ವಯಸ್ಕರಿಗೆ ಹೋಲಿಸಿದರೆ ಮಕ್ಕಳಿಗೆ ನಿಫಾ ವೈರಸ್ ಕಂಟಕ – ಮಕ್ಕಳ ವಿಚಾರದಲ್ಲಿ ಪೋಷಕರಿಗೂ ಇರಲಿ ಎಚ್ಚರ..!

ವಯಸ್ಕರಿಗೆ ಹೋಲಿಸಿದರೆ ಮಕ್ಕಳಿಗೆ ನಿಫಾ ವೈರಸ್ ಕಂಟಕ – ಮಕ್ಕಳ ವಿಚಾರದಲ್ಲಿ ಪೋಷಕರಿಗೂ ಇರಲಿ ಎಚ್ಚರ..!

ಕೇರಳದಲ್ಲಿ ನಿಫಾ ವೈರಸ್ ಆತಂಕ ಹೆಚ್ಚಾಗಿದೆ. ಜೊತೆಗೆ ಮಕ್ಕಳ ವಿಚಾರವಾಗಿ ಪೋಷಕರು ಕಂಗಾಲಾಗಿದ್ದಾರೆ. ಮಕ್ಕಳು, ವಿಶೇಷವಾಗಿ ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಮಕ್ಕಳ ದೇಹ ಕೂಡಾ ನಿಫಾ ವೈರಸ್‌ನಂತ ಸೋಂಕುಗಳನ್ನು ವಿರೋಧಿಸಲು ಸಿದ್ಧವಾಗಿರುವುದಿಲ್ಲ. ನಿಫಾ ವೈರಸ್ ವಿರುದ್ಧ ಹೋರಾಡಲು ಕೇರಳ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.

ಇದನ್ನೂ ಓದಿ: ಕೋವಿಡ್‌ಗೆ ಹೋಲಿಸಿದರೆ ನಿಫಾ ವೈರಸ್ ಸಖತ್ ಡೇಂಜರ್ – ಲಸಿಕೆ ಅಭಿವೃದ್ಧಿಪಡಿಸಲು ಐಸಿಎಂಆರ್ ಚಿಂತನೆ

ಕೇರಳದಲ್ಲಿ ಇದುವರೆಗೆ ಇಬ್ಬರು ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. ಇನ್ನು ಕೆಲವರು ಮಾರಕ ಸೋಂಕಿನಿಂದ ಬಳಲುತ್ತಿದ್ದಾರೆ. ಇವರಲ್ಲಿ 9 ವರ್ಷದ ವಿದ್ಯಾರ್ಥಿಗೂ ಸೋಂಕು ತಗುಲಿದೆ. ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಿಫಾ ವೈರಸ್ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳನ್ನೇ ಕಾಡುತ್ತಿದೆ. ನಿಫಾ ವೈರಸ್ ಝೂನೋಟಿಕ್ ಸೋಂಕು ಆಗಿದ್ದು, ಮಕ್ಕಳು ಕೂಡಾ ಈ ವೈರಸ್ ನಿಂದ ಬಳಲುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಪೊವಾಯಿಯ ಡಾ. ಎಲ್.ಎಚ್ ಹಿರಾನಂದಾನಿ ಆಸ್ಪತ್ರೆಯ ಜನರಲ್ ಮೆಡಿಸಿನ್ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ. ನೀರಜ್ ಕುಮಾರ್ ತುಲಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಸೋಂಕು ಮಕ್ಕಳಲ್ಲಿ ಏಕೆ ಹರಡುತ್ತದೆ ಎಂಬುದನ್ನು ತಿಳಿಸಿದ್ದಾರೆ. ಹಾಗೇ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತಿಳಿಸಿದ್ದಾರೆ. ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುವವರಲ್ಲಿ ಮುಖ್ಯ ಅಂಶವೆಂದರೆ ಅವರ ಅಭಿವೃದ್ಧಿಯಾಗದ ರೋಗನಿರೋಧಕ ವ್ಯವಸ್ಥೆಗಳು. ಮಕ್ಕಳು, ವಿಶೇಷವಾಗಿ ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರ ದೇಹ ನಿಫಾ ವೈರಸ್‌ನಂತಹ ಸೋಂಕುಗಳನ್ನು ವಿರೋಧಿಸಲು ಸಿದ್ಧವಾಗಿರುವುದಿಲ್ಲ. ಮಕ್ಕಳು ತಮ್ಮ ಪೋಷಕರು, ಒಡಹುಟ್ಟಿದವರು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಹೆಚ್ಚು ದೈಹಿಕ ಸಂಪರ್ಕವನ್ನು ಹೊಂದಿರುತ್ತಾರೆ. ಈ ಹತ್ತಿರದ ದೈಹಿಕ ಸಂಪರ್ಕವು ಮನೆಗಳಲ್ಲಿ ವೈರಸ್ ಹರಡಲು ಕಾರಣವಾಗಬಹುದು. ಅಲ್ಲದೆ, ಚಿಕ್ಕ ಮಕ್ಕಳು ಸಂಪೂರ್ಣವಾಗಿ ಎಚ್ಚರ ವಹಿಸಲು ಸಾಧ್ಯವಾಗದಿರಬಹುದು. ಅವರಿಗೆ ಸೋಂಕು ತಡೆಗಟ್ಟುವ ಕ್ರಮವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಅಪಾಯವನ್ನು ಹೆಚ್ಚಿಸುತ್ತದೆ ವಯಸ್ಕರಿಗೆ ಹೋಲಿಸಿದರೆ, ಮಕ್ಕಳು ಅದೇ ಮಟ್ಟದ ಪ್ರಜ್ಞೆ ಅಥವಾ ಸೋಂಕನ್ನು ತಡೆಗಟ್ಟುವ ಕ್ರಮಗಳ ತಿಳುವಳಿಕೆಯನ್ನು ಹೊಂದಿರುವುದಿಲ್ಲ. ವೈರಸ್ ಹರಡುವುದನ್ನು ತಡೆಯಲು ಆಗಾಗ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ಇತರರಿಂದ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟಕರವಾಗಿರುತ್ತದೆ.

Sulekha