ಮೋದಿ ಅಮೆರಿಕ ಪ್ರವಾಸದ ಬೆನ್ನಲ್ಲೇ ಒಬಾಮ ಕಿಡಿ ನುಡಿ! – ಮಾಜಿ ಅಧ್ಯಕ್ಷನಿಗೆ ನಿರ್ಮಲಾ ತಿರುಗೇಟು

ಮೋದಿ ಅಮೆರಿಕ ಪ್ರವಾಸದ ಬೆನ್ನಲ್ಲೇ ಒಬಾಮ ಕಿಡಿ ನುಡಿ! – ಮಾಜಿ ಅಧ್ಯಕ್ಷನಿಗೆ ನಿರ್ಮಲಾ ತಿರುಗೇಟು

ಪ್ರಧಾನಿ ಮೋದಿ ಅಮೆರಿಕ ಪ್ರವಾಸದಿಂದ ಮರಳುತ್ತಲೇ ಎರಡೂ ದೇಶಗಳ ಮಧ್ಯೆ ಸಣ್ಣ ಕಿಡಿ ಹೊತ್ತಿಕೊಂಡಿದೆ. ಮೋದಿ ಅಮೆರಿಕದಲ್ಲಿದ್ದಾಗಲೇ ಅಲ್ಲಿನ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸಂದರ್ಶನವೊಂದರಲ್ಲಿ ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರದ ನೀತಿ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿ ನಿಲುವನ್ನ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರಗಳನ್ನ ಅಧ್ಯಕ್ಷ ಬೈಡೆನ್​ ಪ್ರಧಾನಿ ಮೋದಿ ಜೊತೆ ಪ್ರಸ್ತಾಪಿಸುವ ಅವಶ್ಯಕತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕನಾಗಲು ಒಂದೇ ಒಂದು ಮನುಷ್ಯಾಕೃತಿ ಇಲ್ಲ! – ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟ್ವೀಟಾಸ್ತ್ರ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಈ ಹೇಳಿಕೆ ಕೇಂದ್ರ ಸರ್ಕಾರವನ್ನು ಕೆರಳಿಸಿದೆ. ಈ ಬಗ್ಗೆ ಖಾರವಾಗಿಯೇ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ಬಾಂಬ್ ಹಾಕಿದವರಿಂದ ನಾವು ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ. ಮುಸ್ಲಿಂ ದೇಶಗಳ ಮೇಲೆ 26 ಸಾವಿರ ಬಾಂಬ್ ಎಸೆದವರ ಆರೋಪವನ್ನು  ನಂಬಲು ಸಾಧ್ಯವೇ ಅಂತಾ ಪ್ರಶ್ನಿಸಿದ್ದಾರೆ.

ಈ ನಡುವೆ ಒಬಾಮಾ ಹೇಳಿಕೆಗಳನ್ನು ವಿಪಕ್ಷಗಳು ಸ್ವಾಗತಿಸಿದ್ದು, ಅಮೆರಿಕ ಮಾಜಿ ಅಧ್ಯಕ್ಷರ ಬಾಯಿಂದ ಹೇಳಿಸಿಕೊಳ್ಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಾ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದಕ್ಕೆ ಬಿಜೆಪಿ ನಾಯಕ, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿದ್ದು, ನಮ್ಮ ದೇಶದೊಳಗೆ ಹಲವು ಹುಸೇನ್ ಒಬಾಮಾಗಳು ಇದ್ದಾರೆ. ಅವರನ್ನ ಮೊದಲು ನೋಡಿಕೊಳ್ಳಬೇಕು ಎಂದಿದ್ದಾರೆ.

suddiyaana