ಇಂಗ್ಲೆಂಡ್ ಸರಣಿಗೆ ಕೊಹ್ಲಿ ಫಿಟ್ – ಮುಂಬೈ ಕ್ಯಾಪ್ಟನ್ ತಿಲಕ್ ವರ್ಮಾ?
ವೈಭವ್ ದಾಖಲೆ ಪುಡಿಗಟ್ಟಿದ ಅಮನ್

ಇಂಗ್ಲೆಂಡ್ ಸರಣಿಗೆ ಕೊಹ್ಲಿ ಫಿಟ್  –  ಮುಂಬೈ ಕ್ಯಾಪ್ಟನ್ ತಿಲಕ್ ವರ್ಮಾ?ವೈಭವ್ ದಾಖಲೆ ಪುಡಿಗಟ್ಟಿದ ಅಮನ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು..

ಟೀಮ್ ಇಂಡಿಯಾದ ಉದಯೋನ್ಮುಖ ಆಲ್-ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ಹೊರಬಿದ್ದಿದ್ದಾರೆ. ಎಡಗಾಲಿನ ಸ್ನಾಯು ಸೆಳೆತದ ಗಾಯದ ಸಮಸ್ಯೆಯ ಕಾರಣದಿಂದಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ವೇಳೆ ಅವರು ತೊಡೆಯ ನೋವಿನ ಸಮಸ್ಯೆ ಎದುರಿಸಿದ್ದರು. ಆ ಬಳಿಕ ಅವರ ಗಾಯದ ಸಮಸ್ಯೆ ಮತ್ತಷ್ಟು ಹೆಚ್ಚಾಗಿತ್ತು.

ಇದನ್ನೂ ಓದಿ: DSP ಹುದ್ದೆಗೇರಿದ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ – ಬಿಹಾರ ಸರ್ಕಾರದಿಂದ ಗೌರವಾನ್ವಿತ ಹುದ್ದೆ

ವಿರಾಟ್ ಕೊಹ್ಲಿ ಇಂಗ್ಲೆಂಡ್ ಏಕದಿನ ಸರಣಿಗೆ ಸಂಪೂರ್ಣ ಫಿಟ್ ಆಗಿ ಬೆಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆ ಪಾಸಾಗಿದ್ದಾರೆ. ವಿರಾಟ್ ಕೊಹ್ಲಿ ಜೂನ್ 22 ರಂದು ಬೆಂಗಳೂರಿನಲ್ಲಿರುವ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ಫಿಟ್ನೆಸ್ ಫಲಿತಾಂಶವೂ ಹೊರಬಿದ್ದಿದ್ದು, ಕೊಹ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದು, ಏಕದಿನ ಸರಣಿಯಲ್ಲಿ ಆಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ವಿಶ್ವ ಅಪ್ಪಂದಿರ ದಿನಕ್ಕೆ ತಮ್ಮ ತಂದೆಗೆ ಕೋಟಿ ಮೌಲ್ಯದ ಕಾರನ್ನ ಗಿಫ್ಟ್  ನೀಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಮುಗಿಸಿ ಮನೆಗೆ ಮರಳಿದ್ದ ಜೈಸ್ವಾಲ್, ತಮ್ಮ ತಂದೆಗೆ  ಐಷಾರಾಮಿ SUV Mercedes-Benz GLS ಕಾರನ್ನು ಗಿಫ್ಟ್ ಮಾಡಿದ್ದಾರೆ. ಈ ಐಷಾರಾಮಿ ಕಾರಿನ ಆರಂಭಿಕ ಎಕ್ಸ್-ಶೋರೂಂ ಬೆಲೆ ಸುಮಾರು 1.32 ಕೋಟಿಯಾಗಿದೆ.

ಬಿಹಾರ ಸರ್ಕಾರ ಟೀಂ ಇಂಡಿಯಾದ ವೇಗಿಗಳಾದ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರನ್ನು ಡಿಎಸ್‌ಪಿ ಹುದ್ದೆಗೆ ನೇಮಿಸಿದೆ. ಕ್ರೀಡಾ ಕೋಟಾದ ಅಡಿಯಲ್ಲಿ ಈ ನೇಮಕಾತಿ ನಡೆದಿದೆ. ಇವರಿಬ್ಬರ ಸೇರ್ಪಡೆಯೊಂದಿಗೆ ಡಿಎಸ್‌ಪಿ ಹುದ್ದೆಗೇರಿದ ಟೀಂ ಇಂಡಿಯಾ ಕ್ರಿಕೆಟಿಗರ ಸಂಖ್ಯೆ 8ಕ್ಕೆ ಏರಿದೆ. ಈ ಹುದ್ದೆಯು ಗಣನೀಯ ವೇತನ ಮತ್ತು ಸೌಲಭ್ಯಗಳನ್ನು ಒಳಗೊಂಡಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ, ಇನ್ನು ಮುಂದೆ ಅವರು ಬಿಹಾರ ಪೊಲೀಸ್ ಸೇವೆಗೆ ಕೊಡುಗೆ ನೀಡಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಯುವ ಬ್ಯಾಟರ್ ಅಮನ್ ರಾವ್ ಪೆರಾಲಾ ಹೊಸ ದಾಖಲೆ ನಿರ್ಮಿಸಿದ್ದಾರೆ.  ತೆಲಂಗಾಣ ಟಿ20 ಲೀಗ್‌ನಲ್ಲಿ ಇವರು ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿ ಭಾರತೀಯ ಟಿ20 ಲೀಗ್ ಇತಿಹಾಸದ ಅತಿ ವೇಗದ ಶತಕ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೆದಕ್ ಫಾಲ್ಕನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಮನ್ ರಾವ್ ಕೇವಲ 48 ಎಸೆತಗಳಲ್ಲಿ 142 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.  12 ಬೌಂಡರಿ ಮತ್ತು 13 ಸಿಕ್ಸರ್ ಸಿಡಿಸಿದ್ದಾರೆ.

ಕಳೆದ ಎರಡು ಐಪಿಎಲ್ ಸೀಸನ್‌ನಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನ ನೀಡಿದ್ದರೂ, ಫ್ರಾಂಚೈಸಿ ತನ್ನ ಕೋಚಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎನ್ನಲಾಗ್ತಿದೆ. ದೀರ್ಘಕಾಲ ಸೇವೆ ಸಲ್ಲಿಸಿರುವ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಫ್ರಾಂಚೈಸಿ ಫ್ಲೆಮಿಂಗ್‌ ಒಪ್ಪಂದವನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತೆ ಎನ್ನಲಾಗಿದೆ.

23 ವರ್ಷದ ಟಿ-ಟ್ವೆಂಟಿ ಸ್ಪೆಷಲಿಸ್ಟ್ ತಿಲಕ್ ವರ್ಮಾ ಮುಂಬೈ ಫ್ರಾಂಚೈಸಿ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ.  ಒಂದು ವೇಳೆ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರನಡೆದಿದ್ದೇ ಆದ್ರೆ, ತಿಲಕ್ ವರ್ಮಾಗೆ ಮುಂಬೈ ಇಂಡಿಯನ್ಸ್ ಸಾರಥ್ಯ ಕಟ್ಟೋದು ಪಕ್ಕಾ, ಕಳೆದೈದು ವರ್ಷಗಳಿಂದ ತಿಲಕ್, ಮುಂಬೈ ತಂಡದ ಪರ್ಮನೆಂಟ್ ಪ್ಲೇಯರ್ ಆಗಿದ್ದಾರೆ. ಹಾಗೇ ಟಿ20 ತಂಡದ ಉಪನಾಯಕನಾಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜೊತೆಗೆ ಭಾರತ A  ತಂಡ ಕ್ಯಾಪ್ಟನ್ ಆಗಿ ತ್ರಿಕೋನ ಸರಣಿ ಕೂಡ ಗೆದ್ದಿದ್ದಾರೆ.

ರೋಹಿತ್ ಶರ್ಮಾ ತನ್ನ ಬಾಡಿಗಾರ್ಡ್‌ನ ತಳ್ಳಿದ ವಿಡಿಯೋ ಸಖತ್ ವೈರಲ್ ಆಗ್ತಿದೆ.  ಅಭಿಮಾನಿಯೊಬ್ಬರು ರೋಹಿತ್ ಹತ್ತಿರ ಬರದಂತೆ ಆ ಬಾಡಿಗಾರ್ಡ್ ತಡೆಯುತ್ತಿದ್ದರು. ಇದೇ ಕಾರಣಕ್ಕೆ ರೋಹಿತ್ ಆತನನ್ನು ಪಕ್ಕಕ್ಕೆ ಸರಿಸಿ, ಆ ಅಭಿಮಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು  ಫ್ಯಾನ್ಸ್ ಮೇಲಿರೋ ಪ್ರೀತಿ ಅಂದ್ರೆ , ಇನ್ನು ಕೆಲವರು, ಬಾಡಿಗಾರ್ಡ್ ಜೊತೆ ಈ ವರ್ತನೆ ಸರಿಯಿಲ್ಲ ಎಂದು ಟೀಕಿಸುತ್ತಿದ್ದಾರೆ.

ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಜುಲೈ 1 ರಿಂದ ಶುರುವಾಗಲಿರುವ ಈ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್​ 17 ಸದಸ್ಯರುಗಳನ್ನು ಆಯ್ಕೆ ಮಾಡಿದ್ದಾರೆ. ಇನ್ನು ಈ ತಂಡದ ನಾಯಕನಾಗಿ ಯುವ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ ಕಾಣಿಸಿಕೊಳ್ಳಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಬ್ರೈಡನ್ ಕಾರ್ಸ್ ಮತ್ತು ಆಲ್ ರೌಂಡರ್ ಜೇಮಿ ಓವರ್ಟನ್ ಈ ಸರಣಿಯಿಂದ ಹೊರಗುಳಿದಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಒಂದೇ ಒಂದು ಪಂದ್ಯ ಗೆಲ್ಲದೇ ವಿಶ್ವಕಪ್‌ನಿಂದಲೇ ಔಟ್ ಆಗಿದೆ.  ಪಾಕ್ ಮಹಿಳಾ ತಂಡ ತಾವು ಗೆದ್ದರೇ ಎದುರಾಳಿಯನ್ನು ಹೇಗೆ ಕಿಚಾಯಿಸಬೇಕು, ಪಂದ್ಯ ಗೆದ್ದ ಬಳಿಕ ಸೆಲೆಬ್ರೇಷನ್‌ನಲ್ಲಿ ಯಾವ ಸ್ಟೆಪ್ ಇರಬೇಕು ಅನ್ನೋ ಕುರಿತು ಪ್ರಾಕ್ಟಿಸ್ಸ್ ಮಾಡಿಕೊಂಡಿತ್ತು. ಆದರೆ ಪಾಕಿಸ್ತಾನ ತಂಡಕ್ಕೆ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗದೆ ವಿಶ್ವಕಪ್‌ನಿಂದ ಹೊರ ಬಿದ್ದಿದೆ.ಇದೇ ಕಾರಣಕ್ಕೆ ಈಗ ಸಖತ್ ಟ್ರೋಲ್ ಆಗ್ತಿದೆ.

Kishor KV