ನಿತ್ಯಾನಂದ ಸಾವಿನ ಸುದ್ದಿಗೆ ತೆರೆ – ಸ್ವಯಂಘೋಷಿತ ದೇವಮಾನವ ಸತ್ತಿಲ್ಲ ಎಂದ ಕೈಲಾಸದ ಜನ

ನಿತ್ಯಾನಂದ ಸಾವಿನ ಸುದ್ದಿಗೆ ತೆರೆ –   ಸ್ವಯಂಘೋಷಿತ ದೇವಮಾನವ ಸತ್ತಿಲ್ಲ ಎಂದ ಕೈಲಾಸದ ಜನ

ಸ್ವಯಂಘೋಷಿತ ದೇವಮಾನವ ನಿತ್ಯಾನಂದ  ಸತ್ತಿಲ್ಲ, ಬದುಕಿದ್ದಾನೆ ಆರೋಗ್ಯವಾಗಿದ್ದಾನೆ ಎನ್ನುವ ಹೇಳಿಕೆ ಕೈಲಾಸದಿಂದ ಬಂದಿದೆ. ಇತ್ತೀಚೆಗಷ್ಟೇ ನಿತ್ಯಾನಂದನ ಸಾವಿನ ಸುದ್ದಿ ಹರಿದಾಡಿತ್ತು. ವಿವಿಧ ಆರೋಪಗಳನ್ನು ಹೊತ್ತಿದ್ದ ನಿತ್ಯಾನಂದ ದೇಶದಿಂದ ಪರಾರಿಯಾಗಿ ತನ್ನದೇ ಆದ ಕೈಲಾಸ ಎನ್ನುವ ದೇಶ ಕಟ್ಟಿಕೊಂಡು ಬದುಕುತ್ತಿದ್ದಾನೆ. ನಿತ್ಯಾನಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆಂಬ ಸುದ್ದಿ ಹರಿದಾಡಿತ್ತು. ಅದಾದ ಬಳಿಕ ಏಪ್ರಿಲ್ 1 ರಂದು ನಿತ್ಯಾನಂದ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿಯೂ ಕೇಳಿಬಂದಿತ್ತು. ಆದರೆ ಕೈಲಾಸದ ಜನರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿತ್ಯಾನಂದ ಸಾವನ್ನಪ್ಪಿಲ್ಲ ಎಂದಿದ್ದಾರೆ.

ಏಪ್ರಿಲ್​ 1 ರಂದು ನಿತ್ಯಾನಂದನ ಸಾವಿನ ಸುದ್ದಿ ಹೊರಬಿದ್ದಿದ್ದರಿಂದ ಏಪ್ರಿಲ್ ಫೂಲ್ ಮಾಡಿರಬಹುದು ಎನ್ನಲಾಗುತ್ತಿದೆ. ಶಿವರಾತ್ರಿ ಸತ್ಸಂಗದ ಸಂದರ್ಭದಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ವಿಡಿಯೋ ವೈರಲ್ ಆಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಭಾಷಣವನ್ನು ಹಠಾತ್ತನೆ ಸ್ಥಗಿತಗೊಳಿಸಲಾಯಿತು. ಅಂದಿನಿಂದ, ಯಾವುದೇ ಸತ್ಸಂಗಗಳು ನಡೆದಿಲ್ಲ, ಇದು ಅವನ ಎಲ್ಲಿದ್ದಾನೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಈ ಬೆಳವಣಿಗೆ ನಡುವೆ ನಿತ್ಯಾನಂದ ಎರಡು ದಿನಗಳ ಹಿಂದೆ ನಿಧನರಾದರು ಎಂಬ ವರದಿಗಳು ಹೊರಬಿದ್ದವು. ಕಳೆದ ಭಾನುವಾರ, ಅವರ ಸೋದರಳಿಯ ಸುಂದರೇಶ್ವರನ್ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದರು, ಅದರಲ್ಲಿ ಸ್ವಾಮಿ ನಿತ್ಯಾನಂದ ಹಿಂದೂ ಧರ್ಮವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು.

Kishor KV