‘ಲೀಡರ್ ರಾಮಯ್ಯ’ ಸಿನಿಮಾದ ಮೊದಲ ಪಾರ್ಟ್‌ನಲ್ಲಿ ನಿರೂಪ್ ಭಂಡಾರಿ ಹೀರೋ..!

‘ಲೀಡರ್ ರಾಮಯ್ಯ’ ಸಿನಿಮಾದ ಮೊದಲ ಪಾರ್ಟ್‌ನಲ್ಲಿ ನಿರೂಪ್ ಭಂಡಾರಿ ಹೀರೋ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನು ಬೆಳ್ಳಿಪರದೆಯ ಮೇಲೆ ತರಲು ಸ್ಯಾಂಡಲ್‌ವುಡ್ ಸಜ್ಜಾಗಿದೆ. ಸಿದ್ದರಾಮಯ್ಯ ಬಯೋಪಿಕ್​ಗೆ ಲೀಡರ್ ರಾಮಯ್ಯ ಎನ್ನುವ ಶೀರ್ಷಿಕೆ ಇಡಲಾಗಿದೆ ಎಂದು ತಿಳಿದುಬಂದಿದೆ. ಸತ್ಯರತ್ನಂ ಎಂಬುವವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತೆಲುಗಿನ ಖ್ಯಾತ ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಸಿದ್ದರಾಮಯ್ಯ ಪಾತ್ರದಲ್ಲಿ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:  ಶುರುವಾಯ್ತು ಸಿದ್ದರಾಮಯ್ಯ ಬಯೋಪಿಕ್​ ಕೆಲಸ – ಸಿಎಂ ಪಾತ್ರ ನಿರ್ವಹಿಸಲಿದ್ದಾರೆ ತಮಿಳಿನ ಖ್ಯಾತ ನಟ

‘ಲೀಡರ್ ರಾಮಯ್ಯ’ ಸಿನಿಮಾ ಚಾಪ್ಟರ್ 1 ಹಾಗೂ ಚಾಪ್ಟರ್​ 2 ಮೂಲಕ ತೆರೆ ಕಾಣಲಿದೆ. ಸಿದ್ದರಾಮಯ್ಯ ಅವರ ಬಾಲ್ಯ, ಕಾಲೇಜು ದಿನಗಳು, ಲಾಯರ್ ಆಗಿದ್ದ ದಿನಗಳು, ರಾಜಕೀಯಕ್ಕೆ ಬರಲು ಅವರಿಗೆ ಸ್ಫೂರ್ತಿ ನೀಡಿದ ವಿಚಾರಗಳು ಮೊದಲ ಭಾಗದಲ್ಲಿ ಇರಲಿವೆ. ಮೊದಲ ಭಾಗದಲ್ಲಿ ಸಿದ್ದರಾಮಯ್ಯ ಪಾತ್ರವನ್ನು ಕನ್ನಡದ ನಟ ನಿರೂಪ್ ಭಂಡಾರಿ ನಿರ್ವಹಿಸಲಿದ್ದಾರೆ. ಸಿದ್ದರಾಮಯ್ಯ ಲಾಯರ್ ಆದ ಬಳಿಕ ವಿಜಯ್ ಸೇತುಪತಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಯೌವನದ ಪಾತ್ರದಲ್ಲಿ ನಿರೂಪ್, ಸಿದ್ದರಾಮಯ್ಯ ಲಾಯರ್ ಆಗಿದ್ದ ದಿನಗಳ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈಗಾಗಲೇ ಈ ಕುರಿತು ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಮಾಜಿ ಸಚಿವ ಶಿವರಾಜ್ ತಂಗಡಗಿ ಮತ್ತು ಜಮೀರ್ ಅಹ್ಮಮದ್ ನೇತೃತ್ವದಲ್ಲಿ ಮಾತುಕತೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಕೂಡ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗಂಗಾವತಿ ಹಯಾತ್ ಪೀರ್ ಸಾಬ್ ಅವರ ನೇತೃತ್ವದ ಎಮ್ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹೈ ಬಜೆಟ್ನಲ್ಲಿ 50 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಲಾಗುತ್ತಿದೆ ಎಂಬುದು ಸದ್ಯಕ್ಕೆ ಸಿಕ್ಕ ಮಾಹಿತಿ.

suddiyaana