ನೀರವ್ ಮೋದಿಗೆ ಬಿಗ್ ಶಾಕ್ – BOIಗೆ 100 ಕೋಟಿ ನೀಡುವಂತೆ ಲಂಡನ್ ಕೋರ್ಟ್ ಆದೇಶ

ನೀರವ್ ಮೋದಿಗೆ ಬಿಗ್ ಶಾಕ್ – BOIಗೆ 100 ಕೋಟಿ  ನೀಡುವಂತೆ ಲಂಡನ್ ಕೋರ್ಟ್ ಆದೇಶ

ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಗೆ ದೊಡ್ಡ ಹಿನ್ನಡೆಯಾಗಿದೆ.  ಲಂಡನ್ ಹೈಕೋರ್ಟ್ ನ್ಯಾಯಾಧೀಶರು ಅವರ ವಿರುದ್ಧದ ಪ್ರಕರಣದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ತೀರ್ಪು ನೀಡಿದ್ದಾರೆ. ನೀರವ್ ಮೋದಿಗೆ 10.7 ಮಿಲಿಯನ್  ( 100 ಕೋಟಿಗೂ ಹೆಚ್ಚು) ಮೊತ್ತವನ್ನು ಬ್ಯಾಂಕಿಗೆ ಮರುಪಾವತಿಸುವಂತೆ ಲಂಡನ್ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಈ ವಿವಾದವು 2012 ರ ಜುಲೈ ತಿಂಗಳಿನದ್ದಾಗಿದೆ. ದುಬೈನಲ್ಲಿರುವ ನೀರವ್ ಮೋದಿಗೆ ಸೇರಿದ ‘ಫೈರ್‌ಸ್ಟಾರ್ ಡೈಮಂಡ್ ಎಫ್‌ಜಡ್‌ಇ’  ಕಂಪನಿಗೆ ಬ್ಯಾಂಕ್ ಆಫ್ ಇಂಡಿಯಾ ಸಾಲ ಸೌಲಭ್ಯವನ್ನು ನೀಡಿತ್ತು. ಈ ಸಾಲಕ್ಕೆ ಸಂಬಂಧಿಸಿದಂತೆ ಆಗಸ್ಟ್ 3, 2013 ರಂದು ನೀರವ್ ಮೋದಿ ವೈಯಕ್ತಿಕ ಗ್ಯಾರಂಟಿ  ನೀಡಿದ್ದರು. ಇದರರ್ಥ, ಒಂದು ವೇಳೆ ಅವರ ಕಂಪನಿ ಸಾಲ ಮರುಪಾವತಿ ಮಾಡಲು ವಿಫಲವಾದರೆ, ನೀರವ್ ಮೋದಿ ತಮ್ಮ ಸ್ವಂತ ಹಣದಿಂದ ಆ ಸಾಲವನ್ನು ತೀರಿಸಬೇಕಾಗುತ್ತದೆ.

ಇದನ್ನೂ ಓದಿ: 32 ಲಕ್ಷ ಸಾಲ.. ಹೆತ್ತವರಿಗೆ 30 ಬಾರಿ ಚಾಕು ಇರಿತ – ಶ್ವೇತಾ ಕೆನತ್ ಮಾಡಿರುವ ಪಾಪ ಕೃತ್ಯ ಅತ್ಯಂತ ಭೀಕರ..!

2018 ರ ಆರಂಭದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್   ಜೊತೆಗಿನ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಹೂಡಿಕೆ ಹಗರಣ ಬೆಳಕಿಗೆ ಬಂದ ತಕ್ಷಣ, ಬ್ಯಾಂಕ್ ಆಫ್ ಇಂಡಿಯಾ ತನ್ನ ಹಣವನ್ನು ಸುರಕ್ಷಿತವಾಗಿ ಹಿಂಪಡೆಯಲು ನೀರವ್ ಮೋದಿ ಕಂಪನಿಗೆ ನೀಡಿದ್ದ ಸಾಲವನ್ನು ತಕ್ಷಣವೇ ಮರುಪಾವತಿಸುವಂತೆ ನೋಟಿಸ್ ಜಾರಿ ಮಾಡಿತ್ತು.

ನ್ಯಾಯಾಧೀಶ ಸೈಮನ್ ಟಿಂಕ್ಲರ್ ಅವರು, ನೀರವ್ ಮೋದಿ ತಮ್ಮ ವೈಯಕ್ತಿಕ ಗ್ಯಾರಂಟಿ ಒಪ್ಪಂದದ ಪ್ರಕಾರ 4.1 ಮಿಲಿಯನ್ ಡಾಲರ್ (ಸುಮಾರು ₹38.9 ಕೋಟಿ) ಅಸಲು ಮೊತ್ತವನ್ನು ನೇರವಾಗಿ ಪಾವತಿಸಲು ಹೊಣೆಯಾಗಿದ್ದಾರೆ ಎಂದು ತೀರ್ಪು ನೀಡಿದ್ದಾರೆ. ಇದರೊಂದಿಗೆ ಬ್ಯಾಂಕಿನ ನಿಯಮಾವಳಿಗಳ ಪ್ರಕಾರ ಲೆಕ್ಕಹಾಕಲಾದ ಸಂಪೂರ್ಣ ಬಡ್ಡಿಯನ್ನು ಸೇರಿಸಿದಾಗ ಈ ಒಟ್ಟು ಮೊತ್ತವು ₹100 ಕೋಟಿಗೂ ಅಧಿಕವಾಗುತ್ತದೆ. ಬ್ಯಾಂಕಿನ ಹಣವನ್ನು ತಡೆಹಿಡಿಯಲು ತನಗೆ ಹಕ್ಕಿದೆ ಎಂದು ಸಾಬೀತುಪಡಿಸಲು ಯಾವುದೇ ಬಲವಾದ ಪುರಾವೆಗಳನ್ನು ಒದಗಿಸಲು ನೀರವ್ ಮೋದಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

Kishor KV

Leave a Reply

Your email address will not be published. Required fields are marked *