ತಾಳಿ ಕಟ್ಟುವಾಗ ಬಯಲಾಯ್ತು ನಿತ್ಯಾ ತಾಯಿಯಾಗುವ ರಹಸ್ಯ- ಸಪ್ತಪದಿ ತುಳಿದ ಕರ್ಣನ ಮುಂದೆ ಕಠೋರ ಸತ್ಯ

ತಾಳಿ ಕಟ್ಟುವಾಗ ಬಯಲಾಯ್ತು ನಿತ್ಯಾ ತಾಯಿಯಾಗುವ ರಹಸ್ಯ- ಸಪ್ತಪದಿ ತುಳಿದ ಕರ್ಣನ ಮುಂದೆ ಕಠೋರ ಸತ್ಯ

ಕರ್ಣ ಧಾರಾವಾಹಿಯಲ್ಲಿ ಈಗ ಮದುವೆ ಸಂಭ್ರಮ ನಡೆಯುತ್ತಿದೆ. ಇದು ಮನೆಯವರಿಗೆ ಮಾತ್ರ ಸಂಭ್ರಮ. ಪ್ರೀತಿಸುವ ಮನಸುಗಳಿಗೆ ಇದೊಂದು ಅಗ್ನಿ ಪರೀಕ್ಷೆ. ನಿತ್ಯಾ ಪ್ರೀತಿಸಿದ ಯುವಕ ಕಾಣೆಯಾಗಿದ್ದಾನೆ. ನಿಧಿ ಪ್ರೀತಿಸಿದ ಕರ್ಣ ನಿತ್ಯಾಳನ್ನು ಮದುವೆಯಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ವಲ್ಲಭ ಮತ್ತು ಅಮೂಲ್ಯ ಮದುವೆ ಆಗೋಯ್ತು..! – ತಲೆತಿರುಗಿ ಬಿದ್ದ ನಂದ

ಕರ್ಣ ಹಾಗೂ ನಿಧಿ ಪ್ರೀತಿಸುತ್ತಿರುವಾಗಲೇ ಕರ್ಣ ಹಾಗೂ ನಿತ್ಯಾ ವಿವಾಹ ನೆರವೇರಿದೆ. ಈ ವಾರವೇ ವಿವಾಹ ಕಾರ್ಯ ನಡೆದಿದೆ. ಮದುವೆ ಕಾರ್ಯ ನಡೆಯುತ್ತಿರುವಾಗಲೇ ಮಹಾ ರಹಸ್ಯವೊಂದು ಬಯಲಾಗಿದೆ. ಸಪ್ತಪದಿ ತುಳಿಯುವಾಗಲೇ ನಿತ್ಯಾಳ ಪ್ರೆಗ್ನೆನ್ಸಿ ವಿಚಾರವೂ ಗೊತ್ತಾಗಿದೆ. ನಿಧಿ ಹಾಗೂ ಕರ್ಣ ಮಧ್ಯೆ ಪ್ರೀತಿ ಚಿಗುರಿತ್ತು. ಆದರೆ, ಕರ್ಣನ ತಂದೆಗೆ ಈ ವಿಚಾರ ಸಿಟ್ಟು ತರಿಸಿತ್ತು. ಹೀಗಾಗಿ ಕರ್ಣನ ಪ್ರೀತಿಯನ್ನು ಬಲಿ ಪಡೆಯಲು ಸರಿಯಾಗಿಯೇ ಕುತಂತ್ರ ರೂಪಿಸಿದ್ದ. ಕರ್ಣನ ತಂದೆ ಮದುವೆ ಮನೆಯಿಂದ ನಿತ್ಯಾಳ ಪ್ರೇಮಿ ತೇಜಸ್ ನ್ನ ಕಿಡ್ನ್ಯಾಪ್ ಮಾಡಿಸಿದ್ದಾನೆ. ತೇಜಸ್ ತಂದೆ-ತಾಯಿ ಬಳಿ ಮಾತನಾಡಿ ಈ ಬಗ್ಗೆ ರಮೇಶ್ ಮೊದಲೇ ಪ್ಲ್ಯಾನ್ ಮಾಡಿದ್ದ. ಅದು ಯಶಸ್ಸು ಕಂಡಿದೆ. ಇದರಿಂದ ನಿತ್ಯಾ ಮದುವೆ ಅರ್ಧಕ್ಕೆ ನಿಂತಿದೆ.

ತೇಜಸ್ ಓಡಿ ಹೋದ ಬಳಿಕ ನಿತ್ಯಾ ಹಾಗೂ ಆಕೆಯ ಅಜ್ಜಿ ಶಾಂತಿ ಕಂಗಾಲಾಗಿದ್ದಾರೆ. ಪ್ರತಿಯೊಬ್ಬರ ಬಳಿ ತೆರಳಿ ನನ್ನ ಮಗಳನ್ನು ಮದುವೆ ಮಾಡಿಕೊಳ್ಳಿ ಎಂದು ಶಾಂತಿ ಕೋರಿಕೊಳ್ಳುತ್ತಿದ್ದಾಳೆ. ಆದರೆ, ಯಾರೊಬ್ಬರೂ ಇದಕ್ಕೆ ರೆಡಿ ಇಲ್ಲ. ಈ ವೇಳೆ ಕರ್ಣನ ಅಜ್ಜಿ ಬಂಗಾರಿ ಘೋಷಣೆ ಒಂದನ್ನು ಮಾಡಿದಳು. ‘ಹುಡುಗನಿಗಾಗಿ ಯಾರೂ ಹುಡುಕೋದು ಬೇಡ. ಕರ್ಣನೇ ಮದುವೆ ಆಗುತ್ತಾನೆ’ ಎಂದು ಘೋಷಣೆ ಮಾಡಿದಳು. ಇದನ್ನು ಕೇಳಿ ಕರ್ಣ ಶಾಕ್ ಆಗಿದ್ದಾನೆ. ಈ ವಿಚಾರವನ್ನು ಬಂಗಾರಿ ತಲೆಯಲ್ಲಿ ತುಂಬಿದ್ದು ರಮೇಶ್. ಕರ್ಣ ಹಾಗೂ ನಿತ್ಯಾ ಮದುವೆ ನಡೆದಿದೆ. ಸಪ್ತಪದಿ ತುಳಿಯುವಾಗಲೇ ನಿತ್ಯಾಳ ಪ್ರೆಗ್ನೆನ್ಸಿ ವಿಚಾರವೂ ಬಯಲಾಗಿದೆ. ಆದರೆ, ನಿತ್ಯಾ ಗರ್ಭಿಣಿಯಾಗಿರುವುದನ್ನು ಕರ್ಣ ಎಲ್ಲರಿಗೂ ಹೇಳುತ್ತಾನಾ.. ತಾಳಿ ಕಟ್ಟಿದ ದಿನವೇ ನಿತ್ಯಾ ತಾಯಿಯಾಗುತ್ತಿರುವ ವಿಚಾರ ಗೊತ್ತಾದ ಮೇಲೆ ಕರ್ಣನ ನಿರ್ಧಾರವೇನು ಅನ್ನೋ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

Sulekha