಸಂಬಳ ಪಾವತಿ ಬಾಕಿ..!

ಇಂಡಿಯಾ ಮೈತ್ರಿಕೂಟ ರಚನೆಯಲ್ಲೂ ಪ್ರಮುಖ ಪಾತ್ರವಹಿಸಿರೋದು ಕೂಡ ಇದೇ ಪಲ್ಟುರಾಮ್ ನಿತೀಶ್ ಕುಮಾರ್. ಎಲ್ಲಾ ಪ್ರತಿಪಕ್ಷಗಳನ್ನೂ ಒಟ್ಟಾಗಿಸಿ ಮಹಾಮೈತ್ರಿ ಮಾಡಿ, ಕೊನೆಗೆ ಪ್ರಧಾನಿ ಅಭ್ಯರ್ಥಿಯಾಗೋ ಬಯಕೆ ನಿತೀಶ್​ ಕುಮಾರ್​​ರದ್ದಾಗಿತ್ತು. ಅದ್ರಂತೆ ಮೈತ್ರಿಕೂಟ ರಚೆಯಾಯ್ತು. ಬಟ್ ನಿತೀಶ್​ ಕುಮಾರ್ ಅಂದುಕೊಂಡಂತೆ ಎಲ್ಲವೂ ನಡೀತಾ ಇರಲಿಲ್ಲ. ಮೊದಲಿಗೆ ಮೈತ್ರಿಕೂಟಕ್ಕೆ ಇಂಡಿಯಾ ಅಂತಾ ನಾಮಕರಣ ಮಾಡಿದ್ದೇ ​ನಿತೀಶ್​​ ಕುಮಾರ್​​ಗೆ ಸಮಾಧಾನವಿರಲಿಲ್ಲ. ಬಳಿಕ ಮಹಾಮೈತ್ರಿಯ ಸಂಚಾಲಕರಾಗೋ ಆಸೆ ನಿತೀಶ್​ಗೆ ಇತ್ತಾದ್ರೂ ಅತ್ತ ಮಮತಾ ಬ್ಯಾನರ್ಜಿ ಇದಕ್ಕೆ ಒಪ್ಪಲಿಲ್ಲ. ಲೋಕಸಭೆ ಚುನಾವಣೆ ಬೇರೆ ಹತ್ತಿರವಾಗ್ತಿದೆ. ಆದ್ರೆ ಇಂಡಿಯಾ ಮೈತ್ರಿಕೂಟದೊಳಗೆ ಇನ್ನೂ ಕೂಡ ಸೀಟು ಹಂಚಿಕೆ ನಡೆದಿಲ್ಲ. ಸೀಟು ಹಂಚಿಕೆ ಬಗ್ಗೆ ತೀರ್ಮಾನಕ್ಕೆ ಸಭೆಯೇ ಸೇರಿಲ್ಲ. ಇವೆಲ್ಲದರ ನಡುವೆಯೇ ಇತ್ತ ಬಿಹಾರ ರಾಜಕೀಯದಲ್ಲೂ ಒಂದಷ್ಟು ಬೆಳವಣಿಗೆಯಾಗೋಕೆ ಶುರುವಾಯ್ತು. ತಮ್ಮ ಪಾರ್ಟ್ನರ್​ ಆಗಿದ್ದ ಆರ್​ಜೆಡಿ ಜೊತೆಗೆ ಕಿರಿಕ್ ಶುರುವಾಗಿ ಬಿಡುತ್ತೆ. ಆರ್​​ಜೆಡಿಯ ಕೆಲ ಸಚಿವರು ತಮ್ಮ ಗಮನಕ್ಕೆ ತರದೆ ಪ್ರಮುಖ ನಿರ್ಧಾರಗಳನ್ನ ಕೈಗೊಳ್ತಿದ್ದಾರೆ ಅನ್ನೋದು ನಿತೀಶ್ ಕುಮಾರ್ ಪಿತ್ತ ನೆತ್ತಿಗೇರಿಸಿತ್ತು. ಅದ್ರಲ್ಲೂ ಲಾಲೂ ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಕುಟುಂಬ ರಾಜಕೀಯ ವಿಚಾರದಲ್ಲು ಸಿಎಂ ನಿತೀಶ್ ಕುಮಾರ್​ಗೆ ಟಾಂಗ್ ಕೊಟ್ಟು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ರು. ಈ ವೇಳೆ ಬಿಜೆಪಿ ನಿತೀಶ್ ಕುಮಾರ್​ ಬೆಂಬಲಕ್ಕೆ ನಿಂತಿತ್ತು. ಲಾಲೂ ಪುತ್ರಿ ಸಿಎಂ ಬಳಿ ಕ್ಷಮೆಯಾಚಿಸಬೇಕು ಅಂತಾ ಆಗ್ರಹಿಸಿತ್ತು. ನಿತೀಶ್​ ಕುಮಾರ್​​​ ವಿರುದ್ಧ ಮೈತ್ರಿ ನಾಯಕರಿಂದ ವಾಗ್ದಾಳಿಯಾಗುತ್ತೆ ಅನ್ನುವಾಗಲೆಲ್ಲಾ ಬಿಜೆಪಿ ಜೆಡಿಯು ನಾಯಕನ ಬೆಂಬಲಕ್ಕೆ ನಿಲ್ತಾ ಇತ್ತು. ಕೇಸರಿ ಕಲಿಗಳು ಮಾತ್ರ ನಿತೀಶ್ ವಿರುದ್ಧವಾಗಿ ಒಂದೇ ಒಂದು ಸ್ಟೇಟ್​ಮೆಂಟ್ ನೀಡ್ತಾ ಇರಲಿಲ್ಲ. ಇವೆಲ್ಲವೂ ಹೈಕಮಾಂಡ್​​ನಿಂದಲೇ ಬಂದ ಸೂಚನೆಗಳಾಗಿದ್ವು. ಜೆಡಿಯು ನಾಯಕನ ಸಪೋರ್ಟ್​ಗೆ ನಿಲ್ಲುವಂತೆ ಮೇಲಿನಿಂದಲೇ ಬಿಹಾರ ಬಿಜೆಪಿ ನಾಯಕರಿಗೆ ಆದೇಶ ಬಂದಿತ್ತು. ಈ ಮೂಲಕ ಬಿಜೆಪಿ ಕೂಡ ನಿತೀಶ್​ ಕುಮಾರ್​​ಗೆ ಪರೋಕ್ಷವಾಗಿ ಮೆಸೇಜ್ ಪಾಸ್ ಮಾಡಿತ್ತು.

ಇದ್ರ ಜೊತೆಗೆ ಸರ್ಕಾರದಲ್ಲಿದಲ್ಲಿ ಡಿಸಿಎಂ ತೇಜಸ್ವಿ ಯಾದವ್ ಡಾಮಿನೆನ್ಸ್ ಕೂಡ ಹೆಚ್ಚಾಗುತ್ತೆ. 2023ರ ನವೆಂಬರ್​ನಲ್ಲಿ ತೇಜಸ್ವಿ ಯಾದವ್ ಭವಿಷ್ಯದ ಮುಖ್ಯಮಂತ್ರಿ ಅನ್ನೋ ಪೋಸ್ಟರ್​ಗಳು ಬಿಹಾರದ ಬೀದಿಗಳಲ್ಲಿ ಕಾಣಿಸಿಕೊಳ್ತವೆ. ಆರ್​ಜೆಡಿ ಜೊತೆಗಿನ ಮೈತ್ರಿಯೂ ವರ್ಕೌಟ್​ ಆಗ್ತಿಲ್ಲ..ಇತ್ತ ಇಂಡಿಯಾ ಮೈತ್ರಿಕೂಟದಲ್ಲೂ ಕೂಡ ಅಂದುಕೊಂಡಂತೆ ನಡೀತಾ ಇಲ್ಲ.. ಹೀಗಾಗಿ ತಾವು ಪ್ರಧಾನಿಯಾಗೋದಂತೂ ಸಾಧ್ಯವೇ ಇಲ್ಲ ಅನ್ನೋದು ಗ್ಯಾರಂಟಿಯಾಗುತ್ತಲೇ ಕೆಲ ದಿನಗಳಿಂದ ತಮ್ಮ ಬೆನ್ನುಜ್ಜುತ್ತಿರೋ ಬಿಜೆಪಿಯತ್ತ ಪಲಾಯನ ಮಾಡೋಕೆ ಮನಸ್ಸು ಮಾಡ್ತಾರೆ. ​​ಸ್ನೇಹಿತರೇ, ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಕೂಡ ಇದೆ. ನರೇಂದ್ರ ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸಬೇಕು ಅನ್ನೋ ಉದ್ದೇಶದಿಂದಲೇ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟ ರಚಿಸಿದ್ರು. ಆದ್ರೆ ಈ ಬಾರಿ ಮೋದಿಯನ್ನ ಅಲುಗಾಡಿಸೋಕೆ ಸಾಧ್ಯವಿಲ್ಲ ಅಂದ್ಮೇಲೆ ವಿಪಕ್ಷಗಳ ಮೈತ್ರಿಕೂಟದಲ್ಲಿದ್ದು ಏನು ಪ್ರಯೋಜನ ಅನ್ನೋದು ನಿತೀಶ್​ ಕುಮಾರ್ ನಿಲುವಾಗಿತ್ತಂತೆ. ಈ ವಿಚಾರವಾಗಿ ನಿತೀಶ್ ಕುಮಾರ್​​ ತಮ್ಮ ಆಪ್ತರ ಬಳಿ ಒಂದು ಮಾತು ಹೇಳಿದ್ರಂತೆ. If you can’t beat him then Join him ಅನ್ನೋದಾಗಿ. ಅಂದ್ರೆ ಇಲ್ಲಿ ಮೋದಿಯನ್ನ ಸೋಲಿಸೋಕೆ ಸಾಧ್ಯವಾಗದೆ ಇದ್ರೆ ಮೋದಿ ಜೊತೆಗೇ ಸೇರಿಕೊಳ್ಳಿ ಅನ್ನೋದಾಗಿ. ಇದೇ ನೋಡಿ ರಾಜಕೀಯ ಅಂದ್ರೆ.. ರಾಜಕೀಯದ ಅಸಲಿ ಡೆಫಿನಿಶನ್ ಇಷ್ಟರಲ್ಲೇ ಇದೆ.

ಇನ್ನು ಇಂಡಿಯಾ ಮೈತ್ರಿಕೂಟದಲ್ಲಿ ರಾಹುಲ್​ ಗಾಂಧಿಯ ರೋಲ್​ ಬಗ್ಗೆಯೂ ನಿತೀಶ್ ಕುಮಾರ್​ ಭಾರಿ ಅಸಮಾಧಾನವಿತ್ತಂತೆ. ಸಭೆ ವೇಳೆ ಇಂಪಾರ್ಟೆಂಟ್ ಡಿಸೀಶನ್​​ಗಳನ್ನೆಲ್ಲಾ ರಾಹುಲ್ ಗಾಂಧಿಯೇ ತೆಗೆದುಕೊಳ್ತಿದ್ರಂತೆ. ಇದು ಹೀಗೆ ಮುಂದುವರಿದ್ರೆ ಲೋಕಸಭೆಯಲ್ಲಿ ಬಿಜೆಪಿಗೆ ಫೈಟ್ ಕೊಡೋಕೆ ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ನಿತೀಶ್ ಕುಮಾರ್ ಬಂದಿದ್ರು. ಇದೇ ಕಾರಣಕ್ಕೆ ಬಿಹಾರದಲ್ಲಿ ರಾಹುಲ್​ ಗಾಂಧಿಯ ಯಾತ್ರೆಯಲ್ಲೂ ಪಾಲ್ಗೊಳ್ಳದೇ ಇರೋಕೆ ತೀರ್ಮಾನಿಸಿದ್ರು. ಇಷ್ಟೇ ಅಲ್ಲ, ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳ್ತಾರೆ. ಇಂಡಿಯಾ ಮೈತ್ರಿಕೂಟ ಬಿಟ್ಟು ಏಕಾಂಗಿಯಾಗಿಯೇ ಚುನಾವಣೆ ಸ್ಪರ್ಧಿಸೋಕೆ ನಿರ್ಧರಿಸಿದ್ದಾರೆ. ಎಲ್ಲರೂ ಮೋದಿಯನ್ನ ಮಣಿಸೋದಕ್ಕಿಂತ ಹೆಚ್ಚಾಗಿ ತಮ್ಮ ಪಕ್ಷ ಗೆದ್ರೆ ಸಾಕು ಅನ್ನೋ ಧಾಟಿಯಲ್ಲೇ ಯೋಚಿಸ್ತಿರೋವಾಗ ನಾನ್ಯಾಕೆ ಮೈತ್ರಿಕೂಟದಲ್ಲಿರಬೇಕು ಅನ್ನೋ ಭಾವನೆ ನಿತೀಶ್​ ಕುಮಾರ್​ಗೂ ಬಂದಿತ್ತು. ಹೀಗಾಗಿಯೇ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಬಿಜೆಪಿ ಬಾಣಲೆಗೆ ಹಾರಿದ್ದಾರೆ. ​

Shwetha M